Ajaz Patel: ಭಾರತದ 10 ವಿಕೆಟ್ ಕಿತ್ತ ಅಜಾಜ್ ಪಟೇಲ್​ರ​ನ್ನು ತಂಡದಿಂದ ಹೊರಗಿಟ್ಟ ನ್ಯೂಜಿಲೆಂಡ್: ಏಕೆ ಗೊತ್ತೇ?

Edited By:

Updated on: Dec 23, 2021 | 11:26 AM

Ajaz Patel dropped from the Bangladesh test tour: ಕಳೆದ ಭಾರತ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಐತಿಹಾಸಿಕ ಸಾಧನೆ ಮಾಡಿದ ಹೊರತಾಗಿಯೂ ಅಜಾಜ್ ಪಟೇಲ್ ಅವರನ್ನು ನ್ಯೂಜಿಲೆಂಡ್ ತಂಡ ಬಾಂಗ್ಲಾದೇಶ ವಿರುದ್ಧದ ಸರಣಿಯಿಂದ ಕೈಬಿಟ್ಟಿದ್ದು ಅಚ್ಚರಿ ಮೂಡಿಸಿದೆ.

1 / 9
ಇತ್ತೀಚೆಗಷ್ಟೆ ಮುಕ್ತಾಯಗೊಂಡ ಭಾರತ ವಿರುದ್ಧದ ಟೆಸ್ಟ್ ಸರಣಿಯಲ್ಲಿ 10 ವಿಕೆಟ್ ಕಿತ್ತು ಐತಿಹಾಸಿಕ ಸಾಧನೆ ಮಾಡಿದ್ದ ಸ್ಪಿನ್ನರ್ ಅಜಾಜ್ ಪಟೇಲ್ ಅವರನ್ನು ಇದೀಗ ನ್ಯೂಜಿಲೆಂಡ್ ತಂಡದಿಂದಲೇ ಕೈಬಿಡಲಾಗಿದೆ. ಹೌದು, ಈ ತಿಂಗಳ ಆರಂಭದಲ್ಲಿ ವಿಶ್ವ ಶ್ರೇಷ್ಠ ಬ್ಯಾಟರ್​ಗಳಿಂದ ಕೂಡಿರುವ ಟೀಮ್ ಇಂಡಿಯಾದ 10 ವಿಕೆಟ್​ಗಳನ್ನು ಕಬಳಿಸಿ ಅಜಾಜ್ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಹೊಸ ದಾಖಲೆ ಬರೆದಿದ್ದರು.

ಇತ್ತೀಚೆಗಷ್ಟೆ ಮುಕ್ತಾಯಗೊಂಡ ಭಾರತ ವಿರುದ್ಧದ ಟೆಸ್ಟ್ ಸರಣಿಯಲ್ಲಿ 10 ವಿಕೆಟ್ ಕಿತ್ತು ಐತಿಹಾಸಿಕ ಸಾಧನೆ ಮಾಡಿದ್ದ ಸ್ಪಿನ್ನರ್ ಅಜಾಜ್ ಪಟೇಲ್ ಅವರನ್ನು ಇದೀಗ ನ್ಯೂಜಿಲೆಂಡ್ ತಂಡದಿಂದಲೇ ಕೈಬಿಡಲಾಗಿದೆ. ಹೌದು, ಈ ತಿಂಗಳ ಆರಂಭದಲ್ಲಿ ವಿಶ್ವ ಶ್ರೇಷ್ಠ ಬ್ಯಾಟರ್​ಗಳಿಂದ ಕೂಡಿರುವ ಟೀಮ್ ಇಂಡಿಯಾದ 10 ವಿಕೆಟ್​ಗಳನ್ನು ಕಬಳಿಸಿ ಅಜಾಜ್ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಹೊಸ ದಾಖಲೆ ಬರೆದಿದ್ದರು.

2 / 9

ಜಿಮ್ ಲೇಕರ್ (Jim Laker) ಮತ್ತು ಅನಿಲ್ ಕುಂಬ್ಳೆ (Anil Kumble) ಬಳಿಕ ಒಂದೇ ಇನ್ನಿಂಗ್ಸ್​ನಲ್ಲಿ 10 ವಿಕೆಟ್ ಪಡೆದ ವಿಶ್ವದ ಮೂರನೇ ಆಟಗಾರನೆಂಬ ಕೀರ್ತಿಗೆ ಇವರು ಭಾಜನರಾಗಿದ್ದರು. ಇಂಥಹ ಅಪಾಯಕಾರಿ ಅತ್ಯುತ್ತಮ ಬೌಲರ್ ಅನ್ನು ನ್ಯೂಜಿಲೆಂಡ್ ಏಕಾಏಕಿ ತಂಡದಿಂದ ಹೊರಗಿಟ್ಟಿದೆ. ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಗೆ ಕಿವೀಸ್ ಕ್ರಿಕೆಟ್ ಮಂಡಳಿ ಅಜಾಜ್ ಪಟೇರ್​ನಲ್ಲಿ ಕಡೆಗಣಿಸಿದೆ.

3 / 9

ಬಾಂಗ್ಲಾದೇಶ ವಿರುದ್ಧ ನಡೆಯಲಿರುವ ಟೆಸ್ಟ್ ಪಂದ್ಯಕ್ಕೆ ನ್ಯೂಜಿಲೆಂಡ್ ತಂಡ ಪ್ರಕಟಗೊಂಡಿದ್ದು ಆಯ್ಕೆ ಸಮಿತಿ 13 ಆಟಗಾರರ ತಂಡವನ್ನು ಪ್ರಕಟಿಸಲಾಗಿದೆ. ಅಚ್ಚರಿಯೆಂದರೆ ಈ ಬಳಗದಲ್ಲಿ ಅಜಾಜ್ ಹೆಸರೇ ಇಲ್ಲ.

