ಬಿಗ್ ಬಾಸ್ ಮನೆ ಸೇರಿದ 17 ಸ್ಪರ್ಧಿಗಳ ಫೋಟೋ ಹಾಗೂ ವಿವರ ಇಲ್ಲಿದೆ ನೋಡಿ..

Updated on: Oct 09, 2023 | 9:26 AM

Kannada Bigg Boss Season 10 Contestants List: ‘ಬಿಗ್ ಬಾಸ್ ಕನ್ನಡ ಸೀಸನ್ 10’ಕ್ಕೆ ಅದ್ದೂರಿ ಚಾಲನೆ ಸಿಕ್ಕಿದೆ. ಕಿಚ್ಚ ಸುದೀಪ್ ಅವರು ಎಂದಿನ ಜೋಶ್​ನಲ್ಲಿ ಶೋ ನಡೆಸಿಕೊಟ್ಟಿದ್ದಾರೆ. ಮನೆ ಒಳಗೆ 17 ಸ್ಪರ್ಧಿಗಳು ಕಾಲಿಟ್ಟಿದ್ದಾರೆ. ಅವರ ಫೋಟೋ ಹಾಗೂ ವಿವರ ಇಲ್ಲಿದೆ ನೋಡಿ. ಈ ರಿಯಾಲಿಟಿ ಶೋ ‘ಜಿಯೋ ಸಿನಿಮಾ’ ಒಟಿಟಿಯಲ್ಲಿ 24 ಗಂಟೆಯೂ ಉಚಿತವಾಗಿ ಪ್ರಸಾರ ಆಗಲಿದೆ.

1 / 17
ನಮ್ರತಾ ಗೌಡ ಅವರು ಕಿರುತೆರೆ ಮೂಲಕ ಫೇಮಸ್ ಆದವರು. ‘ಕೃಷ್ಣ ರುಕ್ಮಣಿ’ ಧಾರಾವಾಹಿ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು. ‘ಪುಟ್ಟಗೌರಿ ಮದುವೆ’, ‘ನಾಗಿಣಿ 2’ ಧಾರಾವಾಹಿ ಮೂಲಕ ಜನಪ್ರಿಯತೆ ಪಡೆದರು. ಅವರು ಬಿಗ್ ಬಾಸ್​ಗೆ ಕಾಲಿಟ್ಟ ಮೊದಲ ಸ್ಪರ್ಧಿ.

ನಮ್ರತಾ ಗೌಡ ಅವರು ಕಿರುತೆರೆ ಮೂಲಕ ಫೇಮಸ್ ಆದವರು. ‘ಕೃಷ್ಣ ರುಕ್ಮಣಿ’ ಧಾರಾವಾಹಿ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು. ‘ಪುಟ್ಟಗೌರಿ ಮದುವೆ’, ‘ನಾಗಿಣಿ 2’ ಧಾರಾವಾಹಿ ಮೂಲಕ ಜನಪ್ರಿಯತೆ ಪಡೆದರು. ಅವರು ಬಿಗ್ ಬಾಸ್​ಗೆ ಕಾಲಿಟ್ಟ ಮೊದಲ ಸ್ಪರ್ಧಿ.

2 / 17

ಸ್ನೇಹಿತ್ ಗೌಡ ಅವರು ‘ನಮ್ಮನೆ ಯುವರಾಣಿ’ ಧಾರಾವಾಹಿ ಮೂಲಕ ಜನಪ್ರಿಯತೆ ಪಡೆದರು. ಜೀವನದಲ್ಲಿ ಏನಾದರೂ ಸಾಧಿಸಬೇಕು ಎಂಬ ಛಲ ಇದೆ. ಫಿಟ್ನೆಸ್​ಗೆ ಹೆಚ್ಚು ಒತ್ತು ನೀಡುವ ಅವರು ಸಂಸ್ಕರಿಸಿದ ಸಕ್ಕರೆ ಸೇವನೆ ಮಾಡುವುದಿಲ್ಲ.

3 / 17

ಈಶಾನಿ ಅವರು ಹುಟ್ಟಿದ್ದು ಮೈಸೂರಿನಲ್ಲಿ. ಅವರು ಬೆಳೆದಿದ್ದು ದುಬೈ ಹಾಗೂ ಲಾಸ್ ಏಂಜಲೀಸ್​ನಲ್ಲಿ. ಅವರಿಗೆ ಕನ್ನಡ ಭಾಷೆ ಬರುತ್ತದೆ. ಅವರು ಕನ್ನಡದ ಬಗ್ಗೆ ಅಪಾರ ಪ್ರೀತಿ ಇಟ್ಟುಕೊಂಡಿದ್ದಾರೆ. ವೃತ್ತಿಯಲ್ಲಿ ಅವರು ರ‍್ಯಾಪರ್.

