ನೋಡ ನೋಡ ಎಷ್ಟು ಚಂದ ಅಲಾ: ಉದ್ಯಾನ ನಗರಿ ಬೆಂಗಳೂರಿನಲ್ಲಿ ಹೂಗಳದ್ದೇ ದರ್ಬಾರ್

Updated on: Feb 20, 2026 | 9:11 PM

ಉದ್ಯಾನನಗರಿ ಬೆಂಗಳೂರು ಪ್ರಸ್ತುತ ಹಳದಿ ಮತ್ತು ತಿಳಿ ಗುಲಾಬಿ ಬಣ್ಣದ ಹೂಗಳಿಂದ ಕಂಗೊಳಿಸುತ್ತಿದೆ. ಟಬುಬಿಯಾ ರೋಸುಯಾ ಮತ್ತು ಯೆಲ್ಲೋ ಟ್ರಂಪೆಟ್ ಹೂಗಳು ರಸ್ತೆಗಳು, ಕಬ್ಬನ್ ಪಾರ್ಕ್, ಲಾಲ್‌ಬಾಗ್ ಸೇರಿದಂತೆ ಹಲವೆಡೆ ಅರಳಿ ನಗರದ ಸೌಂದರ್ಯವನ್ನು ಇಮ್ಮಡಿಗೊಳಿಸಿವೆ. ಈ ಹೂಗಳ ವೈಭವವು ಕಣ್ಣಿಗೆ ಹಬ್ಬವಾಗಿದ್ದು, ಜನರು ಸಂತೋಷದಿಂದ ಕಣ್ತುಂಬಿಕೊಳ್ಳುತ್ತಿದ್ದಾರೆ.

1 / 6
ಉದ್ಯಾನನಗರಿ ತುಂಬೆಲ್ಲಾ ಹಳದಿ ಹಾಗೂ ತಿಳಿ ಗುಲಾಬಿ ಬಣ್ಣದ ಹೂಗಳು ಅರಳಿ ನಿಂತಿವೆ. ಈ ಕಲರ್ ಫುಲ್ ಹೂವಿನಿಂದ ಬೆಂಗಳೂರಿನ ಬ್ಯುಟಿ ದುಪ್ಪಟ್ಟಾಗಿದ್ದು, ಕಣ್ಣಿಗೆ ಹಬ್ಬದಂತಿದೆ. ನಮ್ಮ ಬೆಂಗಳೂರಿನಲ್ಲಿ ಹಳದಿ ಹಾಗೂ ಗುಲಾಬಿ ಬಣ್ಣದ ಕಲರವ ಜೋರಾಗಿದೆ. 

ಉದ್ಯಾನನಗರಿ ತುಂಬೆಲ್ಲಾ ಹಳದಿ ಹಾಗೂ ತಿಳಿ ಗುಲಾಬಿ ಬಣ್ಣದ ಹೂಗಳು ಅರಳಿ ನಿಂತಿವೆ. ಈ ಕಲರ್ ಫುಲ್ ಹೂವಿನಿಂದ ಬೆಂಗಳೂರಿನ ಬ್ಯುಟಿ ದುಪ್ಪಟ್ಟಾಗಿದ್ದು, ಕಣ್ಣಿಗೆ ಹಬ್ಬದಂತಿದೆ. ನಮ್ಮ ಬೆಂಗಳೂರಿನಲ್ಲಿ ಹಳದಿ ಹಾಗೂ ಗುಲಾಬಿ ಬಣ್ಣದ ಕಲರವ ಜೋರಾಗಿದೆ. 

2 / 6

ಹಚ್ಚ ಹಸಿರಿನ ಪ್ರಕೃತಿ ದೇವಿಗೆ ಹಳದಿ ಸೀರೆಯುಟ್ಟಿಸಿ ಮುಡಿಗೆ ಸೊಗಸಾದ ಗುಲಾಬಿ ಬಣ್ಣದ ಹೂವನ್ನ ಮುಡಿಸಿರುವ ಪರಿಯನ್ನ ನೋಡುತ್ತಿದ್ದರೆ ಯಾರ ಮನಸ್ಸು ಕಳೆದು ಹೋಗಲ್ಲ ಹೇಳಿ. ನಿಜಕ್ಕೂ ಈ ಅದ್ಬುತ ದೃಶ್ಯ ನಮ್ಮ ಕಣ್ಣಿಗೆ ಹಬ್ಬ. ಈ ರೀತಿಯ ಕಲರ್‌ಫುಲ್‌ ಹೂಗಳಿಂದಲೇ ಉದ್ಯಾನನಗರಿಯ ಸೌಂದರ್ಯಕ್ಕೆ ಮತ್ತಷ್ಟು ಮೆರಗು ಬಂದಿದೆ. 

