ಇದೀಗ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಿಂದ ವಿರಾಟ್ ಕೊಹ್ಲಿ ಹೊರಗುಳಿದಿದ್ದಾರೆ. ಈ ಬಗ್ಗೆ ಯೂಟ್ಯೂಬ್ ವಿಡಿಯೋ ಮಾಡಿರುವ ಎಬಿಡಿ, ಕೊಹ್ಲಿ ಕುಟುಂಬದಲ್ಲಿ ಏನು ನಡೆಯುತ್ತಿದೆ ಎಂಬುದರ ಬಗ್ಗೆ ನಿಖರ ಮಾಹಿತಿಯಿಲ್ಲ. ನಾವೆಲ್ಲರೂ ಅವರ ವೈಯುಕ್ತಿಕ ಜೀವನವನ್ನು ಗೌರವಿಸಬೇಕಾಗುತ್ತದೆ. ಈ ಹಿಂದಿನ ನನ್ನ ಶೋನಲ್ಲಿ ನಾನು ಪ್ರಮಾದ ಮಾಡಿದ್ದೇನೆ. ಅದಕ್ಕಾಗಿ ನಾನು ವಿರಾಟ್ ಕೊಹ್ಲಿ ಕುಟುಂಬದೊಂದಿಗೆ ಕ್ಷಮೆಯಾಚಿಸುತ್ತೇನೆ ಎಂದು ಎಬಿ ಡಿವಿಲಿಯರ್ಸ್ ತಿಳಿಸಿದ್ದಾರೆ.