- Kannada News Photo gallery Bengaluru techie stabs girlfriend 17 times in OYO hotel room, here Is Reasons For Murder
ಜಾತ್ರೇಲಿ ಸಿಕ್ಕ ವಿವಾಹಿತ ಪ್ರೇಯಸಿಯನ್ನು ಓಯೋ ರೂಮಿಗೆ ಕರೆದೊಯ್ದು ಹತ್ಯೆ:ಹರಿಣಿ-ಯಶಸ್ ಮಧ್ಯೆ ಅಸಲಿಗೆ ಆಗಿದ್ದೇನು?
ವಿವಾಹಿತ ಪ್ರಿಯತಮೆಗೆ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಂಗಳೂರಲ್ಲಿ ನಡೆದಿದೆ. ಹರಿಣಿ (36) ಕೊಲೆಯಾದ ಮಹಿಳೆ, ಯಶಸ್ (25) ಕೊಲೆ ಆರೋಪಿ ಆಗಿದ್ದಾರೆ. ವೃತ್ತಿಯಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿರುವ ಯಶಸ್ ಹಾಗೂ ಇಬ್ಬರು ಮಕ್ಕಳ ತಾಯಿ ಹರಿಣಿ ಇಬ್ಬರೂ ಕೆಂಗೇರಿ ನಿವಾಸಿಗಳು. ಆರೋಪಿ ಯಶಸ್ ನಿನ್ನ ಜೊತೆ ಮಾತಾಡಬೇಕು ಬಾ ಎಂದು ಓಯೋ ರೂಂಗೆ ಕರೆದುಕೊಂಡು ಹೋಗಿ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ.ವಿವಾಹಿತ ಪ್ರಿಯತಮೆಯನ್ನು OYO ರೂಂಗೆ ಕರೆದು ಚಾಕುವಿನಿಂದ ಇರಿದು ಹ*ತ್ಯೆ ಮಾಡಿದ ಘಟನೆ ಬೆಂಗಳೂರಲ್ಲಿ ನಡೆದಿದೆ. ಈ ಪ್ರಕರಣದ ತನಿಖೆ ನಡೆಸಿರುವ ಸುಬ್ರಮಣ್ಯಪುರ ಪೊಲೀಸರು ಹರಿಣಿ ಹತ್ಯೆ ಕಾರಣವೇನು ಎನ್ನುವ ರೋಚಕ ಮಾಹಿತಿಯನ್ನು ಬಹಿರಂಗ ಪಡಿಸಿದ್ದಾರೆ.
Updated on: Jun 09, 2025 | 4:24 PM

ಬೆಂಗಳೂರಿನಲ್ಲಿ ಕಳೆದ ಕೆಲವು ತಿಂಗಳುಗಳ ಹಿಂದೆ ಸಿಕ್ಕಿದ್ದ ಪ್ರಿಯತಮೆಯೊಂದಿಗೆ ಅನೈತಿಕ ಸಂಬಂಧ ಇಟ್ಟುಕೊಂಡ ಬೆಂಗಳೂರಿನ ಸಾಫ್ಟ್‌ವೇರ್ ಇಂಜಿನಿಯರ್ ಯಶಸ್ ತನ್ನ ಪ್ರೇಯಸಿಯನ್ನು ಓಯೋ ಹೋಟೆಲ್‌ಗೆ ಕರೆದುಕೊಂಡು ಹೋಗಿ ಹತ್ಯೆ ಮಾಡಿದ್ದಾನೆ. ಮೃತಳನ್ನು ಹರಿಣಿ(36) ಎಂದು ಗುರುತಿಸಲಾಗಿದೆ.

