- Kannada News Photo gallery Bigg Boss Kannada Contestants Childhood Photo are you able to find their Names ?
‘ಬಿಗ್ ಬಾಸ್ ಕನ್ನಡ 12’ ಸ್ಪರ್ಧಿಗಳ ಬಾಲ್ಯದ ಫೋಟೋ; ಚಿತ್ರ ನೋಡಿ ಹೆಸರು ಹೇಳ್ತೀರಾ?
Bigg Boss Kannada 12: ಬಿಗ್ ಬಾಸ್ ಮನೆಯಲ್ಲಿ ಕಳೆದ ವೀಕೆಂಡ್ನಲ್ಲಿ ಸುದೀಪ್ ಅವರು ಒಂದು ಟಾಸ್ಕ್ ನೀಡಿದರು. ಸ್ಪರ್ಧಿಗಳ ಬಾಲ್ಯದ ಫೋಟೋ ತೋರಿಸಲಾಗುತ್ತದೆ. ಅವರು ಯಾರು ಎಂಬುದನ್ನು ಉಳಿದ ಸ್ಪರ್ಧಿಗಳು ಹೇಳಬೇಕು. ಸ್ಕ್ರೀನ್ ಮೇಲೆ ಯಾರ ಫೋಟೋ ತೋರಿಸಲಾಗುತ್ತದೆಯೋ ಅವರು ಸೈಲೆಂಟ್ ಆಗಿರಬೇಕು ಎಂಬುದು ಷರತ್ತು. ಬಿಗ್ ಬಾಸ್ ಸ್ಪರ್ಧಿಗಳ ಬಾಲ್ಯದ ಫೋಟೋ ನೋಡಿ ಯಾರು ಎಂದು ಗುರುತಿಸಿ.
Updated on:Nov 17, 2025 | 10:19 AM

ಮೇಲಿನ ಫೋಟೋದಲ್ಲಿ ಇರುವವರು ಬಿಗ್ ಬಾಸ್ ಮನೆಯಲ್ಲಿ ಸಾಕಷ್ಟು ಸದ್ದು ಮಾಡುತ್ತಿರುವವರು. ಮೊದಲ ಫೋಟೋದಲ್ಲಿ ಇರುವವರು ರಕ್ಷಿತಾ ಶೆಟ್ಟಿ. ನಂತರದ ಸ್ಪರ್ಧಿ ಧನುಷ್ ಗೌಡ ಅವರು. ಇವರ ಬಾಲ್ಯದ ಫೋಟೋ ಗಮನ ಸೆಳೆದಿದೆ.

ಈ ಫೋಟೋದಲ್ಲಿ ಮೊದಲು ಇರುವವರು ಸ್ಪಂದನಾ ಸೋಮಣ್ಣ. ಸ್ಪಂದನಾ ಅವರು ಬಿಗ್ ಬಾಸ್ ಮನೆಯಲ್ಲಿ ಹೆಚ್ಚು ಆ್ಯಕ್ಟೀವ್ ಆಗಿಲ್ಲ. ಎರಡನೇ ಫೋಟೋದಲ್ಲಿ ಇರುವ ಸ್ಪರ್ಧಿ ಅಶ್ವಿನಿ ಗೌಡ ಅವರು. ಇವರು ದೊಡ್ಮನೆಯಲ್ಲಿ ಸಖತ್ ವೈಲೆಂಟ್.

ಮೊದಲ ಫೋಟೋನ ನೋಡಿದ ತಕ್ಷಣವೇ ತಿಳಿದು ಬಿಡುತ್ತದೆ ಇವರು ರಘು ಎಂದು. ಏಕೆಂದರೆ ಅವರ ಎಕ್ಸ್ಪ್ರೆಷನ್ ಈಗಲೂ ಹಾಗೆಯೇ ಇದೆ. ಸುದೀಪ್ ಸಹ ಇದನ್ನೇ ಕೇಳಿದರು. ಮತ್ತೊಂದು ಫೋಟೋದಲ್ಲಿ ಇರುವವರು ಕಾವ್ಯಾ ಶೈವ .

