- Kannada News Photo gallery Bagalkote News: Navratri celebrations: Jagadamba gets over 8 lakh currencies decorated
ನವರಾತ್ರಿ ಸಂಭ್ರಮ: ಜಗದಂಬಾಗೆ ನೋಟಿನ ಅಲಂಕಾರ: ಬರೋಬ್ಬರಿ 8 ಲಕ್ಷಕ್ಕೂ ಅಧಿಕ ಕರೆನ್ಸಿಗಳಿಂದ ಸಿಂಗಾರ
ನವರಾತ್ರಿ ಪ್ರಯುಕ್ತ ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡ ಪಟ್ಟಣದ ಜಗದಂಬಾ ದೇವಿ ದೇವಸ್ಥಾನದ ಗರ್ಭಗುಡಿಗೆ ನೋಟಿನಿಂದ ಕಲರ್ ಪುಲ್ ಅಲಂಕಾರ ಮಾಡಲಾಗಿದೆ. 20,50,100,200,500 ನೋಟುಗಳನ್ನು ಅಲಂಕಾರಕ್ಕೆ ಬಳಕೆ ಮಾಡಿಕೊಳ್ಳಲಾಗಿದ್ದು, ನೋಟುಗಳಲ್ಲೇ ಹೂಗಳ ಚಿತ್ತಾರ ಅರಳಿಸಲಾಗಿದೆ. ನವರಾತ್ರಿ ವಿಶೇಷವಾಗಿ ಮಾಡಿದ ನೋಟಿನ ಅಲಂಕಾರ ಎಲ್ಲರ ಕಣ್ಮನ ಸೆಳೆಯುತ್ತಿದೆ.
Updated on: Oct 18, 2023 | 4:47 PM

ಈಗ ನಾಡಿನಾದ್ಯಂತ ನವರಾತ್ರಿ ಸಂಭ್ರಮ. ಎಲ್ಲ ಕಡೆ ವಿವಿಧ ರೀತಿಯ ಪೂಜೆ ಪುನಸ್ಕಾರ ನಡೆಯುತ್ತಿವೆ. ಆದರೆ ಅದೊಂದು ಪಟ್ಟಣದಲ್ಲಿ ದೇವಿಯ ಗರ್ಭಗುಡಿಗೆ ವಿಶೇಷವಾದ ಅಲಂಕಾರ ಮಾಡಲಾಗಿದೆ. ಅದು ಯಾವುದೇ ಹೂಗಳಿಂದಲ್ಲ ಇತರೆ ಪೂಜೆಯಿಂದಲ್ಲ. ಬದಲಾಗಿ ಹಣದ ನೋಟಿನಿಂದ. ಕರೆನ್ಸಿಯಲ್ಲಿ ಕಂಗೊಳಿಸುತ್ತಿರುವ ಅಲಂಕಾರ ಹೇಗಿದೆ ಮುಂದೆ ನೋಡಿ.

ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡ ಪಟ್ಟಣದ ಜಗದಂಬಾ ದೇವಿ ದೇವಸ್ಥಾನದಲ್ಲಿ ನವರಾತ್ರಿ ಪ್ರಯುಕ್ತ ಜಗದಂಬಾದೇವಿ ಗರ್ಭಗುಡಿಗೆ ನೋಟಿನಿಂದ ಕಲರ್ ಪುಲ್ ಅಲಂಕಾರ ಮಾಡಲಾಗಿದೆ.

20,50,100,200,500 ನೋಟುಗಳನ್ನು ಅಲಂಕಾರಕ್ಕೆ ಬಳಕೆ ಮಾಡಿಕೊಳ್ಳಲಾಗಿದೆ. ನೋಟುಗಳಲ್ಲೇ ಹೂಗಳ ಚಿತ್ತಾರ ಅರಳಿಸಲಾಗಿದೆ. ನವರಾತ್ರಿ ವಿಶೇಷವಾಗಿ ಮಾಡಿದ ನೋಟಿನ ಅಲಂಕಾರ ಎಲ್ಲರ ಕಣ್ಮನ ಸೆಳೆಯುತ್ತಿದೆ.

ಭಕ್ತರು ಜಗದಂಬಾ ದೇವಿಗೆ ಹಣದಿಂದ ಅಲಂಕಾರ ಮಾಡಲು ತಮ್ಮ ಶಕ್ತಿಯಾನುಸಾರ ಹಣವನ್ನು ನೀಡಿದ್ದಾರೆ. ಭಕ್ತರು ಟ್ರಸ್ಟ್ನ ಹಣದಿಂದ ಈ ರೀತಿ ದೇವಿಗೆ ಅಲಂಕಾರ ಮಾಡಿ ಅಷ್ಟೈಶ್ವರ್ಯ ನೀಡು ತಾಯಿ ಎಂದು ಭಕ್ತರು ಬೇಡಿಕೊಂಡಿದ್ದಾರೆ.

ಎರಡು ದಿನದಲ್ಲಿ ನೋಟಿನ ಅಲಂಕಾರ ಮಾಡಿದ್ದು, ಬರೋಬ್ಬರಿ ಎಂಟುವರೆ ಲಕ್ಷ ಮೌಲ್ಯದ ನೋಟುಗಳನ್ನು ಬಳಸಿಕೊಳ್ಳಲಾಗಿದೆ. ನೋಟುಗಳ ಅಲಂಕಾರದ ಮೂಲಕ ಭಕ್ತರು ತಮ್ಮ ನವರಾತ್ರಿ ಭಕ್ತಿಯನ್ನು ತೋರ್ಪಡಿಸಿದ್ದು ಹೀಗೆ.



