3 / 6

ಸದ್ಯ ಬೆಂಗಳೂರಿನಲ್ಲಿ ಹಳದಿ ಹಾಗೂ ಗುಲಾಬಿ ಬಣ್ಣದ ಹೂಗಳು ಅರಳಿ ನಿಂತ್ತಿವೆ. ಕೊಳವೆ ಆಕಾರದಲ್ಲಿ ಕಾಣುವ ಗುಲಾಬಿ ಬಣ್ಣದ ಹೂವನ್ನ ಟಬುಬಿಯಾ ರೋಸುಯಾ ಪಿಂಕ್ ಪೋಯ್‌ ಅಂತ ಕರೆಯಲಾಗಿತ್ತೆ. ಹಳದಿ ಬಣ್ಣದ ಹೂಗಳನ್ನ ಯೆಲ್ಲೋ ಟ್ರಂಪೆಟ್ ಪ್ಲವರ್ ಅಂತ ಕರೆಯಲಾಗುತ್ತೆ. ವಿಶೇಷತೆ ಅಂದರೆ ಮರದಲ್ಲಿ ಎಲೆಗಳು ವಿರಳವಾಗಿದ್ದು, ಸಂಪೂರ್ಣವಾಗಿ ಹೂಗಳಿಂದ ತುಂಬಿರುತ್ತವೆ.

4 / 6

ಬೆಂಗಳೂರಿನ ರಸ್ತೆಗಳಲ್ಲಿ, ಕಬ್ಬನ್ ಪಾರ್ಕ್, ಲಾಲ್‌ಬಾಗ್ ಸೇರಿದಂತೆ ಅನೇಕ ಪಾರ್ಕ್‌ಗಳಲ್ಲಿ ಈ ಚಂದದ ಹೂಗಳನ್ನ ನೋಡಬಹುದಾಗಿದೆ. ಅಲಂಕಾರಿಕ ದೃಷ್ಟಿಯಿಂದ ಅನೇಕ ಕಡೆ ಗಿಡ ಮರಗಳನ್ನ ಬೆಳೆಸಲಾಗಿದ್ದು, ಜನರು ಕೂಡ ಕಲರ್ ಫುಲ್ ಹೂಗಳ ನಡುವೆ ಫೋಟೋ ಕ್ಲಿಕಿಸಿಕೊಂಡು ಖುಷಿ ಪಟ್ಟರು.

5 / 6

ಈ ರೀತಿ ಮತ್ತಷ್ಟು ಗಿಡ ಮರಗಳನ್ನ‌ನೆಟ್ಟರೇ ಬೆಂಗಳೂರು ಮತ್ತಷ್ಟು ಸುಂದರವಾಗಿ ಕಾಣುತ್ತೆ ಎಂದು ಸಿಲಿಕಾನ್ ಸಿಟಿ ಜನರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

6 / 6

ಒಟ್ಟಿನಲ್ಲಿ ಬೆಂಗಳೂರಿನ ಮೆರಗು ಹೆಚ್ಚಿಸುವ ಟೆಬುಬಿಯಾ ರೀತಿಯ ಮರ ಗಿಡಗಳನ್ನ‌ ಮತ್ತಷ್ಟು ಬೆಳೆಸಿದರೆ ಉದ್ಯಾನನಗರಿ ಬೆಂಗಳೂರಿನ ಸೌಂದರ್ಯವನ್ನ ಮತ್ತಷ್ಟು ಹೆಚ್ಚಿಸುತ್ತವೆ. 

Published On - 9:08 pm, Fri, 20 February 26

Loading...
Unable to load recommendations.
Follow Us