4 / 17

ವಿನಯ್ ಗೌಡ ಅವರು ಬಿಗ್ ಬಾಸ್​ಗೆ ಎಂಟ್ರಿ ಕೊಟ್ಟಿದ್ದಾರೆ. ಅವರು ‘ಹರ ಹರ ಮಹಾದೇವ’ ಧಾರಾವಾಹಿಯಲ್ಲಿ ಶಿವನ ಪಾತ್ರ ಮಾಡಿ ಗಮನ ಸೆಳೆದಿದ್ದಾರೆ. ಫಿಟ್ನೆಸ್​ಗೆ ಅವರು ಹೆಚ್ಚು ಪ್ರಾಮುಖ್ಯತೆ ನೀಡುತ್ತಾರೆ.

5 / 17

ಕಾಮಿಡಿ ಕಿಲಾಡಿಗಳು ಮೂಲಕ ಫೇಮಸ್ ಆದವರು ತುಕಾಲಿ ಸಂತೋಷ್. ನಾಟಕ ಒಂದರಲ್ಲಿ ತುಕಾಲಿ ಹೆಸರಿನ ಪಾತ್ರ ಮಾಡಿದ್ದರು. ಆ ಬಳಿಕ ಅವರನ್ನು ಎಲ್ಲರೂ ತುಕಾಲಿ ಸಂತು ಎಂದು ಕರೆದರು. ಆರಂಭದಲ್ಲಿ ಸಿಟ್ಟು ಬರುತ್ತಿತ್ತು. ಈಗ ಅವರಿಗೆ ಹೆಸರಿನ ಬಗ್ಗೆ ಹೆಮ್ಮೆ ಇದೆ.

6 / 17

ನೀತು ವನಜಾಕ್ಷಿ ಅವರು ತೃತೀಯಲಿಂಗಿ. ಅವರು ಜೀವನದಲ್ಲಿ ಸಾಕಷ್ಟು ಕಷ್ಟ ಅನುಭವಿಸಿದ್ದಾರೆ. ಅವರು ಸಾಧನೆ ಮಾಡಿ ತೋರಿಸಿದ್ದಾರೆ. ಕೆಲವು ಚಿತ್ರಗಳಲ್ಲಿ ನಟಿಸಿರುವ ಅವರು ಬ್ಯೂಟಿ ಪಾರ್ಲರ್ ಹಾಗೂ ಹೋಟೆಲ್ ನಡೆಸುತ್ತಿದ್ದಾರೆ. ಇವರು ಅನೇಕರಿಗೆ ಮಾದರಿ.

7 / 17

ಸಿರಿ ಅವರು ‘ರಂಗೋಲಿ’ ಧಾರಾವಾಹಿ ಮೂಲಕ ಜನಪ್ರಿಯತೆ ಪಡೆದರು. ಅವರು ಕಿರುತೆರೆ ಮೂಲಕ ಗುರುತಿಸಿಕೊಂಡಿದ್ದಾರೆ. ಮದುವೆ ಆಗಬೇಕು ಎಂದರೂ ಅದು ಸಾಧ್ಯವಾಗಿಲ್ಲ. ಹೀಗಾಗಿ ಅವರು ಇನ್ನೂ ಸಿಂಗಲ್ ಆಗಿದ್ದಾರೆ.

8 / 17

ಸ್ನೇಕ್ ಶ್ಯಾಮ್ ಅವರು ಉರಗ ರಕ್ಷಕರು. ಮೂಲತಃ ಮೈಸೂರಿನವರು. ಸಾಕಷ್ಟು ಪ್ರಾಣಿಗಳ ರಕ್ಷಣೆಯನ್ನು ಅವರು ಮಾಡಿದ್ದಾರೆ. ಸಾವಿರಾರು ಹಾವುಗಳನ್ನು ಅವರು ರಕ್ಷಿಸಿದ್ದಾರೆ. ಅವರು ಫಿಲಾಸಫಿ ಬಗ್ಗೆ ಹೆಚ್ಚು ಆಸಕ್ತಿ ಇಟ್ಟುಕೊಂಡಂತಿದೆ.

9 / 17

‘ಲಕ್ಷಣ’ ಧಾರಾವಾಹಿ ಇತ್ತೀಚೆಗಷ್ಟೇ ಪೂರ್ಣಗೊಂಡಿದೆ. ಈ ಧಾರಾವಾಹಿಯಲ್ಲಿ ನಟಿಸಿದ್ದ ಭಾಗ್ಯಶ್ರೀ ಕೂಡ ಬಿಗ್ ಬಾಸ್​ಗೆ ಎಂಟ್ರಿ ಕೊಟ್ಟಿದ್ದಾರೆ. ಕಿರುತೆರೆಯಲ್ಲಿ ಅವರಿಗೆ ಹಲವು ವರ್ಷಗಳ ಅನುಭವ ಇದೆ.

10 / 17

ಹಲವು ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಗೌರೀಶ್ ಅಕ್ಕಿ ಅವರಿಗೆ ಇದೆ. ಅವರು ಸಿನಿಮಾಗಳಲ್ಲೂ ನಟಿಸಿದ್ದಾರೆ. ಅವರು ಬಿಗ್ ಬಾಸ್​ಗೆ ಬಂದಿದ್ದಾರೆ.

