
IPL 2026: ಇಂಡಿಯನ್ ಇಂಡಿಯನ್ ಪ್ರೀಮಿಯರ್ ಲೀಗ್ ಮುಕ್ತಾಯದ ಹಂತಕ್ಕೆ ಬಂದು ನಿಂತಿದೆ. ಈಗಾಗಲೇ 72 ಪಂದ್ಯಗಳು ಮುಗಿದಿದೆ. ಇನ್ನುಳಿದಿರುವುದು ಕೇವಲ 2 ಮ್ಯಾಚ್ ಮಾತ್ರ. ಈ ಎರಡು ಪಂದ್ಯಗಳ ಮೂಲಕ ಈ ಬಾರಿ ಆರೆಂಜ್ ಕ್ಯಾಪ್ ಗೆಲ್ಲೋರು ಯಾರು ಎಂಬುದು ನಿರ್ಧಾರವಾಗಲಿದೆ. ಸದ್ಯ ನಾಲ್ವರು ಆಟಗಾರರ ನಡುವೆ ಆರೆಂಜ್ ಕ್ಯಾಪ್ಗಾಗಿ ನೇರ ಪೈಪೋಟಿ ಇದ್ದು, ಆ ಆಟಗಾರರು ಯಾರೆಂದರೆ... (PC: IPL)

1- ವೈಭವ್ ಸೂರ್ಯವಂಶಿ: ರಾಜಸ್ಥಾನ್ ರಾಯಲ್ಸ್ ತಂಡದ ಯುವ ದಾಂಡಿಗ ವೈಭವ್ ಸೂರ್ಯವಂಶಿ ಆರೆಂಜ್ ಕ್ಯಾಪ್ ರೇಸ್ನಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಈವರೆಗೆ 15 ಇನಿಂಗ್ಸ್ ಆಡಿರುವ ವೈಭವ್ 1 ಶತಕ ಹಾಗೂ 4 ಅರ್ಧಶತಕಗಳೊಂದಿಗೆ 280 ಎಸೆತಗಳಲ್ಲಿ ಒಟ್ಟು 680 ರನ್ ಬಾರಿಸಿದ್ದಾರೆ. (PC: IPL)

2- ಸಾಯಿ ಸುದರ್ಶನ್: ಗುಜರಾತ್ ಟೈಟಾನ್ಸ್ ತಂಡದ ಆರಂಭಿಕ ದಾಂಡಿಗ ಸಾಯಿ ಸುದರ್ಶನ್ ಆರೆಂಜ್ ಕ್ಯಾಪ್ ರೇಸ್ನಲ್ಲಿ ದ್ವಿತೀಯ ಸ್ಥಾನದಲ್ಲಿದ್ದಾರೆ. ಈವರೆಗೆ 15 ಇನಿಂಗ್ಸ್ ಆಡಿರುವ ಸಾಯಿ ಸುದರ್ಶನ್ 413 ಎಸೆತಗಳನ್ನು ಎದುರಿಸಿ ಒಟ್ಟು 652 ರನ್ ಕಲೆಹಾಕಿದ್ದಾರೆ. (PC: IPL)

3- ಶುಭ್ಮನ್ ಗಿಲ್: ಗುಜರಾತ್ ಟೈಟಾನ್ಸ್ ತಂಡದ ನಾಯಕ ಶುಭ್ಮನ್ ಗಿಲ್ ಕೂಡ ಆರೆಂಜ್ ಕ್ಯಾಪ್ ರೇಸ್ನಲ್ಲಿದ್ದಾರೆ. ಈವರೆಗೆ 14 ಇನಿಂಗ್ಸ್ ಆಡಿರುವ ಶುಭ್ಮನ್ ಗಿಲ್ 6 ಅರ್ಧಶತಕಗಳನ್ನು ಬಾರಿಸಿದ್ದಾರೆ. ಅಲ್ಲದೆ 388 ಎಸೆತಗಳಲ್ಲಿ 618 ರನ್ ಕಲೆಹಾಕಿದ್ದಾರೆ. (PC: IPL)

4- ವಿರಾಟ್ ಕೊಹ್ಲಿ: ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ 15 ಇನಿಂಗ್ಸ್ ಆಡಿರುವ ವಿರಾಟ್ ಕೊಹ್ಲಿ ಈವರೆಗೆ 365 ಎಸೆತಗಳನ್ನು ಎದುರಿಸಿದ್ದಾರೆ. ಈ ವೇಳೆ ಕಲೆಹಾಕಿರುವುದು ಬರೋಬ್ಬರಿ 600 ರನ್ಗಳು. ಇನ್ನು ಫೈನಲ್ ಮ್ಯಾಚ್ನಲ್ಲಿ ಪ್ರಚಂಡ ಪ್ರದರ್ಶನ ನೀಡಿದರೆ ಆರೆಂಜ್ ಕ್ಯಾಪ್ ಅನ್ನು ತಮ್ಮದಾಗಿಸಿಕೊಳ್ಳಬಹುದು. (PC: IPL)