BBK 11: ಮೊದಲ ಎಪಿಸೋಡ್​ಗೆ ಸುದೀಪ್​ ಲುಕ್ ಜತೆ ಸ್ವರ್ಗ-ನರಕದ ಝಲಕ್​ ಇಲ್ಲಿದೆ..

Updated on: Sep 29, 2024 | 4:29 PM

‘ಇದು ಹೊಸ ಅಧ್ಯಾಯ’ ಎನ್ನುತ್ತ ‘ಬಿಗ್​ ಬಾಸ್​ ಕನ್ನಡ ಸೀಸನ್​ 11’ ರಿಯಾಲಿಟಿ ಶೋ ಆರಂಭ ಆಗುತ್ತಿದೆ. ಸೆಪ್ಟೆಂಬರ್​ 29ರ ಸಂಜೆ 6 ಗಂಟೆಗೆ ಗ್ರ್ಯಾಂಡ್​ ಓಪನಿಂಗ್​ ಆಗಲಿದೆ. ಮೊದಲ ಸಂಚಿಕೆಯಲ್ಲಿ ಕಿಚ್ಚ ಸುದೀಪ್​ ಅವರು ಸಖತ್​ ಸ್ಪೈಲಿಶ್​ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅವರ ಲುಕ್​ ಹಾಗೂ ಹೊಸ ಮನೆಯ ವಿನ್ಯಾಸ ನೋಡಿ ಅಭಿಮಾನಿಗಳಿಗೆ ಖುಷಿ ಆಗಿದೆ.

1 / 5
ಕಿಚ್ಚ ಸುದೀಪ್​ ಅವರು ‘ಬಿಗ್​ ಬಾಸ್​ ಕನ್ನಡ’ ಕಾರ್ಯಕ್ರಮದ ಸತತ 11ನೇ ಸೀಸನ್​ಗೆ ನಿರೂಪಕನಾಗಿ ಮುಂದುವರಿದಿದ್ದಾರೆ. ಎಂದಿನಂತೆ ಭಾರಿ ಉತ್ಸಾಹದೊಂದಿಗೆ ಅವರು ಶೋ ನಡೆಸಿಕೊಡಲು ಬಂದಿದ್ದಾರೆ. ಮೊದಲ ಸಂಚಿಕೆಯ ಝಲಕ್ ಕಾಣಿಸಿದೆ.

ಕಿಚ್ಚ ಸುದೀಪ್​ ಅವರು ‘ಬಿಗ್​ ಬಾಸ್​ ಕನ್ನಡ’ ಕಾರ್ಯಕ್ರಮದ ಸತತ 11ನೇ ಸೀಸನ್​ಗೆ ನಿರೂಪಕನಾಗಿ ಮುಂದುವರಿದಿದ್ದಾರೆ. ಎಂದಿನಂತೆ ಭಾರಿ ಉತ್ಸಾಹದೊಂದಿಗೆ ಅವರು ಶೋ ನಡೆಸಿಕೊಡಲು ಬಂದಿದ್ದಾರೆ. ಮೊದಲ ಸಂಚಿಕೆಯ ಝಲಕ್ ಕಾಣಿಸಿದೆ.

2 / 5

ಈ ಬಾರಿ ಬಿಗ್​ ಬಾಸ್​ ಮನೆ ಎರಡು ಭಾಗ ಆಗಿದೆ. ಒಂದು ಭಾಗದಲ್ಲಿ ಸ್ವರ್ಗ ಇದೆ. ಇನ್ನೊಂದು ಭಾಗದಲ್ಲಿ ನರಕ ಇದೆ. ಯಾವ ಸ್ಪರ್ಧಿ ಸ್ವರ್ಗಕ್ಕೆ ಹೋಗುತ್ತಾರೆ ಮತ್ತು ಯಾವ ಸ್ಪರ್ಧಿ ನರಕಕ್ಕೆ ಹೋಗುತ್ತಾರೆ ಎಂಬುದನ್ನು ತಿಳಿಯಲು ವೀಕ್ಷಕರು ಕಾಯುತ್ತಿದ್ದಾರೆ.

3 / 5

ಇದು ಬಿಗ್​ ಬಾಸ್​ನಲ್ಲಿ ಹೊಸ ಕಾನ್ಸೆಪ್ಟ್​. ಇಷ್ಟು ಸೀಸನ್​ಗಳಲ್ಲಿ ಸ್ವರ್ಗ ಮತ್ತು ನರಕ ಎಂಬ ಪರಿಕಲ್ಪನೆ ಇರಲಿಲ್ಲ. ಈ ಬಾರಿ ಇದನ್ನು ಹೊಸದಾಗಿ ಪರಿಚಯಿಸಲಾಗಿದೆ. ಆ ಕಾರಣದಿಂದ ‘ಬಿಗ್​ ಬಾಸ್​ ಕನ್ನಡ ಸೀಸನ್​ 11’ ಶೋ ಕುತೂಹಲ ಮೂಡಿಸಿದೆ.

4 / 5

ಬಿಗ್​ ಬಾಸ್​ ಮನೆಯನ್ನು ವಿಶೇಷವಾಗಿ ವಿನ್ಯಾಸ ಮಾಡಲಾಗಿದೆ. ಅದಕ್ಕೆ ತಕ್ಕಂತೆ ಆಟವೂ ಬದಲಾಗುತ್ತಿದೆ. ಹೊಸ ಹೊಸ ನಿಯಮಗಳು ಇರಲಿವೆ. ಶುರುವಿನಿಂದಲೇ ಎರಡು ಗುಂಪುಗಳಲ್ಲಿ ಆಟ ಆರಂಭ ಆಗಲಿದೆ. ಅನೇಕ ಸರ್ಪ್ರೈಸ್​ ಕೂಡ ಈ ಶೋನಲ್ಲಿ ಇರಲಿವೆ.

5 / 5

ಹೊಸ ಸೀಸನ್​ನ ಬಿಗ್​ ಬಾಸ್​ ಮನೆ ನೋಡಿ ವೀಕ್ಷಕರು ವಾವ್​ ಎನ್ನುತ್ತಿದ್ದಾರೆ. ‘ಕಲರ್ಸ್​ ಕನ್ನಡ’ ಮತ್ತು ‘ಜಿಯೋ ಸಿನಿಮಾ’ ಒಟಿಟಿ ಮೂಲಕ ‘ಬಿಗ್​ ಬಾಸ್​ ಕನ್ನಡ ಸೀಸನ್ 11’ ರಿಯಾಲಿಟಿ ಶೋ ಪ್ರಸಾರ ಆಗಲಿದೆ.

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Loading...
Unable to load recommendations.
Follow Us