ಬೆಂಗಳೂರಿನ ಗೋಡೆಗಳ ಮೇಲೆ ಕಲಾವಿದರ ಕೈಚಳಕ: ಕತೆ ಹೇಳುತ್ತವೆ ಒಂದೊಂದು ಚಿತ್ರಗಳು

Updated on: Jan 15, 2025 | 5:27 PM

ಬೆಂಗಳೂರಿನ ಹತ್ತು ಗೋಡೆಗಳ ಮೇಲೆ ಪ್ರಸಿದ್ಧ ಕಲಾವಿದರು ಅದ್ಭುತ ಚಿತ್ರಗಳನ್ನು ಬಿಡಿಸಿದ್ದಾರೆ. ಬಿಎಂಆರ್‌ಸಿಎಲ್ ಮತ್ತು ಅನ್‌ಬಾಕ್ಸಿಂಗ್ ಬಿಎಲ್‌ಆರ್ ಸಹಯೋಗದ “ಗೋಡೆ ಬೆಂಗಳೂರು” ಉಪಕ್ರಮದ ಭಾಗವಾಗಿ ಈ ಕಲಾಕೃತಿಗಳು ಮೂಡಿಬಂದಿವೆ. ಜನದಟ್ಟಣೆ, ಜೀವನದ ಸವಾಲುಗಳು ಮತ್ತು ನಗರದ ಸೌಂದರ್ಯವನ್ನು ಪ್ರತಿಬಿಂಬಿಸುವ ಈ ಚಿತ್ರಗಳು ಬೆಂಗಳೂರಿನ ನಗರದ ಸೌಂದರ್ಯವನ್ನು ಹೆಚ್ಚಿಸಿವೆ.

1 / 9
ಬೆಂಗಳೂರಿನ 10 ಗೋಡೆಗಳ ಮೇಲೆ ಪ್ರಸಿದ್ಧ ಕಲಾವಿದರಿಂದ ಚಿತ್ತಾರ ಮೂಡಿಸುವ ಕೆಲಸ ಪೂರ್ಣಗೊಂಡಿದೆ. ಈ ಚಿತ್ರಗಳು ನಗರದ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿವೆ.

ಬೆಂಗಳೂರಿನ 10 ಗೋಡೆಗಳ ಮೇಲೆ ಪ್ರಸಿದ್ಧ ಕಲಾವಿದರಿಂದ ಚಿತ್ತಾರ ಮೂಡಿಸುವ ಕೆಲಸ ಪೂರ್ಣಗೊಂಡಿದೆ. ಈ ಚಿತ್ರಗಳು ನಗರದ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿವೆ.

2 / 9

ಬಿಎಂಆರ್‌ಸಿಎಲ್‌ ಹಾಗೂ ಅನ್‌ಬಾಕ್ಸಿಂಗ್‌ ಬಿಎಲ್‌ಆರ್‌ ಸಹಯೋಗದೊಂದಿಗೆ ನಗರದ ಪ್ರಮುಖ 10 ಗೋಡೆಗಳ ಮೇಲೆ ಚಿತ್ರ ಬಿಡಿಸುವ “ಗೋಡೆ ಬೆಂಗಳೂರು” ಉಪಕ್ರಮವನ್ನು ಈ ಹಿಂದೆ ಘೋಷಿಸಲಾಗಿತ್ತು. ಇದೀಗ ಚಿತ್ರಬಿಡುಸವ ಕೆಲಸ ಪೂರ್ಣಗೊಂಡಿದ್ದು, ಸುಂದರವಾಗಿ ಮೂಡಿ ಬಂದಿವೆ.

3 / 9

ವಿಶ್ವೇಶ್ವರಯ್ಯ ಸೆಂಟ್ರಲ್‌ ಕಾಲೇಜ್‌ ಮೆಟ್ರೋ ಸ್ಟೇಷನ್‌ನ ಗೋಡೆಯ ಮೇಲೆ, “ಸ್ವಲ್ಪ ಅಡ್ಜೆಸ್ಟ್‌ ಮಾಡ್ಕೊಳಿ” ಎಂಬ ಶೀರ್ಷಿಕೆಯಡಿ ಬೆಂಗಳೂರಿನ ಜನದಟ್ಟಣೆಯ ಬಗ್ಗೆ ಕಲಾವಿದರಾದ ಅನಿಲ್‌ಕುಮಾರ್‌ ಸುಂದರವಾಗಿ ಚಿತ್ರಬಿಡಿಸಿದ್ದಾರೆ.

4 / 9

ಚರ್ಚ್‌ ಸ್ಟ್ರೀಟ್​ನಲ್ಲಿರುವ ಗೋಡೆ ಒಂದರ ಮೇಲೆ ಬಿಡುವಿನ ಸಮಯದಲ್ಲಿ ನಿಮ್ಮೊಂದಿಗೆ ಕಳೆಯಿರಿ ಎಂಬ ಸಂದೇಶ ಸಾರುವ ಚಿತ್ರವನ್ನು ಮನಸೂರೆಗೊಳ್ಳುವಂತೆ ಕಲಾವಿದರಾದ ಅನ್ಪು ವರ್ಕಿ ಅವರು ತಮ್ಮ ಕೈಚಳಕ ತೋರಿಸಿದ್ದಾರೆ.