ಈ ಫೋಟೋದಲ್ಲಿ ಇರುವವರು ಲವ್ ವಿಷಯದ ಮೂಲಕ ಸುದ್ದಿ ಆಗುತ್ತಿದ್ದಾರೆ. ಹಾಗಂತ ಇವರ ಮಧ್ಯೆ ಲವ್ ಇದೆ ಎಂದಲ್ಲ. ಇವರು ಒಳ್ಳೆಯ ಗೆಳೆಯರು ಅವರು ಬೇರೆ ಯಾರೂ ಅಲ್ಲ, ಸೂರಜ್ ಹಾಗೂ ರಾಶಿಕಾ. ಮೊದಲು ಇರುವವರು ಸೂರಜ್ ಹಾಗೂ ಎರಡನೇ ಫೋಟೋದಲ್ಲಿ ಇರುವವರು ರಾಶಿಕಾ.

ಈ ಫೋಟೋದಲ್ಲಿ ಮೊದಲು ಇರುವವರು ಸುಧಿ. ಅವರು ಭಾನುವಾರ (ನವೆಂಬರ್ 16) ಎಲಿಮಿನೇಟ್ ಆದರು. ಎರಡನೇ ಇರುವವರು ಧ್ರವಂತ್. ಧ್ರುವಂತ್ ಮಂಗಳೂರು ಮೂಲದವರು. ಅವರ ಹೆಸರು ಎಲ್ಲೆಡೆ ಚರ್ಚೆ ಆಗುತ್ತಿದೆ.

ಈ ಫೋಟೋದಲ್ಲಿ ಮೊದಲು ಇರೋದು ರಿಷಾ ಹಾಗೂ ಎರಡನೇ ಇರೋದು ಅಭಿ. ರಿಷಾ ಗೌಡ ದೊಡ್ಮನೆಯಲ್ಲಿ ಸಾಕಷ್ಟು ಸದ್ದು ಮಾಡಿದ್ದಾರೆ. ಇದಕ್ಕೆ ಕಾರಣ ಆಗಿದ್ದು ಅವರ ನಡುವಳಿಕೆ. ಅವರು ಗಿಲ್ಲಿ ಮೇಲೆ ಕೈ ಮಾಡಿ ಸುದ್ದಿ ಆಗಿದ್ದರು. ಅಭಿ ಅವರು ದೊಡ್ಮನೆಯಲ್ಲಿ ಸೈಲೆಂಟ್ ಆಗಿದ್ದಾರೆ.

ಈ ಫೋಟೋನ ನೋಡುತ್ತಿದ್ದಂತೆ ಯಾರು ಬೇಕಾದರೂ ಹೇಳಿ ಬಿಡ್ತಾರೆ ಇದು ಗಿಲ್ಲಿ ನಟ ಎಂದು. ಗಿಲ್ಲಿ ಅವರು ಆಗ ನೋಡೋಕೆ ಹೇಗಿದ್ರೋ ಈಗಲೂ ಹಾಗೆಯೇ ಇದ್ದಾರೆ. ಅವರ ಮುಖದಲ್ಲಿ ಹೆಚ್ಚು ಬದಲಾವಣೆ ಏನೂ ಆಗಿಲ್ಲ.

ಈ ಫೋಟದಲ್ಲಿ ಇರೋದು ಮಾಳು ಹಾಗೂ ಜಾನ್ವಿ. ಮಾಳು ಅವರು ಉತ್ತರ ಕರ್ನಾಟಕ ಪ್ರತಿಭೆ. ಜಾನ್ವಿ ಅವರು ಆ್ಯಂಕರ್ ಆಗಿ ಗಮನ ಸೆಳೆದವರು. ಮಾಳು ಹಾಡಿನ ಮೂಲಕ ಗಮನ ಸೆಳೆಯುತ್ತಿದ್ದಾರೆ. ಅವರು ಈ ಮೊದಲು ಕ್ಯಾಪ್ಟನ್ ಕೂಡ ಆಗಿದ್ದರು.
Published On - 9:56 am, Mon, 17 November 25




