- Kannada News Photo gallery Bungee Jumping: Trying bungee jumping for the first time? Some Practical Tips keep in mind before bungee jumping, kannada information
Bungee Jumping: ಬಂಗೀ ಜಂಪಿಂಗ್ ಮೊದಲ ಬಾರಿಗೆ ಪ್ರಯತ್ನಿಸುತ್ತಿದ್ದೀರಾ? ಈ ಅಂಶವನ್ನು ನೆನಪಿನಲ್ಲಿಟ್ಟುಕೊಳ್ಳಿ
ಸಾಹಸಗಳನ್ನು ಇಷ್ಟ ಪಡುವವರಿಗೆ ಜೀವನದಲ್ಲಿ ಒಮ್ಮೆಯಾದರೂ ಎತ್ತರದ ಶಿಖರದಿಂದ ಬಂಗೀ ಜಂಪಿಂಗ್ ಮಾಡಬೇಕೆಂಬುದು ಕನಸಾಗಿರುತ್ತದೆನೀವು ಮೊದಲ ಬಾರಿಗೆ ಬಂಗೀ ಜಂಪಿಂಗ್ ಪ್ರಯತ್ನಿಸಲು ಮುಂದಾಗಿದ್ದರೆ, ಈ ಕೆಳಗಿನ ಸಲಹೆಗಳನ್ನು ಪಾಲಿಸಿ.
Updated on:Jan 28, 2023 | 12:13 PM

ಸಾಹಸಗಳನ್ನು ಇಷ್ಟ ಪಡುವವರಿಗೆ ಜೀವನದಲ್ಲಿ ಒಮ್ಮೆಯಾದರೂ ಎತ್ತರದ ಶಿಖರದಿಂದ ಬಂಗೀ ಜಂಪಿಂಗ್ ಮಾಡಬೇಕೆಂಬುದು ಕನಸಾಗಿರುತ್ತದೆ.ನೀವು ಮೊದಲ ಬಾರಿಗೆ ಬಂಗೀ ಜಂಪಿಂಗ್ ಪ್ರಯತ್ನಿಸಲು ಮುಂದಾಗಿದ್ದರೆ, ಈ ಕೆಳಗಿನ ಸಲಹೆಗಳನ್ನು ಪಾಲಿಸಿ.

ನೀವು ಬಂಗೀ ಜಂಪಿಂಗ್ಗೆ ಸಿದ್ಧರಾಗುತ್ತಿದ್ದರೆ ನೀವು ಧರಿಸುವ ಬಟ್ಟೆಯನ್ನು ಮೊದಲೇ ಆಯ್ಕೆ ಮಾಡಿ. ಟಿ-ಶರ್ಟ್‌ಗಳು, ಶಾರ್ಟ್ಸ್ ಅಥವಾ ಪ್ಯಾಂಟ್‌ಗಳಂತಹ ಬಟ್ಟೆಗಳನ್ನು ಧರಿಸಿ. ಸ್ಕರ್ಟ್, ಹೈ ಹೀಲ್ಸ್ ಧರಿಸುವುದನ್ನು ತಪ್ಪಿಸಿ. ಬದಲಾಗಿ ನೀವು ಬರಿ ಪಾದ ಅಥವಾ ಬೂಟುಗಳೊಂದಿಗೆ ಬಂಗೀ ಜಂಪ್ ಮಾಡಬಹುದು.

1, 2, 3... ಜಂಪ್ ಕೌಂಟ್ ಡೌನ್ ಮುಗಿಯುವ ಮೊದಲು ಜಿಗಿಯಿರಿ. ನೀವು ಜಿಗಿತದವರೆಗೆ ವ್ಯಕ್ತಿಯನ್ನು ಎಣಿಸಲು ಬಿಟ್ಟರೆ, ನೀವು ಮೊದಲ ಎಣಿಕೆಯಲ್ಲಿ ಜಿಗಿಯಲು ಹಿಂಜರಿಯುತ್ತೀರಿ.

ಯಾವಾಗಲೂ ನೇರವಾಗಿ ನೋಡಿ. ಕೆಳಗೆ ನೋಡಿದರೆ ಮೇಲಿನಿಂದ ಅದು ಭಯಾನಕವಾಗಿ ಕಾಣುತ್ತದೆ. ಒಂದೋ ನಿಮ್ಮ ಕಣ್ಣುಗಳನ್ನು ಮುಚ್ಚಿ ಕೂಡ ನೀವು ಜಂಪ್ ಮಾಡಬಹುದು.

ಜಂಪ್ ಟ್ರೈನರ್ರನ್ನು ಹೇಳುವ ಸಲಹೆ ಪಾಲಿಸಿ. ಜಂಪ್ ಟ್ರೈನರ್ ಇದರ ಕುರಿತು ಸರಿಯಾಗಿ ತಿಳಿದಿರುವುದರಿಂದ ಅವರ ನೀಡುವ ಸಲಹೆ ಪಾಲಿಸುವುದು ಸೂಕ್ತವಾಗಿದೆ.

ಬಂಗೀ ಜಂಪಿಂಗ್ ಮೊದಲು ಆಹಾರ ಕ್ರಮದ ಬಗ್ಗೆ ತಿಳಿದುಕೊಳ್ಳುವುದು ಅಗತ್ಯವಾಗಿದೆ. ಅತಿಯಾಗಿ ತಿನ್ನಬೇಡಿ. ಖಾಲಿ ಹೊಟ್ಟೆಯಲ್ಲಿ ಜಿಗಿಯುವುದು ಉತ್ತಮವಾಗಿದೆ.

ಮೊಬೈಲ್, ಕ್ಯಾಮರಾ, ಆಭರಣ ಅಥವಾ ಇನ್ಯಾವುದನ್ನೂ ಕೊಂಡೊಯ್ಯಲು ನಿಮಗೆ ಅನುಮತಿ ಇಲ್ಲ. ಆದ್ದರಿಂದ, ನೀವು ಜಿಗಿಯುವಾಗ ಅವುಗಳನ್ನು ಒಯ್ಯಬೇಡಿ.

ಬಂಗೀ ಜಂಪಿಂಗ್ಗೆ ಅನುಮತಿಗೆ ನೀವು ಸಹಿ ಮಾಡುವ ಮೊದಲು ನಿರ್ದೇಶನಗಳನ್ನು ಸರಿಯಾಗಿ ಓದಿ. ಪಟ್ಟಿಯಲ್ಲಿ ಉಲ್ಲೇಖಿಸಿರುವ ಹೃದಯದ ಸಮಸ್ಯೆ, ಬೆನ್ನುನೋವು ಮುಂತಾದ ಯಾವುದೇ ದೀರ್ಘಕಾಲದ ಅಸ್ವಸ್ಥತೆಗಳಿದ್ದರೆ ಪ್ರಯತ್ನಿಸಬೇಡಿ.
Published On - 12:13 pm, Sat, 28 January 23









