‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಭವ್ಯಾ ಗೌಡ ಅವರು ಈ ವಾರ ಬಚಾವ್ ಆಗಿದ್ದಾರೆ. ಕೊನೆಯ ಹಂತದಲ್ಲಿ ಶಿಶಿರ್ ಹಾಗೂ ಭವ್ಯಾ ಇದ್ದರು. ಈ ಪೈಕಿ ಭವ್ಯಾ ಸೇವ್ ಆಗಿದ್ದಾರೆ. ಆ ಬಳಿಕ ಅವರು ಗಳಗಳನೆ ಅತ್ತಿದ್ದಾರೆ. ಸುದೀಪ್ ಹೇಳಿದ ಮಾತು ಅವರಿಗೆ ಚುಚ್ಚಿದೆ.
ಭವ್ಯಾ ಗೌಡ ಅವರು ತಮಗೆ ದೊಡ್ಡ ಅಭಿಮಾನಿ ಬಳಗ ಇದೆ ಎಂದು ಬೀಗುತ್ತಿದ್ದಾರೆ. ಆದರೆ, ಇದು ಕೆಲಸ ಮಾಡಲ್ಲ ಎಂದು ಸುದೀಪ್ ಅವರು ಈ ಮೊದಲೇ ಎಚ್ಚರಿಕೆ ನೀಡಿದ್ದರು. ಆದರೆ, ಭವ್ಯಾ ಈ ಬಗ್ಗೆ ಅಷ್ಟಾಗಿ ತಲೆಕೆಡಿಸಿಕೊಂಡಿಲ್ಲ.
ಭವ್ಯಾ ಗೌಡ ಅವರು ಈ ಬಾರಿಯೂ ಡೇಂಜರ್ಜೋನ್ನಲ್ಲಿ ಇದ್ದರು. ಕೊನೆಯಲ್ಲಿ ಉಳಿದುಕೊಂಡ ಇಬ್ಬರ ಪೈಕಿ ಭವ್ಯಾ ಗೌಡ ಕೂಡ ಇದ್ದರು. ಅವರು ಡೇಂಜರ್ಜೋನ್ಗೆ ಬರುತ್ತಿರೋದು ಎರಡನೇ ಬಾರಿ. ಈ ಬಗ್ಗೆ ಸುದೀಪ್ ಕಿವಿ ಮಾತು ಹೇಳಿದ್ದಾರೆ.
‘ನಿಮಗೆ ಎಬಿಲಿಟಿ ಇದೆ. ಛಲ ಇದೆ. ಆದರೆ, ಈ ರೀತಿ ಪದೇ ಪದೇ ಕೊನೆಯಲ್ಲಿ ನಿಲ್ಲೋದು ಉತ್ತಮವಲ್ಲ’ ಎಂದು ಸುದೀಪ್ ಅವರು ಭವ್ಯಾ ಗೌಡ ಅವರಿಗೆ ಕಿವಿಮಾತು ಹೇಳಿದ್ದಾರೆ. ಇದನ್ನು ಕೇಳಿ ಅವರ ಟೆನ್ಷನ್ ಹೆಚ್ಚಿದೆ.
ಭವ್ಯಾಗೆ ಸೇವ್ ಆದೆ ಎಂಬುದಕ್ಕಿಂತ ಎಲಿಮಿನೇಷನ್ ಹಂತಕ್ಕೆ ಹೋಗಿ ಮತ್ತೆ ಸೇವ್ ಆಗುತ್ತಿದ್ದೇನೆ ಎನ್ನುವುದೇ ಅತಿಯಾಗಿ ಕಾಡಿದೆ. ತಮ್ಮ ಆಟ ಎಲ್ಲಿ ಕಳಪೆ ಆಗುತ್ತಿದೆ ಎಂಬ ವಿಚಾರ ಅವರಿಗೆ ತಿಳಿಯುತ್ತಿಲ್ಲ. ಪ್ರತಿ ಹಂತದಲ್ಲಿ ಅವರು ತ್ರಿವಿಕ್ರಂ ಜೊತೆ ಹೆಚ್ಚು ಆಪ್ತವಾಗಿರುವುದೇ ಸಮಸ್ಯೆ ಆಗುತ್ತಿದೆ.