ಅಭಿಷೇಕ್ ಅಬ್ಬರಕ್ಕೆ ವಿರಾಟ್ ಕೊಹ್ಲಿಯ ಸಾರ್ವಕಾಲಿಕ ರ‍್ಯಾಂಕಿಂಗ್ ಷೇಕ್ ಷೇಕ್ 

Updated on: Oct 02, 2025 | 8:54 AM

Abhishek Sharma World Record: ಟಿ20 ಕ್ರಿಕೆಟ್​ ಇತಿಹಾಸದಲ್ಲೇ ಅತ್ಯಧಿಕ ರೇಟಿಂಗ್ ಪಡೆದ ಬ್ಯಾಟರ್ ಎಂಬ ವಿಶ್ವ ದಾಖಲೆ ಅಭಿಷೇಕ್ ಶರ್ಮಾ ಪಾಲಾಗಿದೆ. ಇದಕ್ಕೂ ಮುನ್ನ ಈ ದಾಖಲೆ ಇಂಗ್ಲೆಂಡ್​ನ ಡೇವಿಡ್ ಮಲಾನ್ (919) ಹೆಸರಿನಲ್ಲಿತ್ತು. ಇದೀಗ ಈ ದಾಖಲೆ ಮುರಿದು ಅಭಿಷೇಕ್ ಶರ್ಮಾ ವಿರಾಟ್ ಕೊಹ್ಲಿಯ ದಾಖಲೆ ಮುರಿಯುವತ್ತ ದಾಪುಗಾಲಿಟ್ಟಿದ್ದಾರೆ.

1 / 6
ಐಸಿಸಿ ಟಿ20 ಬ್ಯಾಟರ್​ಗಳ ನೂತನ ರ‍್ಯಾಂಕಿಂಗ್ ಪ್ರಕಟಿಸಿದೆ. ಈ ಬಾರಿ ಅಗ್ರಸ್ಥಾನದಲ್ಲಿ ಕಾಣಿಸಿಕೊಂಡಿರುವುದು ಟೀಮ್ ಇಂಡಿಯಾದ ಯುವ ದಾಂಡಿಗ ಅಭಿಷೇಕ್ ಶರ್ಮಾ (Abhishek Sharma). ಅದು ಕೂಡ ವಿಶ್ವ ದಾಖಲೆಯ ರೇಟಿಂಗ್ ಪಡೆಯುವ ಮೂಲಕ ಎಂಬುದು ವಿಶೇಷ.

2 / 6
ಅಂದರೆ ಟಿ20 ಕ್ರಿಕೆಟ್ ಇತಿಹಾಸದಲ್ಲೇ ಅತ್ಯಧಿಕ ರೇಟಿಂಗ್ ಪಡೆದ ಬ್ಯಾಟರ್ ಎಂಬ ವಿಶ್ವ ದಾಖಲೆ ಅಭಿಷೇಕ್ ಶರ್ಮಾ ಪಾಲಾಗಿದೆ. ನೂತನ ಟಿ20 ಬ್ಯಾಟರ್​ಗಳ ಶ್ರೇಯಾಂಕ ಪಟ್ಟಿಯಲ್ಲಿ ಅಭಿಷೇಕ್ ಒಟ್ಟು 931 ಅಂಕಗಳನ್ನು ಪಡೆದಿದ್ದಾರೆ. ಈ ಮೂಲಕ ಇಂಗ್ಲೆಂಡ್​ನ ಡೇವಿಡ್ ಮಲಾನ್ (919) ಹೆಸರಿನಲ್ಲಿದ್ದ ವಿಶ್ವ ದಾಖಲೆ ಮುರಿದಿದ್ದಾರೆ.

