ಜಪಾನ್ ವಿರುದ್ಧವೂ ಸೊನ್ನೆ ಸುತ್ತಿ ಅನಗತ್ಯ ದಾಖಲೆ ಬರೆದ ಅಭಿಷೇಕ್

Updated on: Sep 22, 2026 | 5:13 PM

ಅಭಿಷೇಕ್ ಶರ್ಮಾ ಅವರ ಟಿ20 ಕ್ರಿಕೆಟ್‌ನ ಅನಗತ್ಯ ದಾಖಲೆಗಳನ್ನು ಈ ಲೇಖನ ವಿವರಿಸುತ್ತದೆ. ಜಪಾನ್ ವಿರುದ್ಧ ಗೋಲ್ಡನ್ ಡಕ್ ಆಗುವ ಮೂಲಕ ಅವರು 2026ರಲ್ಲಿ 10ನೇ ಬಾರಿಗೆ ಸೊನ್ನೆ ಸುತ್ತಿದರು. ಇದು ಒಂದೇ ವರ್ಷದಲ್ಲಿ 10 ಟಿ20 ಡಕ್‌ಔಟ್ ಆದ ಮೊದಲ ಬ್ಯಾಟ್ಸ್‌ಮನ್ ಎಂಬ ಕುಖ್ಯಾತಿಯನ್ನು ನೀಡಿದೆ. ಜೊತೆಗೆ, ಅಂತರಾಷ್ಟ್ರೀಯ ಟಿ20ಯಲ್ಲಿ ಅತಿ ಹೆಚ್ಚು ಗೋಲ್ಡನ್ ಡಕ್ ಆದ ಭಾರತೀಯ ಆರಂಭಿಕ ಎಂಬ ರೋಹಿತ್ ಶರ್ಮಾ ಅವರ ದಾಖಲೆಯನ್ನೂ ಮುರಿದರು.

1 / 5
ಜಪಾನ್ ವಿರುದ್ಧದ ಏಕೈಕ ಟಿ20 ಪಂದ್ಯವನ್ನು ಟೀಂ ಇಂಡಿಯಾ ಕೇವಲ 2 ರನ್​ಗಳಿಂದ ಗೆದ್ದುಕೊಂಡಿತು. ಮಳೆಯಿಂದಾಗಿ ತಲಾ 5 ಓವರ್​ಗಳಿಗೆ ಸೀಮಿತವಾಗಿದ್ದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಟೀಂ ಇಂಡಿಯಾ ಕೇವಲ 32 ರನ್ ಕಲೆಹಾಕಿತು.  ಇಷ್ಟು ರನ್ ಕಲೆಹಾಕಲು ಬರೋಬ್ಬರಿ 4 ವಿಕೆಟ್‌ಗಳನ್ನು ಕಳೆದುಕೊಂಡಿತು(PC-PTI).

ಜಪಾನ್ ವಿರುದ್ಧದ ಏಕೈಕ ಟಿ20 ಪಂದ್ಯವನ್ನು ಟೀಂ ಇಂಡಿಯಾ ಕೇವಲ 2 ರನ್​ಗಳಿಂದ ಗೆದ್ದುಕೊಂಡಿತು. ಮಳೆಯಿಂದಾಗಿ ತಲಾ 5 ಓವರ್​ಗಳಿಗೆ ಸೀಮಿತವಾಗಿದ್ದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಟೀಂ ಇಂಡಿಯಾ ಕೇವಲ 32 ರನ್ ಕಲೆಹಾಕಿತು. ಇಷ್ಟು ರನ್ ಕಲೆಹಾಕಲು ಬರೋಬ್ಬರಿ 4 ವಿಕೆಟ್‌ಗಳನ್ನು ಕಳೆದುಕೊಂಡಿತು(PC-PTI).

2 / 5

ಪತನಗೊಂಡ 4 ವಿಕೆಟ್​ಗಳಲ್ಲಿ ಮೂರು ಆಟಗಾರರಿಗೆ ಒಂದಂಕಿ ಮೊತ್ತವನ್ನು ದಾಟಲು ಸಾಧ್ಯವಾಗಲಿಲ್ಲ. ಅದರಲ್ಲೂ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾಗೆ ಖಾತೆ ತೆರೆಯಲು ಸಾಧ್ಯವಾಗಲಿಲ್ಲ. ಜಪಾನ್​ನಂತಹ ದುರ್ಬಲ ತಂಡದೆದುರು ಗೋಲ್ಡನ್ ಡಕ್​ಗೆ ಅಂದರೆ ಮೊದಲ ಎಸೆತದಲ್ಲೇ ವಿಕೆಟ್​ ಒಪ್ಪಿಸಿದ ಅಭಿಷೇಕ್ ಅನಗತ್ಯ ದಾಖಲೆಯನ್ನು ತನ್ನ ಖಾತೆಗೆ ಹಾಕಿಕೊಂಡರು(PC-PTI).

