- Kannada News Photo gallery Bitter neem leaves Prasada in Temple of Maheshwaramma Fair and Brahma Rathotsava at Manchenahalli Chikkaballapur
ಇಲ್ಲಿ ಬ್ರಹ್ಮ ರಥ ಬೇವಿನ ಮರದ ಬಳಿ ಬರುತ್ತಿದ್ದಂತೆ ಕಹಿ ಬೇವು ಕೆಲಕಾಲ ಸಿಹಿಯಾಗುತ್ತಂತೆ! ಯಾವ ದೇವಸ್ಥಾನ? ಇದು ಎಲ್ಲಿದೆ ಗೊತ್ತಾ?
ಎಲ್ಲಡೆ ದೇವರ ಪ್ರಸಾದವಾಗಿ ಸಿಹಿ ಲಾಡು, ಸ್ವೀಟ್ ಅನ್ನಸಂತರ್ಪಣೆ ಮಾಡಿದರೆ ಈ ದೇವಾಲಯದಲ್ಲಿ ಮಾತ್ರ ಕಹಿ ಬೇವಿನ ಸೊಪ್ಪು ಪ್ರಸಾದವಾಗಿ ಸಿಗುತ್ತದೆ. ಅಷ್ಟಕ್ಕೂ ಅದೇಲ್ಲಿ ಅಲ್ಲಿಯ ಮಹತ್ವವಾದರೂ ಏನು ಅಂತೀರಾ?
Updated on:Apr 07, 2023 | 10:08 PM

ಅಲ್ಲೊಂದು ಅಪರೂಪದಲ್ಲಿ ಅಪರೂಪದ ಜಾತ್ರೆ ನಡೆಯುತ್ತದೆ. ಆ ಜಾತ್ರೆಯಲ್ಲಿ ಕಹಿ ಬೇವು ಬೆಲ್ಲದಂತೆ ಸಿಹಿಯಾಗುತ್ತಂತೆ, ಇದರಿಂದ ಜನ ಬೃಹತ್ ಬೇವಿನ ಮರವೇರಿ ಕಹಿ ಬೇವಿನ ಸೊಪ್ಪು ತಿನ್ನುತ್ತಾರೆ.

Bitter neem leaves Prasada in Temple of Maheshwaramma Fair and Brahma Rathotsava at Manchenahalli Chikkaballapur

ಚಿಕ್ಕಬಳ್ಳಾಪುರ ಜಿಲ್ಲೆ ನೂತನ ಮಂಚೇನಹಳ್ಳಿ ತಾಲೂಕಿನ ಮೀಣಕನಗುರ್ಕಿ ಗ್ರಾಮದ ಮಹೇಶ್ವರಮ್ಮ ಜಾತ್ರೆ ಪ್ರಯುಕ್ತ ಬ್ರಹ್ಮ ರಥೋತ್ಸವ ನಡೆಯುತ್ತದೆ.

ರಥ ಅದೊಂದು ಬೇವಿನ ಮರದ ಬಳಿ ಬರುತ್ತಿದ್ದಂತೆ ಜನ ಇದ್ದಕ್ಕಿಂತ ಬೃಹತ್ ಕಹಿಬೇವಿನ ಮರವನ್ನೇರಿ ಬೇವಿನ ಸೊಪ್ಪು ಕಿತ್ತು ತಿನ್ನುತ್ತಾರೆ. ಮರಹತ್ತಲಾಗದೇ ಇದ್ದವರು ನನಗೂ ಸ್ವಲ್ಪ ಪ್ರಸಾದ, ಬೇವಿನ ಸೊಪ್ಪಿನ ಪ್ರಸಾದ ಕೊಡಿ ಅಂತ ಕೇಳಿ ಪಡೆದು ಸವಿಯುತ್ತಾರೆ.

ಮಹೇಶ್ವರಮ್ಮ ರಥ ಬೇವಿನ ಮರದ ಬಳಿ ಬರುತ್ತಿದ್ದಂತೆ ಕಹಿ ಬೇವು ಕೆಲಕಾಲ ಸಿಹಿಯಾಗುತ್ತದೆ ಅನ್ನೊ ನಂಬಿಕೆ ಇಲ್ಲಿನ ಜನರದ್ದು. ಹೀಗಾಗಿ ಭಕ್ತರು ಪ್ರಸಾದದ ರೂಪದಲ್ಲಿ ಕಹಿಬೇವಿನ ಸೊಪ್ಪುನ್ನು ತಿನ್ನುತ್ತಾರೆ. ಮಹೇಶ್ವರಮ್ಮನ ಜಾತ್ರೆಯಲ್ಲಿ ಪಾಲ್ಗೊಳ್ಳಲು ಹಾಗೂ ಬೇವಿನ ಎಳೆಯ ಪ್ರಸಾದ ಸ್ವೀಕರಿಸಲು ರಾಜ್ಯದ ನಾನಾಬಾಗಗಳಿಂದ ಜನರು ಆಗಮಿಸುತ್ತಾರೆ.

ಒಟ್ಟಾರೆ, ಕಹಿ ಕಹಿ ಬೇವು ಮಹೇಶ್ವರಮ್ಮ ಜಾತ್ರೆಯಲ್ಲಿ ಮಾತ್ರ ಸಿಹಿ ಆಗುತ್ತಂತೆ, ಮಕ್ಕಳಿಂದ ಹಿಡಿದು ವೃದ್ಧರವರೆಗೂ ಎಲ್ಲರೂ ಮುಗಿಬಿದ್ದು ಕವಿ ಬೇವನ್ನು ಪ್ರಸಾದವಾಗಿ ಸ್ವೀಕರಿಸಿ ಪಾವನರಾಗ್ತಾರೆ. ಇದು ಜನ ಮರಳೊ ಜಾತ್ರೆ ಮರಳೊ ಎನ್ನುವಂತಾಗಿದೆ. (ವರದಿ: ಭೀಮಪ್ಪ ಪಾಟೀಲ, ಟಿವಿ9 ಚಿಕ್ಕಬಳ್ಳಾಪುರ)
Published On - 9:34 pm, Fri, 7 April 23



















