AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Chitradurga: 32 ವರ್ಷಗಳ ಬಳಿಕ ಕೋಟೆನಾಡಲ್ಲಿ ವಿಶೇಷ ಜಾತ್ರೆ ಸಂಭ್ರಮ, ಇಡೀ ಊರಲ್ಲಿ ಪಾದರಕ್ಷೆ ನಿಷೇಧ

ಕೋಟೆನಾಡು ಚಿತ್ರದುರ್ಗ ತಾಲೂಕಿನ ಬೊಮ್ಮೇನಹಳ್ಳಿಯಲ್ಲಿ 32 ವರ್ಷಗಳ ಬಳಿಕ ಗ್ರಾಮ ದೇವತೆಯರ ಉತ್ಸವ ನಡೆಯುತ್ತಿದೆ. ಈ ಉತ್ಸವದ ವಿಶೇಷ ಅಂದ್ರೆ ಸರಗಾ. ಅಂದ್ರೆ ಇಡೀ ಗ್ರಾಮದ ಸೀಮೆಗೆ ವಿಶೇಷ ಗಂಗಾಜಲ ಚಿಮುಕಿಸಿ ಸರಗಾ ಹಾಕಲಾಗುತ್ತದೆ.

TV9 Web
| Updated By: ಆಯೇಷಾ ಬಾನು

Updated on:Jan 20, 2023 | 8:13 AM

ದೇವಸ್ಥಾನಗಳಿಗೆ ಹೋಗುವಾಗ ಚಪ್ಪಲಿ ಧರಿಸುವಂತಿಲ್ಲ. ದೇವರ ಸನ್ನಿಧಿಗೆ ಹೋಗುವಾಗ ಪಾದರಕ್ಷೆ ಹಾಕುವಂತಿಲ್ಲ ನಿಜ. ಆದ್ರೆ ಅದೊಂದು ಊರಿಗೆ ಎಂಟ್ರಿಯಾಗಬೇಕು ಅಂದ್ರೆ ಚಪ್ಪಲಿಯನ್ನ ಬಿಟ್ಟೇ ಹೋಗ್ಬೇಕು. ಆ ಊರಿನ ರಸ್ತೆ ಮೂಲಕ ಮುಂದಿನ ಊರಿಗೆ ಹೋಗಬೇಕು ಅಂದ್ರೂ ಚಪ್ಪಲಿಯನ್ನ ಕೈಯಲ್ಲೇ ಹಿಡಿಯ ಬೇಕು.

1 / 6
ಮೂರು ದಶಕಗಳ ಬಳಿಕ ಗ್ರಾಮ ದೇವತೆಯ ಜಾತ್ರೆ ನಡೆಯುತ್ತಿದೆ. ಇಡೀ ಊರು ಸಂಭ್ರಮದಲ್ಲಿದೆ. ಹೀಗೆ ಸಂಭ್ರಮದ ನಡುವೆ ಇಲ್ಲೊಂದು ವಿಶೇಷ ಆಚರಣೆಯೂ ನಡೆಯುತ್ತಿದೆ. ಕೋಟೆನಾಡು ಚಿತ್ರದುರ್ಗ ತಾಲೂಕಿನ ಬೊಮ್ಮೇನಹಳ್ಳಿಯಲ್ಲಿ 32 ವರ್ಷಗಳ ಬಳಿಕ ಗ್ರಾಮ ದೇವತೆಯರ ಉತ್ಸವ ನಡೆಯುತ್ತಿದೆ.

2 / 6
ಗ್ರಾಮದ ದುರ್ಗಾಂಬಾ, ಮಾರಿಕಾಂಬಾ ಹಾಗೂ ಬಸಾಯ ಪಟ್ಟಣಂ ದೇವಿಯರ ಉತ್ಸವವನ್ನ ಗ್ರಾಮಸ್ಥರು ಆಯೋಜಿಸಿದ್ದಾರೆ. ಮೊದಲ ದಿನ ಗಂಗಾಪೂಜೆ, ಉತ್ಸವ ಮೂರ್ತಿಗಳ ಮೆರವಣಿಗೆ, ವಿಶೇಷ ಪೂಜಾ ಆಚರಣೆ ನಡೆದಿದೆ.

3 / 6
ಇನ್ನು ಈ  ಉತ್ಸವದ ವಿಶೇಷ ಅಂದ್ರೆ ಸರಗಾ. ಅಂದ್ರೆ ಇಡೀ ಗ್ರಾಮದ ಸೀಮೆಗೆ ವಿಶೇಷ ಗಂಗಾಜಲ ಚಿಮುಕಿಸಿ ಸರಗಾ ಹಾಕಲಾಗುತ್ತದೆ. ಗ್ರಾಮಕ್ಕೆ ಗ್ರಾಮವನ್ನೇ ಶುದ್ಧಗೊಳಿಸಿ ಒಂದೇ ಮನೆಯಂತೆ ಭಾವಿಸಲಾಗುತ್ತೆ. ಇದೇ ಕಾರಣಕ್ಕೆ ಇಲ್ಲಿ ಯಾರು ಕೂಡಾ ಚಪ್ಪಲಿ ಧರಿಸುವಂತಿಲ್ಲ.

