31 ಸಿಕ್ಸ್, 8 ಫೋರ್: ಮಹಾರಾಜ ಟೂರ್ನಿಯಲ್ಲಿ ಅಭಿನವ್ ಆರ್ಭಟ

Abhinav Manohar: ಅಭಿನವ್ ಮನೋಹರ್ ಐಪಿಎಲ್ 2022 ರಿಂದ ಗುಜರಾತ್ ಟೈಟಾನ್ಸ್ ತಂಡದಲ್ಲಿದ್ದಾರೆ. ಜಿಟಿ ಪರ ಮಧ್ಯಮ ಕ್ರಮಾಂಕದಲ್ಲಿ 15 ಇನಿಂಗ್ಸ್ ಆಡಿರುವ ಅಭಿನವ್ 10 ಭರ್ಜರಿ ಸಿಕ್ಸ್ ಹಾಗೂ 21 ಫೋರ್​ಗಳೊಂದಿಗೆ ಒಟ್ಟು 231 ರನ್ ಕಲೆಹಾಕಿದ್ದಾರೆ. ಈ ಬಾರಿ ಮೆಗಾ ಹರಾಜು ನಡೆಯುತ್ತಿರುವುದರಿಂದ ಅಭಿನವ್ ಮನೋಹರ್ ಅವರು ಆಕ್ಷನ್​ನಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ.

|

Updated on: Aug 25, 2024 | 12:53 PM

ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಮಹಾರಾಜ ಟ್ರೋಫಿ ಟಿ20 ಟೂರ್ನಿಯಲ್ಲಿ ಅಭಿನವ್ ಮನೋಹರ್ ಅವರ ಆರ್ಭಟ ಮುಂದುವರೆದಿದೆ. ಶಿವಮೊಗ್ಗ ಲಯನ್ಸ್ ಪರ ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿಯುತ್ತಿರುವ ಅಭಿನವ್ ಈವರೆಗೆ 329 ರನ್​ಗಳನ್ನು ಕಲೆಹಾಕಿದ್ದಾರೆ. ಅದು ಸಹ ಕೇವಲ 7 ಪಂದ್ಯಗಳ ಮೂಲಕ ಎಂಬುದು ವಿಶೇಷ.

1 / 6
ಮೈಸೂರು ವಾರಿಯರ್ಸ್ ವಿರುದ್ಧದ ಪಂದ್ಯದ ಮೂಲಕ ಮಹಾರಾಜ ಟ್ರೋಫಿ ಅಭಿಯಾನ ಆರಂಭಿಸಿದ್ದ ಅಭಿನವ್ ಮೊದಲ ಪಂದ್ಯದಲ್ಲೇ 29 ಎಸೆತಗಳಲ್ಲಿ ಅಜೇಯ 52 ರನ್ ಬಾರಿಸಿದ್ದರು. ಇದಾದ ಬಳಿಕ ಮಂಗಳೂರು ಡ್ರಾಗನ್ಸ್ ವಿರುದ್ಧ ಕೇವಲ 34 ಎಸೆತಗಳಲ್ಲಿ ಅಜೇಯ 84 ರನ್​ ಚಚ್ಚಿದ್ದರು.

2 / 6
ಬ್ಯಾಕ್ ಟು ಬ್ಯಾಕ್ ಎರಡು ಅರ್ಧಶತಕ ಸಿಡಿಸಿದ್ದ ಅಭಿನವ್ ಬೆಂಗಳೂರು ಬ್ಲಾಸ್ಟರ್ಸ್ ಹಾಗೂ ಹುಬ್ಬಳ್ಳಿ ಟೈಗರ್ಸ್ ವಿರುದ್ಧ ಕ್ರಮವಾಗಿ 5 ಮತ್ತು 17 ರನ್​ಗಳಿಸಲಷ್ಟೇ ಶಕ್ತರಾಗಿದ್ದರು. ಆದರೆ ಗುಲ್ಬರ್ಗ ಮಿಸ್ಟಿಕ್ಸ್ ವಿರುದ್ಧದ ಪಂದ್ಯದಲ್ಲಿ ಮತ್ತೆ ಲಯ ಕಂಡುಕೊಂಡ ಬಲಗೈ ದಾಂಡಿಗ 36 ಎಸೆತಗಳಲ್ಲಿ 55 ರನ್ ಸಿಡಿಸಿದರು.

3 / 6
ಇನ್ನು ಮೈಸೂರು ವಾರಿಯರ್ಸ್ ವಿರುದ್ಧದ ಪಂದ್ಯದಲ್ಲಿ ಮತ್ತೆ ಅಬ್ಬರಿಸಿದ ಅಭಿನವ್ 29 ಎಸೆತಗಳಲ್ಲಿ 46 ರನ್ ಬಾರಿಸಿದ್ದಾರೆ. ಅಲ್ಲದೆ ಕಳೆದ ಪಂದ್ಯದಲ್ಲಿ ಹುಬ್ಬಳ್ಳಿ ಟೈಗರ್ಸ್ ಸಿಡಿಲಬ್ಬರದ ಬ್ಯಾಟಿಂಗ್​ ಪ್ರದರ್ಶಿಸಿ ಕೇವಲ 27 ಎಸೆತಗಳಲ್ಲಿ 70 ರನ್ ಚಚ್ಚಿದ್ದಾರೆ. ಈ ಮೂಲಕ 7 ಪಂದ್ಯಗಳಿಂದ ಅಭಿನವ್ ಮನೋಹರ್ 329 ರನ್ ಕಲೆಹಾಕಿದ್ದಾರೆ.

4 / 6
ವಿಶೇಷ ಎಂದರೆ ಈ ಏಳು ಪಂದ್ಯಗಳಲ್ಲಿ ಅಭಿನವ್ ಮನೋಹರ್ ಬ್ಯಾಟ್​ನಿಂದ ಮೂಡಿಬಂದಿರುವುದು ಕೇವಲ 8 ಫೋರ್​ಗಳು. ಆದರೆ ಮೂಡಿಬಂದ ಸಿಕ್ಸ್​ಗಳ ಸಂಖ್ಯೆ 31. ಅಂದರೆ ಫೋರ್​ಗಿಂತ ಸಿಕ್ಸ್​ಗಳ ಮೂಲಕ ರನ್​​ಗಳಿಸುತ್ತಿರುವ ಅಭಿನವ್ ಮನೋಹರ್ ಮಹಾರಾಜ ಟೂರ್ನಿಯಲ್ಲಿ ಸಂಚಲನ ಸೃಷ್ಟಿಸಿದ್ದಾರೆ. ಈ ಮೂಲಕ ಐಪಿಎಲ್ ಫ್ರಾಂಚೈಸಿಗಳ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.

5 / 6
ಅಂದಹಾಗೆ ಐಪಿಎಲ್​ನಲ್ಲಿ ಅಭಿನವ್ ಮನೋಹರ್ ಗುಜರಾತ್ ಟೈಟಾನ್ಸ್ ಪರ ಕಣಕ್ಕಿಳಿದಿದ್ದಾರೆ. 2022 ರಿಂದ ಗುಜರಾತ್ ಟೈಟಾನ್ಸ್ ತಂಡದ ಭಾಗವಾಗಿರುವ ಅವರು 15 ಇನಿಂಗ್ಸ್​ಗಳಲ್ಲಿ 10 ಭರ್ಜರಿ ಸಿಕ್ಸ್ ಹಾಗೂ 21 ಫೋರ್​ಗಳೊಂದಿಗೆ ಒಟ್ಟು 231 ರನ್ ಕಲೆಹಾಕಿದ್ದಾರೆ.

6 / 6
Follow us