4 / 9

ಐತಿಹಾಸಿಕ ಸಾಧನೆ ಮಾಡಿದ ಹೊರತಾಗಿಯೂ ಅಜಾರ್​ರನ್ನು ತಂಡದಿಂದಲೇ ಕೈಬಿಟ್ಟಿದ್ದು ಅಚ್ಚರಿ ಮೂಡಿಸಿದೆ. ಭಾರತ ಮೂಲದ ಮತ್ತೊಬ್ಬ ಆಟಗಾರ ರಚಿನ್ ರವೀಂದ್ರ ಅವರನ್ನು ತಂಡಕ್ಕೆ ಆಯ್ಕೆ ಮಾಡಲಾಗಿದೆ.

5 / 9

ಬಾಂಗ್ಲಾ ವಿರುದ್ಧದ ಟೆಸ್ಟ್ ಡೇರಿಯಲ್ ಮಿಚೆಲ್ ಮತ್ತು ರವೀಂದ್ರ ಅವರನ್ನು ಸ್ಪಿನ್ನರ್​ಗಳಾಗಿ ಆಯ್ಕೆ ಮಾಡಲಾಗಿದೆ. ಮೇಲ್ನೋಟಕ್ಕೆ ನ್ಯೂಜಿಲೆಂಡ್ ವೇಗಿಗಳಿಗೆ ಹೆಚ್ಚು ಒತ್ತು ನೀಡದಂತೆ ಕಾಣುತ್ತಿದೆ. ಟ್ರೆಂಟ್ ಬೌಲ್ಟ್, ನೈಲ್ ವಾಗ್ನರ್, ಟಿಮ್ ಸೌಥೀ, ಖೈಲ್ ಜೆಮಿಸನ್ ಮತ್ತು ಮ್ಯಾಟ್ ಹೆನ್ರಿ ಹೀಗೆ 5 ವೇಗಿಗಳನ್ನು ಆಯ್ಕೆ ಮಾಡಿದೆ.

6 / 9

ಕೇನ್ ವಿಲಿಯಮ್ಸನ್ ಭಾರತ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಇಂಜುರಿಗೆ ತುತ್ತಾಗಿದ್ದರು. ಅವರು ಇನ್ನೂ ಗಾಯದಿಂದ ಗುಣಮುಖರಾಗದ ಕಾರಣ ಸಂಪೂರ್ಣ ಸರಣಿಗೆ ಟಾಮ್ ಲಾಥಮ್ ಅವರನ್ನು ನಾಯಕನಾಗಿ ಆಯ್ಕೆ ಮಾಡಲಾಗಿದೆ.

7 / 9

ಡೆವೊನ್ ಕಾನ್ವೇ ಇಂಜುರಿಯಿಂದ ಗುಣಮುಖರಾಗಿ ತಂಡಕ್ಕೆ ಕಮ್​ಬ್ಯಾಕ್ ಮಾಡಿದ್ದಾರೆ. ಇವರು ಟಿ20 ವಿಶ್ವಕಪ್​ನಲ್ಲಿ ಗಾಯಕ್ಕೆ ತುತ್ತಾಗಿದ್ದರು.

8 / 9

ಬಾಂಗ್ಲಾ ವಿರುದ್ಧದ ಸರಣಿಗೆ ನ್ಯೂಜಿಲೆಂಡ್ ತಂಡ: ಟಾಮ್ ಲಾಥಮ್ (ನಾಯಕ), ಡೆವೊನ್ ಕಾನ್ವೇ, ವಿಲ್ ಯಂಗ್, ರಾಸ್ ಟೇಲರ್, ಹೆನ್ರಿ ನಿಕೋಲ್ಸ್, ಡ್ಯಾರಲ್ ಮಿಚೆಲ್, ಟಾಮ್ ಬ್ಲಂಡೆಲ್, ರಚಿನ್ ರವೀಂದ್ರ, ಖೈಲ್ ಜೆಮಿಸನ್, ಮ್ಯಾಟ್ ಹೆನ್ರಿ, ಟಿಮ್ ಸೌಥೀ, ನೈಲ್ ವಾಗ್ನರ್, ಟ್ರೆಂಟ್ ಬೌಲ್ಟ್.

9 / 9

ಬಾಂಗ್ಲಾದೇಶ ಹಾಗೂ ನ್ಯೂಜಿಲೆಂಡ್ ತಂಡಗಳ ನಡುವಿನ ಟೆಸ್ಟ್ ಸರಣಿ ಜನವರಿ 1 ರಿಂದ ಆರಂಭವಾಗಲಿದೆ. ಎರಡು ಪಂದ್ಯಗಳ ಟೆಸ್ಟ್ ಸರಣಿ ಇದಾಗಿದ್ದು ಮೊದಲ ಪಂದ್ಯ ಮೌಂಟ್ ಮೌಂಗನ್ಯೂಯ್ಯ ಬೇ ಓವಲ್ ಸ್ಟೇಡಿಯಂನಲ್ಲಿ ನಡೆಯಲಿದೆ. ಎರಡನೇ ಪಂದ್ಯ ಜನವರಿ 9ರಿಂದ ಕ್ರೈಸ್ಟ್ ಚರ್ಚ್ನ ಹ್ಯಾಗ್ಲೆ ಓವಲ್​ನಲ್ಲಿ ನಡೆಯಲಿದೆ.

Published On - 11:14 am, Thu, 23 December 21

Loading...
Unable to load recommendations.
Follow Us