11 / 17

ಮೈಕಲ್ ತಾಯಿ ಭಾರತದವರು, ತಂದೆ ನೈಜೀರಿಯಾದವರು. ಅವರ ಕೇಶ ವಿನ್ಯಾಸ ವಿಚಿತ್ರವಾಗಿದೆ. ಅವರು ಕಳೆದ ನಾಲ್ಕು ವರ್ಷಗಳಿಂದ ಕೂದಲನ್ನು ಬೆಳೆಸುತ್ತಿದ್ದಾರೆ. ಮೈಕಲ್ ತಮ್ಮದೇ ಬರ್ಗರ್ ಶಾಪ್ ಹೊಂದಿದ್ದಾರೆ. ಮಾಡೆಲ್ ಕೂಡ ಹೌದು.

12 / 17

ಡ್ರೋನ್ ಪ್ರತಾಪ್ ಎಂದೇ ಫೇಮಸ್ ಆದ ಇವರು ಬಿಗ್ ಬಾಸ್​ಗೆ ಬಂದಿದ್ದಾರೆ. ತಮ್ಮನ್ನು ತಾವು ಯುವ ವಿಜ್ಞಾನಿ ಎಂದು ಅವರು ಕರೆದುಕೊಂಡಿದ್ದಾರೆ. ಅವರ ಆಗಮನ ಕುತೂಹಲ ಮೂಡಿಸಿದೆ. ಇವರು ಡೇಂಜರ್ ಜೋನ್​ನಲ್ಲಿದ್ದಾರೆ.

13 / 17

ಸಂಗೀತಾ ಶೃಂಗೇರಿ ಅವರು ‘777 ಚಾರ್ಲಿ’ ಸಿನಿಮಾದಲ್ಲಿ ನಟಿಸಿದ್ದಾರೆ. ಅವರಿಗೆ ಕಿರುತೆರೆಯಲ್ಲೂ ನಟಿಸಿದ ಅನುಭವ ಇದೆ. ಇವರು ಡೇಂಜರ್ ಜೋನ್​ನಲ್ಲಿದ್ದಾರೆ.

14 / 17

ಬುಲೆಟ್ ಪ್ರಕಾಶ್ ಮಗ ರಕ್ಷಕ್ ಅವರು ಬಿಗ್ ಬಾಸ್​ಗೆ ಆಗಮಿಸಿದ್ದಾರೆ. ಗುರು ಶಿಷ್ಯರು ಸಿನಿಮಾದಲ್ಲಿ ಅವರು ನಟಿಸಿದ್ದರು. ಅವರು ನಡೆದುಕೊಳ್ಳುವ ರೀತಿಯನ್ನು ಅನೇಕರು ಟ್ರೋಲ್ ಮಾಡಿದ್ದಾರೆ. ಇವರು ಡೇಂಜರ್ ಜೋನ್​ನಲ್ಲಿದ್ದಾರೆ.

15 / 17

ವರ್ತೂರ್ ಸಂತೋಷ್ ಅವರು ವೃತ್ತಿಯಲ್ಲಿ ರೈತ. ತಂದೆ ಬಿಟ್ಟು ಹೋದ ಜಮೀನಿನಲ್ಲಿ ಹಲವು ರೀತಿಯ ಬೆಳೆ ಬೆಳೆದಿದ್ದಾರೆ. ಹಳ್ಳಿಕಾರ ದನದ ತಳಿಯ ಬಗ್ಗೆ ಜಗತ್ತಿಗೆ ತಿಳಿಸುವ ಕನಸು ಅವರದ್ದು. ಇವರು ಡೇಂಜರ್ ಜೋನ್​ನಲ್ಲಿದ್ದಾರೆ.

16 / 17

ತನಿಷಾ ಕುಪ್ಪಂಡ ಅವರು ‘ಮಂಗಳ ಗೌರಿ’ ಧಾರಾವಾಹಿಯಲ್ಲಿ ಖಡಕ್ ವಿಲನ್ ಆಗಿ ಗಮನ ಸೆಳೆದರು. ಅವರು ಬಿಗ್ ಬಾಸ್ ಮನೆಗೆ ಬಂದಿದ್ದಾರೆ. ಇವರು ಡೇಂಜರ್ ಜೋನ್​ನಲ್ಲಿದ್ದಾರೆ.

17 / 17

ಕಾರ್ತಿಕ್ ಅವರು ಕಿರುತೆರೆ ಮೂಲಕ ಗಮನ ಸೆಳೆದಿದ್ದಾರೆ. ಅವುರ ಕೂಡ ಬಿಗ್ ಬಾಸ್​ಗೆ ಬಂದಿದ್ದಾರೆ. ಇವರು ಡೇಂಜರ್ ಜೋನ್​ನಲ್ಲಿದ್ದಾರೆ. ‘ಡೊಳ್ಳು’ ಚಿತ್ರದಲ್ಲಿ ಅವರು ನಟಿಸಿದ್ದಾರೆ.

Published On - 7:42 am, Mon, 9 October 23

Loading...
Unable to load recommendations.
Follow Us