ಟ್ರೇಲರ್​ನಿಂದ ನಿರೀಕ್ಷೆ ಮೂಡಿಸಿದ ‘ಮನಸ್ಮಿತ’ ಸಿನಿಮಾ; ಅತುಲ್​ ಕುಲಕರ್ಣಿ ಜೊತೆ ಹೊಸ ಕಲಾವಿದರ ಸಂಗಮ

Edited By:

Updated on: May 23, 2022 | 3:54 PM

ಚಂದನವನದಲ್ಲಿ ಬ್ಯಾಕ್​ ಟು ಬ್ಯಾಕ್​ ಸಿನಿಮಾಗಳು ರಿಲೀಸ್​ಗೆ ರೆಡಿ ಆಗಿವೆ. ಆ ಪೈಕಿ ‘ಮನಸ್ಮಿತ’ ಚಿತ್ರ ಕೂಡ ಗಮನ ಸೆಳೆಯುತ್ತಿದೆ.

1 / 5
ಸಂಗೀತ ಪ್ರಧಾನ ಕಥಾಹಂದರ ಹೊಂದಿರುವ ‘ಮನಸ್ಮಿತ’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಈ ಸಿನಿಮಾದಲ್ಲಿ ಹೊಸ ಕಲಾವಿದರು ನಟಿಸಿದ್ದಾರೆ. ನಾಯಕನಾಗಿ ಚರಣ್​ ವಿ.ಎಸ್​. ಅಭಿನಯಿಸಿದ್ದು, ಪಲ್ಲವಿ ಪುರೋಹಿತ್​ ಹಾಗೂ ಸಂಜನಾ ದಾಸ್​ ನಾಯಕಿಯರಾಗಿದ್ದಾರೆ. ಸಂಗೀತದ ಕುರಿತಾದ ಕಥೆ ಮಾತ್ರವಲ್ಲದೇ ಇದರಲ್ಲಿ ಹಾರರ್​ ಅಂಶಗಳು ಕೂಡ ಇವೆ.

ಸಂಗೀತ ಪ್ರಧಾನ ಕಥಾಹಂದರ ಹೊಂದಿರುವ ‘ಮನಸ್ಮಿತ’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಈ ಸಿನಿಮಾದಲ್ಲಿ ಹೊಸ ಕಲಾವಿದರು ನಟಿಸಿದ್ದಾರೆ. ನಾಯಕನಾಗಿ ಚರಣ್​ ವಿ.ಎಸ್​. ಅಭಿನಯಿಸಿದ್ದು, ಪಲ್ಲವಿ ಪುರೋಹಿತ್​ ಹಾಗೂ ಸಂಜನಾ ದಾಸ್​ ನಾಯಕಿಯರಾಗಿದ್ದಾರೆ. ಸಂಗೀತದ ಕುರಿತಾದ ಕಥೆ ಮಾತ್ರವಲ್ಲದೇ ಇದರಲ್ಲಿ ಹಾರರ್​ ಅಂಶಗಳು ಕೂಡ ಇವೆ.

2 / 5

ಸಿನಿಮಾದ ಪ್ರಮುಖ ಪಾತ್ರವೊಂದರಲ್ಲಿ ಹಿರಿಯ ಕಲಾವಿದ ಅತುಲ್​ ಕುಲಕರ್ಣಿ ಅವರು ನಟಿಸಿದ್ದಾರೆ. ಸುಚೇಂದ್ರ ಪ್ರಸಾದ್​ ಅವರಂತಹ ಅನುಭವಿ ನಟರು ಕೂಡ ‘ಮನಸ್ಮಿತ’ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದಾರೆ. ಈ ಕಿರಿಯ ಕಲಾವಿದರ ಜೊತೆಗೆ ಹೊಸ ನಟರ ಸಂಗಮ ಆಗಿದೆ.

3 / 5

‘ಮನಸ್ಮಿತ’ ಚಿತ್ರಕ್ಕೆ ಅಪ್ಪಣ್ಣ ಸಂತೋಷ್​ ನಿರ್ದೇಶನ ಮಾಡಿದ್ದಾರೆ. ಎರಡು ಕಾಲಘಟ್ಟದ ಕಥೆಯನ್ನು ಈ ಸಿನಿಮಾ ಹೊಂದಿದೆ. ಇತ್ತೀಚೆಗೆ ಹಾಡುಗಳು ಮತ್ತು ಟ್ರೇಲರ್​ ಬಿಡುಗಡೆ ಮಾಡಲಾಗಿದೆ. ಆ ಮೂಲಕ ‘ಮನಸ್ಮಿತ’ ಸಿನಿಮಾ ಗಮನ ಸೆಳೆಯುತ್ತಿದೆ. ಗಾಯಕನ ಪಾತ್ರದಲ್ಲಿ ಅತುಕ್​ ಕುಲಕರ್ಣಿ ನಟಿಸಿದ್ದಾರೆ.

4 / 5

ಕೆ. ಕಲ್ಯಾಣ್ ಬರೆದಿರುವ ನಾಲ್ಕು ಹಾಡುಗಳಿಗೆ ಹರಿಕಾವ್ಯ ಅವರು ಸಂಗೀತ ಸಂಯೋಜಿಸಿದ್ದಾರೆ. ಈ ಪೈಕಿ ದೇವರ ಹಾಡಿಗೆ ಶಂಕರ್‌ ಮಹದೇವನ್ ಧ್ವನಿ ನೀಡಿರುವುದು ವಿಶೇಷ. ಕೆ.ಎಸ್. ಚಂದ್ರಶೇಖರ್ ಛಾಯಾಗ್ರಹಣ, ಮಧು ತುಂಬಕೆರೆ ಸಂಕಲನ, ಕೌರವ ವೆಂಕಟೇಶ್ ಸಾಹಸ ನಿರ್ದೇಶನ, ಕಲೈ ನೃತ್ಯ ನಿರ್ದೇಶನ ಮಾಡಿದ್ದಾರೆ.

5 / 5

ಜೂನ್​ 3ರಂದು ‘ಮನಸ್ಮಿತ’ ಸಿನಿಮಾ ಬಿಡುಗಡೆ ಆಗಲಿದೆ. ‘ಜಮುನಾ ಪ್ರೊಡಕ್ಷನ್ಸ್​’ ಮೂಲಕ ಸೀತಮ್ಮ ವಿ.ಟಿ. ಅವರು ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ದೀಪಿಕಾ ವಿ.ಎಸ್​. ಸಹ-ನಿರ್ಮಾಪಕಿ ಆಗಿದ್ದಾರೆ. ನಟ ಚರಣ್​ ಅವರು ಈ ಸಿನಿಮಾದಲ್ಲಿ ಹಲವು ಶೇಡ್​ನ ಪಾತ್ರ ನಿಭಾಯಿಸಿದ್ದಾರೆ.

Loading...
Unable to load recommendations.
Follow Us