- Kannada News Photo gallery Bridal photoshoot goes wrong after she holds beer bottle and cigarette in hand rmd
Viral Photo: ಬ್ರೈಡಲ್ ಫೋಟೋಶೂಟ್ ಮಾಡಿಸೋ ಭರದಲ್ಲಿ ವಿವಾದ ಮೈಮೇಲೆ ಎಳೆದುಕೊಂಡ ಯುವತಿ!
ಕೆಲ ತಿಂಗಳ ಹಿಂದೆ ವಧು ಒಬ್ಬಳು ವರನ ಜತೆ ಅರೆ ಬೆತ್ತಲಾಗಿ ಫೋಟೋ ತೆಗೆಸಿಕೊಂಡಿದ್ದಳು. ಈ ಫೋಟೋ ಸಾಕಷ್ಟು ವಿವಾದ ಸೃಷ್ಟಿಸಿತ್ತು. ಇದಾದ ಬೆನ್ನಲ್ಲೇ ಈಗ ಮತ್ತೊಂದು ಫೋಟೋಶೂಟ್ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ.
Updated on: Mar 29, 2021 | 5:12 PM

ಇತ್ತೀಚೆಗೆ ಪ್ರೀ-ವೆಡ್ಡಿಂಗ್ ಫೋಟೋಶೂಟ್ಗೆ ಸಾಕಷ್ಟು ಪ್ರಾಮುಖ್ಯತೆ ನೀಡಲಾಗುತ್ತಿದೆ. ಲಕ್ಷಾಂತರ ರೂಪಾಯಿ ನೀಡಿ ಗಂಡು-ಹೆಣ್ಣು ಫೋಟೋಶೂಟ್ ಮಾಡಿಸಿಕೊಳ್ಳುತ್ತಿದ್ದಾರೆ. ಆದರೆ, ಇತ್ತೀಚೆಗೆ ವೆಡ್ಡಿಂಗ್ ಫೋಟೋಶೂಟ್ ಹೆಸರಲ್ಲಿ ಆಭಾಸ ಎನಿಸುವ ಫೋಟೋಶೂಟ್ ಮಾಡಿಸುತ್ತಿರುವುದು ಚರ್ಚೆಗೆ ಕಾರಣವಾಗುತ್ತಿದೆ. ಇದಕ್ಕೆ ಈಗ ಮತ್ತೊಂದು ಸೇರ್ಪಡೆ ಆಗಿದೆ.

ಕೆಲ ತಿಂಗಳ ಹಿಂದೆ ವಧು ಒಬ್ಬಳು ವರನ ಜತೆ ಅರೆ ಬೆತ್ತಲಾಗಿ ಫೋಟೋ ತೆಗೆಸಿಕೊಂಡಿದ್ದಳು. ಈ ಫೋಟೋ ಸಾಕಷ್ಟು ವಿವಾದ ಸೃಷ್ಟಿಸಿತ್ತು. ಇದಾದ ಬೆನ್ನಲ್ಲೇ ಈಗ ಮತ್ತೊಂದು ಫೋಟೋಶೂಟ್ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ.

ಹುಡುಗಿ ಒಬ್ಬಳು ಮದುವೆಗೆ ಸಿದ್ಧವಾಗುವಂತೆ ಚಿನ್ನಾಭರಣ ಧರಿಸಿದ್ದಾರೆ. ಆದರೆ, ಅವರ ಕೈಯಲ್ಲಿ ಬಾಟಲಿ ಹಾಗೂ ಸಿಗರೇಟ್ ಕೂಡ ಇದೆ. ಮದ್ಯ ಸೇವನೆ ಮಾಡುತ್ತಾ ಆಕೆ ಸಿಗರೇಟ್ ಸೇದುತ್ತಿದ್ದಾಳೆ. ಮದುವೆ ಉಡುಗೆ ತೊಟ್ಟು ಕೈನಲ್ಲಿ ಬಾಟಲಿ ಹಾಗೂ ಸಿಗರೇಟ್ ಹಿಡಿದಿಟ್ಟುಕೊಂಡಿರುವುದು ಎಷ್ಟು ಸರಿ ಎಂದು ಅನೇಕರು ಪ್ರಶ್ನೆ ಮಾಡಿದ್ದಾರೆ. ಇನ್ನೂ ಕೆಲವರು ಒಂದು ಹೆಜ್ಜೆ ಮುಂದೆ ಹೋಗಿ, ಇದು ಹಿಂದೂ ಸಂಸ್ಕೃತಿಗೆ ಮಾಡಿದ ಅವಮಾನ ಎಂದು ಆರೋಪಿಸಿದ್ದಾರೆ.

ಸದ್ಯ, ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸಂಚಲನ ಸೃಷ್ಟಿಸಿದೆ. ಅಷ್ಟೇ ಅಲ್ಲ, ಕೆಲವರು ಈ ಬೋಲ್ಡ್ ಫೋಟೋಶೂಟ್ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಮೊದಲು ಋಷಿ ದಂಪತಿ ಲುಕ್ನಲ್ಲಿ ನವ ಜೋಡಿ ಫೋಟೋಶೂಟ್ ಮಾಡಿಸಿತ್ತು. ಇದು ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಭಾರೀ ಸಂಚಲನ ಸೃಷ್ಟಿಸಿತ್ತು.




