AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೇಕ್​ನಲ್ಲಿ ಮೂಡಿದ ಡಿಸ್ನಿ ಕ್ಯಾಸಲ್, ಮಾಸ್ಟರ್ ಶೆಫ್! ಬೆಂಗಳೂರಿನ ಕೇಕ್ ಶೋ ಹೇಗಿದೆ ನೋಡಿ

ಬೆಂಗಳೂರಿನ ಅರಮನೆ ಮೈದಾನದಲ್ಲಿ 51ನೇ ವಾರ್ಷಿಕ ಕೇಕ್ ಶೋ ಆರಂಭಗೊಂಡಿದೆ. ಕ್ರಿಸ್‌ಮಸ್‌ ಹಾಗೂ ಹೊಸ ವರ್ಷದ ಹಿನ್ನೆಲೆಯಲ್ಲಿ ಆಯೋಜಿಸಲಾಗಿದ್ದು, ಜನವರಿ 4ರವರೆಗೆ ನಡೆಯಲಿದೆ. ಶೆಫ್‌ಗಳ ಕಲಾತ್ಮಕ ಕೈಚಳಕದಲ್ಲಿ ಮೂಡಿಬಂದಿರುವ 25ಕ್ಕೂ ಹೆಚ್ಚು ವೈವಿಧ್ಯಮಯ ಕೇಕ್ ಕಲಾಕೃತಿಗಳು ಗಮನ ಸೆಳೆಯುತ್ತಿವೆ. ಉಚಿತ ಪ್ರವೇಶವಿರುವ ಈ ಪ್ರದರ್ಶನದಲ್ಲಿ ಡಿಸ್ನಿ ಕ್ಯಾಸಲ್, ಧಾರ್ಮಿಕ ದೇವಾಲಯಗಳು ಸೇರಿದಂತೆ ವಿಶಿಷ್ಟ ಕೇಕ್‌ಗಳನ್ನು ಕಾಣಬಹುದು.

Vinay Kashappanavar
| Updated By: ಭಾವನಾ ಹೆಗಡೆ|

Updated on: Dec 12, 2025 | 8:41 AM

Share
ಸಾಮಾನ್ಯವಾಗಿ ಕೇಕ್ ಶೋ  ಎಂದಕೂಡಲೆ ಕ್ರಿಸ್ಮಸ್ ನೆನಪಾಗುತ್ತೆ. ಆದರೆ ಕ್ರಿಸ್ಮಸ್ಗೂ ಮುಂಚೆಯೇ ಅರಮನೆ ಮೈದಾನದಲ್ಲಿ  51ನೇ ವಾರ್ಷಿಕ ಕೇಕ್ ಶೋ ಆಯೋಜಿಸಲಾಗಿದೆ. ಬೆಳಿಗ್ಗೆ 10 ಗಂಟೆಯಿಂದ ರಾತ್ರಿ 9ಗಂಟೆಯವರೆಗೆ ಉಚಿತ ಪ್ರದರ್ಶನವಿರಲಿದೆ. ಶೆಫ್ ಗಳ ಕೈಚಳಕದಲ್ಲಿ ತರಹೇವಾರಿ ಕೇಕ್ ಗಳು ಮೂಡಿ ಬಂದಿದ್ದು, 25 ಕ್ಕೂ ಹೆಚ್ಚಿನ  ಕೇಕ್​ಗಳು ಜನರ ಕಣ್ಮನ ಸೆಳೆದವು.

1 / 5
ಬೆಂಗಳೂರಿನ ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ ಆಯೋಜನೆ ಮಾಡಿರುವ ಕೇಕ ಶೋ  ಜ.4 ರವರೆಗೆ ನಡೆಯಲಿದ್ದು, ಕೇಕ್​ನಲ್ಲಿ ಮಾಡಿರುವ ಕಲಾಕೃತಿಗಳು ಜನರ ಗಮನ ಸೆಳೆಯುವುದಕ್ಕೆ ಸಿದ್ಧವಾಗಿವೆ.   ಹಿಂದೂ , ಕ್ರಿಶ್ಚಿಯನ್, ಮುಸ್ಲಿಂ ಧರ್ಮಕ್ಕೆ ಸಂಬಂಧಿಸಿದ ದೇವರನ್ನು ಮತ್ತು ದೇವಲಾಯಗಳನ್ನು ಕೇಕ್ ಮೂಲಕ ತಯಾರಿಸಲಾಗಿದೆ. ಕೇವಲ ಕೈಗಳಿಂದ ಮಾತ್ರವಲ್ಲದೇ ಆಧುನಿಕ ತಂತ್ರಜ್ಞಾನವಾದ ಲೇಸರ್ ಲೈಟ್ ಬಳಸಿಕೊಂಡು ಕೇಕ್​ಗಳನ್ನು ತಯಾರಿಸಲಾಗಿದೆ.

