- Kannada News Photo gallery Bagalkot RSS leader distributes Lord Ram idol along with wedding invitation to commemorate Ayodhya Ram Mandir inauguration
ಬಾಗಲಕೋಟೆ: ಮದುವೆ ಆಮಂತ್ರಣದ ಜೊತೆ ಪಂಚಲೋಹದ ಶ್ರೀರಾಮನ ವಿಗ್ರಹ ವಿತರಿಸಿದ RSS ಮುಖಂಡ
ಅಯೋಧ್ಯೆ ರಾಮ ಮಂದಿರ ಉದ್ಘಾಟನೆ ಸವಿನೆನಪಿಗಾಗಿ ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿಯ ಆರ್ಎಸ್ಎಸ್ ಮುಖಂಡರೊಬ್ಬರು ತಮ್ಮ ಮಗಳ ವಿವಾಹ ಆಮಂತ್ರಣದ ಜೊತೆಗೆ ಆಂಜನೇಯ, ಲಕ್ಷ್ಮಣ ಸಹಿತ ಪಂಚಲೋಹದ ಸೀತಾರಾಮನ ವಿಗ್ರಹವನ್ನು ವಿತರಣೆ ಮಾಡಿದ್ದಾರೆ. ಎರಡು ಸಾವಿರಕ್ಕೂ ಅಧಿಕ ಆಮಂತ್ರಣ ಪತ್ರಿಕೆ ಜೊತೆಗೆ ಈ ವಿಗ್ರಹಗಳನ್ನು ಹಂಚಿದ್ದಾರೆ.
Updated on:Feb 16, 2024 | 10:13 AM

ಅಯೋಧ್ಯೆ ರಾಮ ಮಂದಿರ ಉದ್ಘಾಟನೆ ಸವಿನೆನಪಿಗಾಗಿ ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿಯ ಆರ್ಎಸ್ಎಸ್ ಮುಖಂಡರೊಬ್ಬರು ತಮ್ಮ ಮಗಳ ವಿವಾಹ ಆಮಂತ್ರಣದ ಜೊತೆಗೆ ಆಂಜನೇಯ, ಲಕ್ಷ್ಮಣ ಸಹಿತ ಪಂಚಲೋಹದ ಸೀತಾರಾಮನ ವಿಗ್ರಹವನ್ನು ವಿತರಣೆ ಮಾಡಿದ್ದಾರೆ.

ಎರಡು ಸಾವಿರಕ್ಕೂ ಅಧಿಕ ಆಮಂತ್ರಣ ಪತ್ರಿಕೆ ಜೊತೆಗೆ ಪ್ರತಿ ಆಮಂತ್ರಿಕರಿಗೂ ಈ ವಿಗ್ರಹಗಳನ್ನು ಹಂಚಿದ್ದಾರೆ.

ಪಂಚಲೋಹದ ರಾಮ, ಸೀತೆ, ಲಕ್ಷ್ಮಣ ಹಾಗೂ ಹನುಮನಿರುವ ಮೂರ್ತಿ ನೀಡಿ ಮದುವೆಗೆ ಆಹ್ವಾನ ನೀಡಲಾಗಿದೆ.

ರಬಕವಿಬನಹಟ್ಟಿಯ ಆರ್ಎಸ್ಎಸ್ ಮುಖಂಡ ಸೋಮನಾಥ ಗೊಂಬಿ ಅವರ ಮಗಳು ಲಕ್ಷ್ಮೀ ಮದುವೆ ಫೆ.19 ರಂದು ನಡೆಯಲಿದೆ.

ಯೋಧನಾಗಿ ಸೇವೆ ಸಲ್ಲಿಸುತ್ತಿರುವ ರಬಕವಿಯ ಕಿರಣ ಕಳ್ಳಿಗುದ್ದಿಯೊಂದಿಗೆ ಲಕ್ಷ್ಮೀ ಮದುವೆ ನಡೆಯಲಿದೆ.

250 ಗ್ರಾಂನ ಪಂಚಲೋಹದ ಈ ವಿಗ್ರಹದ ಬೆಲೆ 1500 ರೂಪಾಯಿ ಆಗಿದೆ. ಮದುವೆ ಆಮಂತ್ರಣ ಪತ್ರಿಕೆಯನ್ನು ನಾಡಿನ ವಿವಿಧ ಮಠಾಧೀಶರು ಹಾಗೂ ಗಣ್ಯರಿಗೂ ನೀಡಲಾಗಿದೆ.
Published On - 10:11 am, Fri, 16 February 24