36 ವರ್ಷದ ಹರಿಣಿಯ ಪತಿ ದಾಸೇಗೌಡ. ಈ ದಂಪತಿ ಕೆಂಗೇರಿಯಲ್ಲಿ ವಾಸವಿದ್ದರು. ಕೆಲ ತಿಂಗಳ ಹಿಂದೆ ಕೆಂಗೇರಿ ಏರಿಯಾದಲ್ಲಿ ಜಾತ್ರೆ ಇತ್ತು. ಈ ಜಾತ್ರೆಗೆ ಟೆಕ್ಕಿ ಯಶಸ್ ಹೋಗಿದ್ದು, ಗೃಹಿಣಿ ಹರಿಣಿಗೆ ಪರಿಚಯವಾಗಿದ್ದ. ಜಾತ್ರೆಯಲ್ಲೇ ಹರಿಣಿ, ಯಶಸ್ ಇಬ್ಬರ ಫೋನ್ ನಂಬರ್ ಕೂಡ ಎಕ್ಸ್‌ಚೇಂಜ್ ಆಗಿತ್ತು.

ಜಾತ್ರೆಯಲ್ಲಿ ಪರಿಚಯವಾದ ಬಳಿಕ ವಿವಾಹಿತ ಮಹಿಳೆ ಹರಿಣಿ ಹಾಗೂ ಟೆಕ್ಕಿ ಯಶಸ್ ಮಧ್ಯೆ ಸ್ನೇಹ ಬೆಳೆದು, ಚಾಟಿಂಗ್, ಡೇಟಿಂಗ್ ಕೂಡ ಮಾಡಿದ್ರು. ಹಲವು ಬಾರಿ ಇದೇ ರೀತಿ ಭೇಟಿ ಮಾಡೋದು ಫೋನ್‌ನಲ್ಲಿ ಮಾತಾಡೋದು ನಡೆಯುತ್ತಿತ್ತು.

ಹಲವು ದಿನಗಳ ಬಳಿಕ ಹರಿಣಿ ಗಂಡ ದಾಸೇಗೌಡನಿಗೆ ಇವರಿಬ್ಬರ ಅನೈತಿಕ ಸಂಬಂಧ ಗೊತ್ತಾಗಿತ್ತು. ಹರಿಣಿ ಫೋನ್ ಕಿತ್ತುಕೊಂಡಿದ್ದ ದಾಸೇಗೌಡ ಹೆಂಡತಿಯನ್ನು ಮನೆಯಲ್ಲೇ ಕೂಡಿ ಹಾಕಿದ್ದ. ಕೆಲವು ತಿಂಗಳ ನಂತರ ಹೊರ ಬಂದಿದ್ದ ಹರಿಣಿ, ಮತ್ತೆ ತನ್ನ ಬಾಯ್ ಫ್ರೆಂಡ್ ಯಶಸ್ ಅನ್ನು ಸಂಪರ್ಕಿಸಿದ್ದಳು. ತಿಂಗಳುಗಳ ಕಾಲ ಪ್ರಿಯತಮೆ ಹರಿಣಿ ಸಂಪರ್ಕಕ್ಕೆ ಸಿಗದೆ ಯಶಸ್ ಹುಚ್ಚನಾಗಿದ್ದ. ಹೀಗಾಗಿ ಹರಿಣಿ ಸಿಕ್ಕರೆ ಸಾಯಿಸಲು ನಿರ್ಧರಿಸಿದ್ದ.

ಹರಿಣಿ ದೂರಾಗಿದ್ದಕ್ಕೆ ಸಾಯಿಸಲು ನಿರ್ಧರಿಸಿದ್ದ ಯಶಸ್, ಮೊದಲೇ ಚಾಕು ಕೂಡ ಖರೀದಿಸಿ ಇಟ್ಟಿದ್ದ. ಯಾವಾಗ ಮತ್ತೆ ಹರಿಣಿ, ಯಶಸ್ ಅನ್ನು ಭೇಟಿ ಮಾಡ್ತಾಳೋ ಆಗ ಇಬ್ಬರು ಮಾತುಕತೆ ಮಾಡಿಕೊಂಡು ಓಯೋ ರೂಮ್‌ಗೆ ಹೋಗುತ್ತಾರೆ.

