- Kannada News Photo gallery Beware of fake KYC update link messages: Online fraud and cyber crime are still happening
ನಕಲಿ ಕೆವೈಸಿ ಅಪ್‌ಡೇಟ್ ಲಿಂಕ್ ಬಗ್ಗೆ ಎಚ್ಚರ: ಅಕ್ರಮಗಳು ಹೀಗೂ ನಡೆಯುತ್ತಿವೆ
ಕೆವೈಸಿ (KYC) ಅನ್ನು ನವೀಕರಿಸಿ ಎಂದು ಲಿಂಕ್ ಜತೆ ಹಂಚಿಕೊಂಡ ಯಾವುದೇ ಸಂದೇಶವನ್ನು (Messege) ನೀವು ಸ್ವೀಕರಿಸಿದರೆ, ಅದನ್ನು ಕ್ಲಿಕ್ ಮಾಡುವ ಮೊದಲು ಎಚ್ಚರಿಕೆಯಿಂದ ಯೋಚಿಸಿ. ಇತ್ತೀಚಿನ ದಿನಗಳಲ್ಲಿ ಕೆವೈಸಿ ಅಪ್‌ಡೇಟ್ ಹೆಸರಿನಲ್ಲಿ ನಡೆಯುತ್ತಿರುವ ವಂಚನೆಗಳು ಹೆಚ್ಚಾಗಿವೆ. ಆದ್ದರಿಂದ ಈ ರೀತಿ ಮಾಡುವ ಮೊದಲು ಕೆಲವು ವಿಷಯಗಳನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ.
Updated on: Apr 01, 2024 | 5:02 PM

ಸ್ಕ್ಯಾಮರ್‌ಗಳು ಅಥವಾ ವಂಚಕರು ಬ್ಯಾಂಕ್ ಗ್ರಾಹಕರಿಗೆ ಎಸ್ಎಂಎಸ್ ಅಥವಾ ಇಮೇಲ್ ಮೂಲಕ ಲಿಂಕ್‌ಗಳನ್ನು ಕಳುಹಿಸುತ್ತಾರೆ. ಈ ಲಿಂಕ್‌ಗಳನ್ನು ಕ್ಲಿಕ್ ಮಾಡಿದಾಗ, ಗ್ರಾಹಕರನ್ನು ನಕಲಿ ವೆಬ್‌ಸೈಟ್‌ಗೆ ಮರುನಿರ್ದೇಶಿಸಲಾಗುತ್ತದೆ, ಅದು ಅವರ ಬ್ಯಾಂಕ್ ಖಾತೆಯ ಮಾಹಿತಿಯನ್ನು ಕದಿಯಲು ಪ್ರಯತ್ನಿಸುತ್ತದೆ.

ಕೆವೈಸಿ ನವೀಕರಿಸಲು ಬ್ಯಾಂಕ್‌ಗಳು ಎಂದಿಗೂ ಲಿಂಕ್‌ಗಳನ್ನು ಕಳುಹಿಸುವುದಿಲ್ಲ ಎಂಬುದನ್ನು ನೆನಪಿನಲ್ಲಿಡಿ. ಆದ್ದರಿಂದ, ಯಾರಾದರೂ ಬ್ಯಾಂಕ್ ಅಧಿಕಾರಿಯಂತೆ ನಟಿಸಿ ನಿಮ್ಮ ವೈಯಕ್ತಿಕ ವಿವರಗಳನ್ನು ಕೇಳಿದರೆ, ಅವರಿಗೆ ಏನನ್ನೂ ಹೇಳಬೇಡಿ. ನೀವು ಅಂತಹ ನಕಲಿ ಅಧಿಕಾರಿಗಳೊಂದಿಗೆ ಮಾತನಾಡದಿರುವುದು ಉತ್ತಮ.

ನಿಮ್ಮ ಮೊಬೈಲ್ ಮತ್ತು ವೈಯಕ್ತಿಕ ಡೇಟಾವನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ. ಸ್ಕ್ಯಾಮರ್‌ಗಳು ನಿಮ್ಮ ಆಧಾರ್ ಸಂಖ್ಯೆ, ಬ್ಯಾಂಕ್ ವಿವರಗಳು ಅಥವಾ ನಿಮ್ಮ ಮೊಬೈಲ್‌ನಲ್ಲಿ ಸ್ವೀಕರಿಸಿದ ಒಟಿಪಿ ಸಂಖ್ಯೆಯನ್ನು ಕೇಳುವ ಸಾಧ್ಯತೆಯಿದೆ. ಹಾಗೆಂದು ನಿಮ್ಮ ವೈಯಕ್ತಿಕ ವಿವರಗಳನ್ನು ಯಾರಿಗೂ ಹೇಳಲೇಬೇಡಿ.

ಬ್ಯಾಂಕ್‌ನ ಅಧಿಕೃತ ವೆಬ್‌ಸೈಟ್ ಅಥವಾ ಮೂಲ ಅಪ್ಲಿಕೇಶನ್ ಬಳಸಿ ಮಾತ್ರ ಕೆವೈಸಿ ಅಪ್‌ಡೇಟ್ ಮಾಡಲು ನೀವು ಪ್ರಯತ್ನಿಸಬೇಕೇ ಹೊರತು, ಯಾವುದೇ ಇತರ ವಿಧಾನವನ್ನು ಅನುಸರಿಸುವುದು ಮೋಸ ಹೋಗಲು ಕಾರಣವಾಗಬಹುದು. ನಿಮ್ಮ ಬ್ಯಾಂಕ್ ಖಾತೆಗಳಿಗೆ ಸ್ಟ್ರಾಂಗ್ ಪಾಸ್‌ವರ್ಡ್‌ಗಳು ಮತ್ತು ಎರಡು ಹಂತದ ದೃಢೀಕರಣವನ್ನು (Two Step Verification) ಬಳಸಿ.

ಇಷ್ಟೆಲ್ಲ ಮುನ್ನೆಚ್ಚರಿಕೆ ವಹಿಸಿದ ಹೊರತಾಗಿಯೂ ವಂಚನೆಗೆ ಒಳಗಾದರೆ, ಹತ್ತಿರದ ಪೊಲೀಸ್ ಠಾಣೆಗೆ ದೂರು ನೀಡಿ. www.cybercrime.gov.in ನಲ್ಲಿ ಸೈಬರ್ ಅಪರಾಧದ ಬಗ್ಗೆ ಮಾಹಿತಿ ನೀಡಿ. ಇದಲ್ಲದೆ, ಆನ್‌ಲೈನ್ ಹಣಕಾಸು ವಂಚನೆಯ ಸಂದರ್ಭದಲ್ಲಿ ನೀವು 1930 ಸಹಾಯವಾಣಿಗೆ ಡಯಲ್ ಮಾಡಿ ದೂರು ನೀಡಬಹುದು.



















