Updated on: Aug 31, 2022 | 2:06 PM
ವೂಟ್ ಸೆಲೆಕ್ಟ್ನಲ್ಲಿ ‘ಬಿಗ್ ಬಾಸ್ ಕನ್ನಡ ಒಟಿಟಿ’ ಶೋ ಪ್ರಸಾರ ಆಗುತ್ತಿದೆ. ಈ ಕಾರ್ಯಕ್ರಮದ ಸ್ಪರ್ಧಿಗಳು ಸಂಭ್ರಮದಿಂದ ಗಣೇಶ ಚತುರ್ಥಿ ಆಚರಿಸಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ಗಣೇಶನನ್ನು ಕೂರಿಸಲಾಗಿದೆ. ಇಡೀ ಮನೆಯನ್ನು ವಿಶೇಷವಾಗಿ ಸಿಂಗರಿಸಲಾಗಿದೆ. ರಂಗೋಲಿ ಹಾಕುವ ಮೂಲಕ ಹಬ್ಬದ ಮೆರುಗು ಹೆಚ್ಚಿಸಲಾಗಿದೆ.
ಎಲ್ಲ ಸ್ಪರ್ಧಿಗಳು ಹಬ್ಬದ ಸಲುವಾಗಿ ಸಾಂಪ್ರದಾಯಿಕ ರೀತಿಯಲ್ಲಿ ಬಟ್ಟೆ ಧರಿಸಿದ್ದಾರೆ. ಟಾಸ್ಕ್, ಪೈಪೋಟಿ ಮುಂತಾದ ಜಂಜಾಟವನ್ನು ಮರೆತು ಭಕ್ತಿ-ಭಾವದಲ್ಲಿ ಎಲ್ಲರೂ ಬೆರೆತಿದ್ದಾರೆ.
ಹಬ್ಬದ ಸಲುವಾಗಿ ‘ಬಿಗ್ ಬಾಸ್ ಕನ್ನಡ ಒಟಿಟಿ’ ಶೋ ಸ್ಪರ್ಧಿಗಳೆಲ್ಲರೂ ವಿಶೇಷ ಅಡುಗೆ ತಯಾರಿಸಿದ್ದಾರೆ. ಒಟ್ಟಾರೆಯಾಗಿ ಮನೆಯಲ್ಲಿ ಖುಷಿ ಹರಡಿದೆ. ಮನೆಮಂದಿಯ ಮೊಗದಲ್ಲಿ ನಗು ಅರಳಿದೆ.
ಕನ್ನಡದ ಪ್ರೇಕ್ಷಕರ ಪಾಲಿಗೆ ‘ಬಿಗ್ ಬಾಸ್ ಒಟಿಟಿ’ ಒಂದು ಹೊಸ ಅನುಭವ. 6 ವಾರಗಳ ಕಾಲ ಈ ಶೋ ನಡೆಯಲಿದೆ. ಬಳಿಕ ಟಿವಿಯಲ್ಲಿ ‘ಬಿಗ್ ಬಾಸ್ ಕನ್ನಡ ಸೀಸನ್ 9’ ಆರಂಭ ಆಗಲಿದೆ.
Published On - 2:06 pm, Wed, 31 August 22