2 / 5
ಡಿಸ್ನಿ ಕ್ಯಾಸ್ಟಲ್, ತಮಿಳುನಾಡಿನ ವೆಲಂಕಿ ಚರ್ಚ್ ಕೇಕ್, ಒಡಿಶಾದ ಜಗನಾಥ ಪುರಿ, ಕಾಂತರ ಸಿನಿಮಾದ ಯಕ್ಷಗಾನ ಕಲೆ, ಮಕ್ಕಳನ್ನು ಆರ್ಕಷಿಸುವ ಪಾಂಡ, ಮಾಸ್ಟರ್ ಶೆಫ್, ವೆಡಿಂಗ್ ಕೇಕ್, ವಿಕ್ಟೋರಿಯಾ ಮಾದರಿಯ ಕೇಕ್, ರ್ಯಾಗ್ ಟು ರಿಚಸ್, ಮೋವಾನಾ ಸಿನಿಮಾದ ಹಡಗು, ಜಿಆರ್ ಬಿ ಬಾಟಲ್, ಕ್ರಿಸ್ ಮಸ್ ಟ್ರೀ, ಹೀಗೆ ವಿವಿಧ ರೀತಿಯ ಸಮಾರು 25ಕ್ಕೂ ಅಧಿಕ ಕೇಕ್ ಕಲಾಕೃತಿಗಳನ್ನು ತಯಾರಿಸಲಾಗಿದೆ

3 / 5
ಕ್ರಿಸ್ ಮಸ್ ಹಾಗೂ ಹೊಸ ವರ್ಷ ಹಿನ್ನಲೆ  ರಾಜಧಾನಿಯಲ್ಲಿ ಕೇಕ್‌ ಉತ್ಸವ ನಡೆಯುತ್ತಿದ್ದು, ಕೇಕ್ ನಲ್ಲಿ ಅರಳಿದ 18 ಅಡಿ ಎತ್ತರದ ರಾಯಲ್ ಡ್ರೀಮ್ ಕ್ಯಾಸಲ್, ಸೇಕ್ರೆಡ್ ಸೀ ಬಾಸಿಲಿಕಾ ವೇಳಾಂಕಣ ಚರ್ಚ್ ಹಾಗೂ ಬಗೆ ಬಗೆಯ ಕೇಕ್ ಪ್ರದರ್ಶನ ಮಾಡಲಾಗಿದೆ. ಅರಮನೆ ಮೈದಾನ ತ್ರಿಪುರ ವಾಸಿನಿಯಲ್ಲಿ ಇಂದಿನಿಂದ ಎರಡು ದಿನಗಳ ಕೇಕ್‌ ಶೋ ಆಯೋಜಿಸಲಾಗಿದೆ.

4 / 5
51 ನೇ ವರ್ಷದ ಸಂಭ್ರಮದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದೊಂದಿಗೆ ಕಲೆಯ ಸಮ್ಮಿಲನದೊಂದಿಗೆ ನಡೆಯುತ್ತಿರುವ ಕೇಕ್‌ ಉತ್ಸವ ಈಗ ಮತ್ತೆ ಕೇಕ್‌ ಪ್ರಿಯರನ್ನು ಕೈ ಬೀಸಿ ಕರೆಯುತ್ತಿದೆ.  25 ಕ್ಕೂ ಹೆಚ್ಚು ಕೇಕ್ ನ ಕಲಾಕೃತಿಗಳಿರುವ ಈ ವರ್ಷದಲ್ಲಿ , ವೈವಿಧ್ಯಮಯ ವಿನ್ಯಾಸಗಳು ಮತ್ತು ಸಂಸ್ಕೃತಿಗಳ ಥೀಮ್​ನೊಂದಿಗೆ ಕ್ರಿಸ್ಮಸ್ ಟ್ರೀ, ಚರ್ಚ್ ಗಳು ಕೇಕ್ ನಲ್ಲಿ ಮೂಡಿವೆ.

5 / 5