5 / 9

ಬೆಂಗಳೂರಿಗೆ ವಲಸೆ ಬರುವ ಸಾವಿರಾರು ಜನ ಇಲ್ಲಿ ಬದುಕಲು ನಡೆಸುವ ಜಿದ್ದಾಜಿದ್ದಿನ ಕಷ್ಟವನ್ನು ವಿವರಿಸುವಂತೆ ಒಬ್ಬ ವ್ಯಕ್ತಿ ಗ್ಯಾಸ್‌ ಸಿಲಿಂಡರ್‌ ಮೇಲೆ ಮಲಗಿರುವ ಚಿತ್ರದ ಮೂಲಕ ಹೇಳಲಾಗಿದೆ.

6 / 9

ಜೆ.ಪಿ.ನಗರದ ಮೆಟ್ರೋ ನಿಲ್ದಾಣದಲ್ಲಿ ವಿಂಡೋಸ್ ಟು ದಿ ಸೋಲ್ ಶೀರ್ಷಿಕೆಯಲ್ಲಿ ಚಿತ್ರ ಬಿಡಿಸಲಾಗಿದ್ದು, ಮಹಿಳೆಯೊಬ್ಬರ ಕಣ್ಣುಗಳ ಚಿತ್ರ ಇದಾಗಿದೆ.

7 / 9

ಜಯನಗರ ಮೆಟ್ರೋ ನಿಲ್ದಾಣದ ಗೋಡೆ ಮೇಲೆ ಈ ಹಿಂದೆ ಇದ್ದ ಬೆಂಗಳೂರಿನ ನೈಜತೆಯ ಬಗ್ಗೆ ಚಿತ್ರಿಸಲಾಗಿದೆ. ಸ್ಯಾಂಡಲ್ ಸೋಪ್ ಫ್ಯಾಕ್ಟರಿ ಮೆಟ್ರೋ ನಿಲ್ದಾಣದಲ್ಲಿ ಹಳೆಯ ವಿಂಟೇಜ್ ಪೋಸ್ಟರ್‌ಗಳು ಮತ್ತು ಮ್ಯಾಚ್‌ಬಾಕ್ಸ್ ಚಿತ್ರಗಳಿಂದ ಪ್ರೇರಿತವಾದ ಕಲಾಕೃತಿಯನ್ನು ಬಿಡಿಸಲಾಗಿದೆ. ಸೈನ್ಸ್‌ ಗ್ಯಾಲರಿ ರಸ್ತೆಯ ಗೋಡೆಗಳ ಮೇಲೆ ರಂಗೋಲಿ ಚಿತ್ತಾರ ಬಿಡಿಸಲಾಗಿದೆ. 

8 / 9

ಯಶವಂತಪುರ ಮೆಟ್ರೋ ಸ್ಟೇಷನ್‌ನಲ್ಲಿ ದೇಹದ ಭಾಗಗಳ ಕುರಿತು ವಿವರಿಸುವ ಚಿತ್ರ, ಹಲಸೂರು ಮೆಟ್ರೋ ನಿಲ್ದಾಣದಲ್ಲಿ ಮಹಿಳೆಯೊಬ್ಬರು ತಳ್ಳೋಗಾಡಿ ತಳ್ಳುವ ಸಾಗುವ ಚಿತ್ರವನ್ನು ಬಿಡಿಸಲಾಗಿದೆ.

9 / 9

ಒಟ್ಟಾರೆ 10 ಗೋಡೆಗಳ ಮೇಲೆ ವಿವಿಧ ವಿಷಯಗಳನ್ನಾಧರಿಸಿ, ಬೃಹತ್‌ ಗಾತ್ರದಲ್ಲಿ ಚಿತ್ರ ಬಿಡಿಸಲಾಗಿದ್ದು, ಈ ಚಿತ್ರಗಳು ನಗರದ ಸೌಂದರ್ಯವನ್ನು ಇನ್ನಷ್ಟು ಹೆಚ್ಚಿಸಿವೆ.

ಗಂಗಾಧರ​ ಬ. ಸಾಬೋಜಿ

ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ರಬಕವಿ ನನ್ನೂರು. ಡಿಗ್ರಿ ಬಳಿಕ ಮನಸ್ಸು ವಾಲಿದ್ದು ಮಾಧ್ಯಮ ಕ್ಷೇತ್ರದ ಕಡೆ. ಹಾಗಾಗಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಎಂಎ ಪತ್ರಿಕೋದ್ಯಮ ಪದವಿ ಮಾಡಿದೆ. ಆ ಸಂದರ್ಭದಲ್ಲಿಯೇ ಲೋಕಲ್ ಚಾನೆಲ್​ನಲ್ಲಿ ಸುದ್ದಿ ಬರವಣಿಗೆ, ಆ್ಯಂಕರಿಂಗ್​, ವೈಯಿಸ್​ ಓವರ್​, ಎಡಿಟಿಂಗ್​ ಕಲಿಕೆ. ಬಳಿಕ ಟಿವಿ6 ಸುದ್ದಿ ವಾಹಿನಿಯಲ್ಲಿ ಇಂಟರ್ನ್‌ಶಿಪ್. ನಂತರ ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಬೋಧನಾ ಸಹಾಯಕನಾಗಿ ನನ್ನ ಜ್ಞಾನವನ್ನು ಇತತರಿಗೆ ಹಂಚುವ ಕೆಲಸ. ಇದೀಗ ‘ಉತ್ತಮ ಸಮಾಜಕ್ಕಾಗಿ’ ನನ್ನ ಕಾಯಕ. ಓದು, ಬರವಣಿಗೆ, ಸಿನಿಮಾ ನನ್ನ ಆಸಕ್ತಿ.

Read More
Loading...
Unable to load recommendations.
Follow Us