ಮತ್ತೆ ಹರಿಣಿ ಸಿಗುತ್ತಿದ್ದಂತೆ ಯಶಸ್ ರಾಯಲ್ಸ್ ಹೊಟೇಲ್‌ನಲ್ಲಿ ರೂಮ್ ಬುಕ್ ಮಾಡಿದ್ದ. ಓಯೋ ರೂಂನಲ್ಲಿ ಹರಿಣಿ ಹಾಗೂ ಯಶಸ್ ದೈಹಿಕ ಸಂಪರ್ಕ ಬೆಳೆಸಿದ್ದಾರೆ. ಬಳಿಕ ನನಗೆ ಸಿಕ್ಕವಳು ಬೇರೆ ಯಾರಿಗೂ ಸಿಗಬಾರದು ಅಂತ ನಿರ್ಧಾರ ಮಾಡಿದ್ದ ಯಶಸ್, ಮೊದಲೇ ಪ್ಲಾನ್ ಮಾಡಿದಂತೆ ಚಾಕುನಿಂದ ಬರ್ಬರವಾಗಿ ಇರಿದಿದ್ದಾನೆ.

ಜೂನ್ 6ರಂದು ರೂಮ್‌ನಲ್ಲಿ ಕೊ*ಲೆ ಮಾಡಿ ಸಾಫ್ಟ್‌ವೇರ್ ಇಂಜಿನಿಯರ್ ಯಶಸ್ ಪರಾರಿಯಾಗಿದ್ದ. ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದ ಸುಬ್ರಮಣ್ಯಪುರ ಇನ್ಸ್‌ಪೆಕ್ಟರ್ ರಾಜು ಅಂಡ್ ಟೀಮ್, FSL ತಂಡವನ್ನು ಕರೆಸಿ ಎಲ್ಲಾ ಸಾಕ್ಷ್ಯ ಸಂಗ್ರಹ ಮಾಡಿದ್ದರು.

ಜೂನ್ 8ರಂದು ಸುಬ್ರಮಣ್ಯಪುರ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿ ಯಶಸ್ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿಸಿ ವಿಚಾರಣೆ ನಡೆಸಿದಾಗ ಆರೋಪಿ ಯಶಸ್ ತಪ್ಪೊಪ್ಪಿಕೊಂಡಿದ್ದಾನೆ. ನನ್ನ ಜೊತೆ ಹರಿಣಿಗೆ ಅನೈತಿಕ ಸಂಬಂಧ ಇತ್ತು. ನನ್ನ ಅವೈಡ್ ಮಾಡ್ತಾ ಇದ್ದಳು. ಹೀಗಾಗಿ ಕೊ*ಲೆ ಮಾಡಿರುವುದಾಗಿ ಆರೋಪಿ ಯಶಸ್ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾನೆ.

ಸದ್ಯ ಸುಬ್ರಮಣ್ಯಪುರ ಪೊಲೀಸರು ಆರೋಪಿ ಯಶಸ್‌ನನ್ನು ವಿಚಾರಣೆ ಮಾಡುತ್ತಿದ್ದು, ತನಿಖೆ ಮುಂದುವರೆಸಿದ್ದಾರೆ. ಇನ್ನು ಇಂದು ಆರೋಪಿಯನ್ನು ಪೊಲೀಸರು ಕೋರ್ಟ್ ಗೆ ಹಾಜರು ಪಡಿಸಲಿದ್ದಾರೆ. ಒಟ್ಟಿನಲ್ಲಿ ಗಂಡ ಮಕ್ಕಳ ಜತೆ ಚೆನ್ನಾಗಿದ್ದವಳು ಪರ ಪುರಷನ ಸ್ನೇಹ ಮಾಡಿ ಇದೀಗ ದುರಂತ ಅಂತ್ಯಕಂಡಿದ್ದಾಳೆ.




