ಕೇಂದ್ರೀಯ ವಿಹಾರಗೆ ಡಿಕೆ ಶಿವಕುಮಾರ್ ಭೇಟಿ: ಮನೆ ಬಾಗಿಲು ಒಡೆದಾದ್ರೂ ಜನರನ್ನು ಹೊರ ತರುವಂತೆ ಸೂಚನೆ

|

Updated on: Oct 23, 2024 | 6:06 PM

ಬೆಂಗಳೂರಿನಲ್ಲಿ ಕಳೆದ ಒಂದು ವಾರದಿಂದ ಧಾರಾಕಾರ ಮಳೆ ಆಗುತ್ತಿದೆ. ಇದರಿಂದ ಸಾಕಷ್ಟು ಅವಾಂತರಗಳು ಸೃಷ್ಟಿಯಾಗಿವೆ. ಸದ್ಯ ಅವಾಂತರಗಳು ಸೃಷ್ಟಿಯಾದ ಯಲಹಂಕದ ಕೇಂದ್ರೀಯ ವಿಹಾರ, ಥಣಿಸಂದ್ರ ಮತ್ತು ಸಾಯಿಬಾಬಾ ಲೇಔಟ್​ಗೆ ಇಂದು ಡಿಸಿಎಂ ಡಿಕೆ ಶಿವಕುಮಾರ್​ ಭೇಟಿ ನೀಡಿ, ಪರಿಶೀಲಿಸಿ ಅಧಿಕಾರಿಗಳಿಗೆ ಅಗತ್ಯ ಸೂಚನೆ ನೀಡಿದ್ದಾರೆ.

1 / 7
ಬೆಂಗಳೂರಿನಲ್ಲಿ ಕಳೆದ ಒಂದು ವಾರದಿಂದ ಮಳೆ ಅಬ್ಬರಿಸಿ ಬೊಬ್ಬಿರಿಯುತ್ತಿದೆ. ಸಾಕಷ್ಟು ಅವಾಂತರಗಳು ಸೃಷ್ಟಿಯಾಗಿವೆ. ಅದರಲ್ಲೂ ಯಲಹಂಕದ ಕೇಂದ್ರೀಯ ವಿಹಾರ ಅಪಾರ್ಟ್‌ಮೆಂಟ್‌ ಬೇಸ್‌ಮೆಂಟ್‌ನಲ್ಲಿ ಮಳೆ ನೀರು ತುಂಬಿಕೊಂಡಿದ್ದು, ನಿವಾಸಿಗಳು ಪರದಾಡಿದ್ದಾರೆ. ಇದೀಗ ಡಿಸಿಎಂ ಡಿಕೆ ಶಿವಕುಮಾರ್​ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿದ್ದಾರೆ.

2 / 7
ಕೇಂದ್ರೀಯ ವಿಹಾರ ಅಪಾರ್ಟ್‌ಮೆಂಟ್​ಗೆ ಭೇಟಿ ನೀಡಿದ ಡಿಕೆ ಶಿವಕುಮಾರ್​, ನೀರು ನುಗ್ಗಲು ಕಾರಣ ಏನು, ಏನೆಲ್ಲಾ ಕ್ರಮಗಳನ್ನು ಕೈಗೊಳ್ಳಬೇಕು. ಎಲ್ಲಿಂದ ನೀರು ಬರುತ್ತಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್‌ರಿಂದ ಮಾಹಿತಿ ಪಡೆದುಕೊಂಡಿದ್ದಾರೆ.

3 / 7
ಮಳೆಯಿಂದ ಆಗಿರುವ ತೊಂದರೆ ಕುರಿತು ಪರಿಶೀಲನೆ ನಡೆಸಿ, ಅಧಿಕಾರಿಗಳಿಗೆ ಹಾಗೂ ಎನ್​​ಡಿಆರ್​ಎಫ್​ ತಂಡಕ್ಕೆ ಅಗತ್ಯ ಸೂಚನೆಗಳನ್ನು ನೀಡಿದ್ದಾರೆ.

4 / 7
ಸೆಂಟಿಮೆಂಟ್ ಬೇಡ, ಅನಾಹುತವಾದರೆ ಯಾರು ಹೊಣೆ? ಎಲ್ಲರನ್ನೂ ಶಿಫ್ಟ್ ಮಾಡಿ. ಮನೆಯ ಡೋರ್ ಒಡೆದಾದ್ರೂ ಹೊರಗಡೆ ಕರೆದುಕೊಂಡು ಬನ್ನಿ. ಒಂದು ವಾರ ಬೇರೆ ಕಡೆ ನಿವಾಸಿಗಳಿಗೆ ವ್ಯವಸ್ಥೆ ಮಾಡಿ ಎಂದು ತುಷಾರ್​ ಗಿರಿನಾಥ್​ಗೆ ಡಿಕೆ ಶಿವಕುಮಾರ್​ ಖಡಕ್​ ಸೂಚನೆ ನೀಡಿದ್ದಾರೆ.

5 / 7
ಕೇಂದ್ರೀಯ ವಿಹಾರ ವಸತಿ ಸಮುಚ್ಚಯದಲ್ಲಿ ಕೇಂದ್ರ ಸರ್ಕಾರದ ನೌಕರರು ವಾಸಿಸುತ್ತಿದ್ದು, ಯಲಹಂಕದಲ್ಲಿ ಇಷ್ಟು ಪ್ರಮಾಣದ ಮಳೆಯಾಗಿರುವ ಇತಿಹಾಸವಿಲ್ಲ. ಸಮುಚ್ಚಯದಲ್ಲಿನ ಅರ್ಧದಷ್ಟು ಮಳೆಯ ನೀರನ್ನು ಈಗಾಗಲೇ ತೆಗೆಯಲಾಗಿದೆ ಎಂದಿದ್ದಾರೆ.

6 / 7
ಇನ್ನು ಎಡೆಬಿಡದೆ ಸುರಿದ ಮಳೆಯಿಂದ ಥಣಿಸಂದ್ರ ವ್ಯಾಪ್ತಿಯಲ್ಲಿ ಹಾನಿಗೊಳಗಾದ ಸ್ಥಳಗಳಿಗೂ ಭೇಟಿ ನೀಡಿದ್ದಾರೆ. ಮಳೆಯಿಂದ ಆಗಿರುವ ತೊಂದರೆ ಕುರಿತು ಪರಿಶೀಲನೆ ನಡೆಸಿ, ಅಲ್ಲಿನ ನಿವಾಸಿಗಳ ಕುಂದು ಕೊರತೆಗಳನ್ನು ಆಲಿಸಿ ಅಧಿಕಾರಿಗಳಿಗೆ ಅಗತ್ಯ ಸೂಚನೆಗಳನ್ನು ನೀಡಿದ್ದಾರೆ.

7 / 7
ಸಾಯಿಬಾಬಾ ಲೇಔಟ್ ವ್ಯಾಪ್ತಿಯಲ್ಲಿ ಹಾನಿಗೊಳಗಾದ ಸ್ಥಳಗಳಿಗೂ ಭೇಟಿ ನೀಡಿ, ಮಳೆಯಿಂದ ಆಗಿರುವ ತೊಂದರೆ ಕುರಿತು ಪರಿಶೀಲನೆ ನಡೆಸಿದ್ದಾರೆ.

Published On - 6:04 pm, Wed, 23 October 24