ಟೀಂ ಇಂಡಿಯಾದಿಂದ ಹೊರಬಿದ್ದ 341 ದಿನಗಳ ಬಳಿಕ ಭರ್ಜರಿ ದ್ವಿಶತಕ ಸಿಡಿಸಿದ ಅಜಿಂಕ್ಯಾ ರಹಾನೆ..!

| Updated By: ಪೃಥ್ವಿಶಂಕರ

Updated on: Dec 21, 2022 | 1:49 PM

Ajinkya Rahane: ಮುಂಬೈನ ಬಿಕೆಸಿ ಅಕಾಡೆಮಿಯಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಮುಂಬೈ ನಾಯಕ ಅಜಿಂಕ್ಯ ರಹಾನೆ ಕೇವಲ 261 ಎಸೆತಗಳನ್ನು ಆಡಿ, 78 ಕ್ಕಿಂತ ಹೆಚ್ಚು ಸ್ಟ್ರೈಕ್ ರೇಟ್​ನಲ್ಲಿ 204 ರನ್ ಗಳಿಸಿದರು.

1 / 5
14 ಜನವರಿ 2022... ಇದು ಅಜಿಂಕ್ಯ ರಹಾನೆ ಟೀಮ್ ಇಂಡಿಯಾ ಪರ ಆಡಿದ ಕೊನೆಯ ಪಂದ್ಯದ ದಿನಾಂಕ. ಸೆಂಚುರಿನ್ ಮೈದಾನದಲ್ಲಿ ಟೀಂ ಇಂಡಿಯಾ ಪರ ಕೊನೆಯ ಪಂದ್ಯವನ್ನಾಡಿದ್ದ ರಹಾನೆ ಕಳಪೆ ಪ್ರದರ್ಶನದಿಂದಾಗಿ ಟೀಂ ಇಂಡಿಯಾದಿಂದ ಹೊರಗುಳಿದಿದ್ದಾರೆ. ಆದರೆ ಈಗ ರಣಜಿ ಟ್ರೋಫಿಯಲ್ಲಿ ಮುಂಬೈ ತಂಡದ ನಾಯಕರಾಗಿರುವ ಅಜಿಂಕ್ಯ ರಹಾನೆ ಭರ್ಜರಿ ಫಾರ್ಮ್​ಗೆ ಮರಳಿದ್ದು, ದ್ವಿಶತಕ ಸಿಡಿಸಿ ಮಿಂಚಿದ್ದಾರೆ.

2 / 5
ಮುಂಬೈನ ಬಿಕೆಸಿ ಅಕಾಡೆಮಿಯಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಮುಂಬೈ ನಾಯಕ ಅಜಿಂಕ್ಯ ರಹಾನೆ ಕೇವಲ 261 ಎಸೆತಗಳನ್ನು ಆಡಿ, 78 ಕ್ಕಿಂತ ಹೆಚ್ಚು ಸ್ಟ್ರೈಕ್ ರೇಟ್​ನಲ್ಲಿ 204 ರನ್ ಗಳಿಸಿದರು.

3 / 5
ಇದು ರಹಾನೆ ಅವರ ಪ್ರಥಮ ದರ್ಜೆಯ ವೃತ್ತಿಜೀವನದ ನಾಲ್ಕನೇ ದ್ವಿಶತಕವಾಗಿದ್ದು, ಈ ಇನ್ನಿಂಗ್ಸ್​ನಲ್ಲಿ ಅವರು 26 ಬೌಂಡರಿ ಹಾಗೂ 3 ಸಿಕ್ಸರ್‌ ಸಹ ಬಾರಿಸಿದರು.

4 / 5
34 ವರ್ಷ ವಯಸ್ಸಿನ ರಹಾನೆ ಟೀಂ ಇಂಡಿಯಾಗೆ ಮರಳಲು ಶತಪ್ರಯತ್ನ ಮಾಡುತ್ತಿದ್ದು, ಈ ದ್ವಿಶತಕದ ಇನ್ನಿಂಗ್ಸ್​ ರಹಾನೆಯ ಆಸೆಯನ್ನು ಜೀವಂತವಾಗಿರಿಸಿದೆ.

5 / 5
ಅಂದಹಾಗೆ, ರಹಾನೆ ಹೊರತುಪಡಿಸಿ, ಮುಂಬೈನ ಮತ್ತೊಬ್ಬ ಬ್ಯಾಟ್ಸ್‌ಮನ್ ಸರ್ಫರಾಜ್ ಅಹ್ಮದ್ ಕೂಡ ಅದ್ಭುತ ಶತಕ ಬಾರಿಸಿದ್ದಾರೆ. ಹಾಗೆಯೇ ಯಶಸ್ವಿ ಜೈಸ್ವಾಲ್ ಕೂಡ 162 ರನ್‌ಗಳ ಇನ್ನಿಂಗ್ಸ್ ಆಡಿದರೆ, ಮಿ.360 ಖ್ಯಾತಿಯ ಸೂರ್ಯಕುಮಾರ್ ಯಾದವ್ 3 ವರ್ಷಗಳ ನಂತರ ರಣಜಿಗೆ ಮರಳಿ, 90 ರನ್​ಗಳ ಸ್ಫೋಟಕ ಇನ್ನಿಂಗ್ಸ್ ಆಡಿದ್ದಾರೆ.