3 / 5

ಅಫ್ಘಾನಿಸ್ತಾನ್ ವಿರುದ್ಧದ ಟಿ20 ಸರಣಿಯಲ್ಲಿ ರನ್​ಗಳ ಮಳೆ ಹರಿಸಿದ್ದ ಅಭಿಷೇಕ್, ಈ ಪಂದ್ಯದಲ್ಲಿ ನಿರಾಸೆ ಮೂಡಿಸಿದರು. ಇದು ವರ್ಷದಲ್ಲಿ ಅಂದರೆ 2026 ರಲ್ಲಿ ಅಭಿಷೇಕ್ ದಾಖಲಿಸಿದ 10ನೇ ಡಕ್ ಔಟ್ ಆಗಿದೆ. ಈ ಮೂಲಕ ಅಭಿಷೇಕ್ ಟಿ20 ಕ್ರಿಕೆಟ್ ಇತಿಹಾಸದಲ್ಲಿ ಒಂದೇ ವರ್ಷದಲ್ಲಿ 10 ಬಾರಿ ಡಕ್‌ಗೆ ಔಟಾದ ಮೊದಲ ಬ್ಯಾಟ್ಸ್‌ಮನ್ ಎಂಬ ಕುಖ್ಯಾತಿಗೆ ಪಾತ್ರರಾಗಿದ್ದಾರೆ(PC-PTI).

4 / 5

ಇದರ ಜೊತೆಗೆ ಟಿ20 ಕ್ರಿಕೆಟ್‌ನ ಕ್ಯಾಲೆಂಡರ್ ವರ್ಷದಲ್ಲಿ ಅತಿ ಹೆಚ್ಚು ಸೊನ್ನೆ ಸುತ್ತಿದ ಬ್ಯಾಟ್ಸ್‌ಮನ್ ಎಂಬ ಬೇಡದ ದಾಖಲೆ ಅಭಿಷೇಕ್ ಪಾಲಾಗಿದೆ. ಅಭಿಷೇಕ್​ಗಿಂತ ಮೊದಲು, ಅಫ್ಘಾನಿಸ್ತಾನದ ರಶೀದ್ ಖಾನ್ (2019 ರಲ್ಲಿ) ಮತ್ತು ಪಾಕಿಸ್ತಾನದ ಶಾದಾಬ್ ಖಾನ್ (2024 ರಲ್ಲಿ) ತಲಾ ಒಂಬತ್ತು ಬಾರಿ ಡಕ್​ಗೆ ಔಟಾಗಿದ್ದರು(PC-PTI).

5 / 5

ಇದಲ್ಲದೆ ಅಂತರರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ ಅತಿ ಹೆಚ್ಚು ಬಾರಿ ಗೋಲ್ಡನ್ ಡಕ್‌ಗೆ ಔಟಾದ ಭಾರತೀಯ ಆರಂಭಿಕ ಆಟಗಾರ ಎಂಬ ಕಳಪೆ ದಾಖಲೆಗೂ ಅಭಿಷೇಕ್ ಪಾತ್ರರಾಗಿದ್ದಾರೆ. ಅಭಿಷೇಕ್ ಮೊದಲ ಎಸೆತದಲ್ಲೇ ಐದು ಬಾರಿ ಔಟಾಗಿದ್ದರೆ, ರೋಹಿತ್ ಶರ್ಮಾ ನಾಲ್ಕು ಬಾರಿ ಔಟಾಗಿದ್ದಾರೆ. ಈ ನಿಟ್ಟಿನಲ್ಲಿ, ಅಭಿಷೇಕ್, ರೋಹಿತ್ ಶರ್ಮಾ ಅವರ ದಾಖಲೆಯನ್ನು ಮುರಿದಿದ್ದಾರೆ(PC-PTI).

Loading...
Unable to load recommendations.
Follow Us