3 / 6
ಅಷ್ಟೇ ಅಲ್ಲದೆ ವಿರಾಟ್ ಕೊಹ್ಲಿಯ ಸಾರ್ವಕಾಲಿಕ ಶ್ರೇಷ್ಠ ದಾಖಲೆ ಮುರಿಯುವತ್ತ ದಾಪುಗಾಲಿಟ್ಟಿದ್ದಾರೆ. ಅಂದರೆ ಭಾರತದ ಪರ ಐಸಿಸಿ ರ‍್ಯಾಂಕಿಂಗ್​ನಲ್ಲಿ ಅತ್ಯಧಿಕ ರೇಟಿಂಗ್ ಪಡೆದ ಬ್ಯಾಟರ್ ವಿರಾಟ್ ಕೊಹ್ಲಿ. 2018 ರಲ್ಲಿ ಟೆಸ್ಟ್ ಬ್ಯಾಟರ್​ಗಳ ಪಟ್ಟಿಯಲ್ಲಿ 937 ರೇಟಿಂಗ್ ಪಡೆಯುವ ಮೂಲಕ ಕಿಂಗ್ ಕೊಹ್ಲಿ ಈ ಸಾಧನೆ ಮಾಡಿದ್ದರು.

4 / 6
ಇದೀಗ ಈ ಶ್ರೇಷ್ಠ ದಾಖಲೆ ಮುರಿಯಲು ಅಭಿಷೇಕ್ ಶರ್ಮಾಗೆ ಬೇಕಿರುವುದು ಕೇವಲ 7 ರೇಟಿಂಗ್ ಮಾತ್ರ. ಅಂದರೆ ಮುಂಬರುವ ಟಿ20 ಪಂದ್ಯಗಳಲ್ಲಿ ಅಭಿಷೇಕ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರೆ 938 ರೇಟಿಂಗ್ ಪಡೆಯುವುದು ಖಚಿತ. ಈ ಮೂಲಕ ಐಸಿಸಿ ರ‍್ಯಾಂಕಿಂಗ್ ಇತಿಹಾಸದಲ್ಲೇ ಭಾರತದ ಪರ ಅತ್ಯಧಿಕ ರೇಟಿಂಗ್ ಪಡೆದ ಬ್ಯಾಟರ್ ಎನಿಸಿಕೊಳ್ಳಲಿದ್ದಾರೆ.

5 / 6
ಅಷ್ಟೇ ಅಲ್ಲದೆ ಮುಂಬರುವ ಸರಣಿಗಳಲ್ಲೂ ಅಭಿಷೇಕ್ ಶರ್ಮಾ ತನ್ನ ಸಿಡಿಲಬ್ಬರ ಮುಂದುವರೆಸಿದರೆ ಹೊಸ ಇತಿಹಾಸವನ್ನು ಸಹ ನಿರ್ಮಿಸಿದರು. ಏಕೆಂದರೆ ಐಸಿಸಿ ರ್ಯಾಂಕಿಂಗ್ ಇತಿಹಾಸದಲ್ಲೇ ಅತ್ಯಧಿಕ ರೇಟಿಂಗ್ ಪಡೆದ ವಿಶ್ವ ದಾಖಲೆ ಡಾನ್ ಬ್ರಾಡ್ಮನ್ ಹೆಸರಿನಲ್ಲಿದೆ. 1934 ರ ಟೆಸ್ಟ್ ಬ್ಯಾಟರ್​ಗಳ ಪಟ್ಟಿಯಲ್ಲಿ ಬ್ರಾಡ್ಮನ್ ಒಟ್ಟು  961 ರೇಟಿಂಗ್ ಪಡೆದಿದ್ದರು.

6 / 6
ಡಾನ್ ಬ್ರಾಡ್ಮನ್ ಹೆಸರಿನಲ್ಲಿರುವ 961 ರೇಟಿಂಗ್​ನ ವಿಶ್ವ ದಾಖಲೆ ಮುರಿಯಲು ಅಭಿಷೇಕ್ ಶರ್ಮಾಗೆ ಬೇಕಿರುವುದು ಕೇವಲ 31 ರೇಟಿಂಗ್ ಮಾತ್ರ. ಅಂದರೆ ಮುಂಬರುವ ಸರಣಿಗಳಲ್ಲೂ ಟೀಮ್ ಇಂಡಿಯಾದ ಯುವ ದಾಂಡಿಗ ಭರ್ಜರಿ ಪ್ರದರ್ಶನ ನೀಡಿದರೆ, ಐಸಿಸಿ ರ‍್ಯಾಂಕಿಂಗ್​ ಇತಿಹಾಸದಲ್ಲೇ ಅತ್ಯಧಿಕ ರೇಟಿಂಗ್ ಪಡೆದ ಬ್ಯಾಟರ್ ಎನಿಸಿಕೊಳ್ಳಬಹುದು.