- Kannada News Photo gallery CN Manjunath who defeated DK Suresh, Do you know where Manjunath got the lead in Bengaluru Rural Kannada News
ಡಿಕೆ ಸುರೇಶ್ಗೆ ಸೋಲುಣಿಸಿದ ಡಾಕ್ಟರ್: ಮಂಜುನಾಥ್ಗೆ ಲೀಡ್ ಬಂದಿದ್ದು ಎಲ್ಲೆಲ್ಲಿ ಗೊತ್ತಾ?
ಇಂದು(ಜೂ.04) ಲೋಕಸಭಾ ಚುನಾವಣೆ 2024ರ ಫಲಿತಾಂಶ ಹೊರ ಬಿದ್ದಿದೆ. ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ (Bengaluru Rural Lok Sabha Constituency)ದಿಂದ ಬಿಜೆಪಿಯ ಡಾ. ಸಿ ಎನ್ ಮಂಜುನಾಥ್ (CN Manjunath) ಮತ್ತು ಕಾಂಗ್ರೆಸ್ನಿಂದ ಡಿಕೆ ಸುರೇಶ್ (DK Suresh) ಪ್ರಮುಖ ಅಭ್ಯರ್ಥಿಗಳಾಗಿ ಕಣದಲ್ಲಿದ್ದರು. ಇದೀಗ ಡಾ. ಸಿ ಎನ್ ಮಂಜುನಾಥ್ ಪ್ರಥಮ ಬಾರಿಗೆ ಚುನಾವಣೆಯಲ್ಲಿ ಸ್ಪರ್ಧಿಸಿ , ಮಂಜುನಾಥ್ ಅವರು 10,38,964 ಮತಗಳಿಸಿದ್ದು, ಘಟಾನುಘಟಿ ನಾಯಕ ಡಿಕೆ ಸುರೇಶ್ ಅವರನ್ನು ಎರಡು ಲಕ್ಷಕ್ಕೂ ಅಧಿಕ ಅಂತರದಿಂದ ಸೋಲಿಸಿದ್ದು, ಇದು ರಾಜಕೀಯ ವಲಯದಲ್ಲಿ ಅಚ್ಚರಿಗೆ ಕಾರಣವಾಗಿದೆ.
Updated on: Jun 04, 2024 | 6:04 PM

ರಾಮನಗರ ವಿಧಾನಸಭಾ ಕ್ಷೇತ್ರ ಡಾ.ಮಂಜುನಾಥ್-91945 ಡಿ.ಕೆ.ಸುರೇಶ್-92090 ಕ್ಷೇತ್ರದ ಲೀಡ್-145(ಕಾಂಗ್ರೆಸ್)

ಮಾಗಡಿ ವಿಧಾನಸಭಾ ಕ್ಷೇತ್ರ ಡಾ.ಮಂಜುನಾಥ್-113911 ಡಿ.ಕೆ.ಸುರೇಶ್-83938 ಕ್ಷೇತ್ರದ ಲೀಡ್-29973(ಬಿಜೆಪಿ)

ಚನ್ನಪಟ್ಟಣ ವಿಧಾನಸಭಾ ಕ್ಷೇತ್ರ ಡಾ.ಮಂಜುನಾಥ್-106971 ಡಿ.ಕೆ.ಸುರೇಶ್-85357 ಕ್ಷೇತ್ರದ ಲೀಡ್-21614(ಬಿಜೆಪಿ)

ಕನಕಪುರ ವಿಧಾನಸಭಾ ಕ್ಷೇತ್ರ ಡಾ.ಮಂಜುನಾಥ್-83303 ಡಿ.ಕೆ.ಸುರೇಶ್-108980 ಕ್ಷೇತ್ರದ ಲೀಡ್-25677(ಕಾಂಗ್ರೆಸ್)

ಕುಣಿಗಲ್ ವಿಧಾನಸಭಾ ಕ್ಷೇತ್ರ ಡಾ.ಮಂಜುನಾಥ್-97248 ಡಿ.ಕೆ.ಸುರೇಶ್-73410 ಕ್ಷೇತ್ರದ ಲೀಡ್-23838(ಬಿಜೆಪಿ)

ಅನೆಕಲ್ ವಿಧಾನಸಭಾ ಕ್ಷೇತ್ರ ಡಾ.ಮಂಜುನಾಥ್-137693 ಡಿ.ಕೆ.ಸುರೇಶ್-115328 ಕ್ಷೇತ್ರದ ಲೀಡ್-22365(ಬಿಜೆಪಿ)

ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ಡಾ.ಮಂಜುನಾಥ್-255756 ಡಿ.ಕೆ.ಸುರೇಶ್-158627 ಕ್ಷೇತ್ರದ ಲೀಡ್-97129(ಬಿಜೆಪಿ)

ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರ ಡಾ.ಮಂಜುನಾಥ್-188726 ಡಿ.ಕೆ.ಸುರೇಶ್-89729 ಕ್ಷೇತ್ರದ ಲೀಡ್-98997(ಬಿಜೆಪಿ)