4 / 6
ಗ್ರಾಮದಲ್ಲಿ ಓಡಾಡುವವರು ಮಾತ್ರವಲ್ಲ ಈ ಗ್ರಾಮದ ರಸ್ತೆಯಲ್ಲಿ ಹಾದು ಹೋಗುವವರು ಸಹ ಪಾದರಕ್ಷೆ ಧರಿಸುವಂತಿಲ್ಲ. ಬೈಕ್ ಮತ್ತು ಕಾರಿನಲ್ಲಿ ಸಂಚರಿಸುವವರು  ಕೂಡಾ ಪಾದರಕ್ಷೆ ತೆಗೆದು ಬ್ಯಾಗ್‌ಗಳಲ್ಲಿಟ್ಟುಕೊಂಡು ಹೋಗುವಂತೆ ಸೂಚಿಸಲಾಗುತ್ತದೆ. ಅದಕ್ಕೆಂದೆ ಗ್ರಾಮದ ಕೆಲ ಯುವಕರು ನಿಗಾವಹಿಸುತ್ತಾರೆ.

5 / 6
ಒಟ್ನಲ್ಲಿ ಆಧುನಿಕತೆ ಭರಾಟೆ, ಭಕ್ತಿಭಾವ ಮರೆಯಾಗಿರೋ ಈ ದಿನಗಳಲ್ಲಿ ಕೋಟೆನಾಡಿನ ಜನ ಮಾತ್ರ ಹಿಂದಿನಿಂದಲೂ ತಮ್ಮ ಸಂಪ್ರದಾಯ, ಆಚರಣೆಗಳಿಗೆ ಮಾತ್ರ ಎಳ್ಳುನೀರು ಬಿಡದೆ ಶ್ರದ್ಧೆಯಿಂದ ಆಚರಿಸುತ್ತಾರೆ. ಅದಕ್ಕೆ ಸಾಕ್ಷಿಯೇ ಈ ಉತ್ಸವ.

6 / 6

Published On - 8:13 am, Fri, 20 January 23

Follow us
ಲೈಂಗಿಕ ದೌರ್ಜನ್ಯ ನಡೆಸಿ ವಿಡಿಯೋ ಮಾಡಿದ್ದಾನೆ: ಮಡೆನೂರು ಮನು ಮೇಲೆ ಆರೋಪ

ಕೆಣಕ್ಕಿದ ಸಿರಾಜ್​ಗೆ ಪೂರನ್ ನೀಡಿದ ಉತ್ತರ ಹೇಗಿತ್ತು ಗೊತ್ತಾ?

ಗುಜರಾತ್ ವಿರುದ್ಧ ಸಿಡಿಲಬ್ಬರದ ಶತಕ ಸಿಡಿಸಿದ ಮಿಚೆಲ್ ಮಾರ್ಷ್

ಭಾರತೀಯ ಸೇನೆ ಮಾಹಿತಿಯನ್ನು ಪಾಕಿಸ್ತಾನಕ್ಕೆ ಕಳಿಸುತ್ತಿದ್ದ ಇಬ್ಬರ ಬಂಧನ

ಇಲಿಗಳು ತಿಂದ ಆಹಾರವೇ ಈ ದೇವಸ್ಥಾನದ ಪ್ರಸಾದ: ಏನಿದರ ವಿಶೇಷತೆ?

ಬಿಜೆಪಿ ನಾಯಕರೆಲ್ಲ ಜೊತೆಗಿದ್ದೇವೆ, ನಮ್ಮ ಹೋರಾಟ ನಿಲ್ಲಲ್ಲ: ಚಲವಾದಿ

ಗುಜರಾತ್​ನ ದಾಹೋದ್​ನಲ್ಲಿ 32 ವರ್ಷಗಳ ಬಳಿಕ ಹುಲಿ ಪ್ರತ್ಯಕ್ಷ

ಗುತ್ತಿಗೆದಾರರಿಗೆ ಹಣ ಪಾವತಿಯಾಗದ ಕಾರಣ ಸಾಯಿ ಲೇಔಟ್​ನಲ್ಲಿ ಸಮಸ್ಯೆ: ನಿಖಿಲ್

‘ಅವನು ಸಾಯೋ ಬದಲು ಇವನು ಸಾಯಬಾರದಾ ಎಂದಿದ್ರು’: ಮಡೆನೂರು ಮನು

ಕೇಂದ್ರಕ್ಕೆ ಪವರ್ ಇಲ್ಲ...ರಾಮನಗರ ಹೆಸರು ಬದಲಾವಣೆ ಬಗ್ಗೆ ಡಿಕೆಶಿ ಸ್ಪಷ್ಟನೆ