- Kannada News Photo gallery Cricket photos Asia Cup 2023 Final Stats of India and Sri Lanka team Players Records and Approaching Milestones
Asia Cup 2023 Final: ಫೈನಲ್ ಪಂದ್ಯದಲ್ಲಿ ಉಭಯ ತಂಡಗಳ ಆಟಗಾರರು ನಿರ್ಮಿಸಬಹುದಾದ ದಾಖಲೆಗಳಿವು
Asia Cup 2023 Final: ಕೊಲಂಬೊ ಭಾನುವಾರ ನಡೆಯಲಿರುವ ಏಷ್ಯಾಕಪ್ 2023ರ ಫೈನಲ್ಗೆ ಸಜ್ಜಾಗಿದೆ . ಟೂರ್ನಿಯ ಅತ್ಯಂತ ಯಶಸ್ವಿ ತಂಡವಾದ ಭಾರತ ಮತ್ತು ಕಳೆದ ಬಾರಿಯ ಚಾಂಪಿಯನ್ ಶ್ರೀಲಂಕಾ ಇಂದು ಪ್ರೇಮದಾಸ ಕ್ರೀಡಾಂಗಣದಲ್ಲಿ ಏಷ್ಯಾಕಪ್ನ ಅಂತಿಮ ಕದನದಲ್ಲಿ ಮುಖಾಮುಖಿಯಾಗಲಿವೆ. ಇದೇ ಪಂದ್ಯದಲ್ಲಿ ಉಭಯ ತಂಡಗಳ ಆಟಗಾರರು ಹಲವು ದಾಖಲೆಗಳನ್ನು ಬರೆಯುವ ಹೊಸ್ತಿಲಿನಲ್ಲಿದ್ದಾರೆ.
Updated on: Sep 17, 2023 | 12:21 PM

ಕೊಲಂಬೊ ಭಾನುವಾರ ನಡೆಯಲಿರುವ ಏಷ್ಯಾಕಪ್ 2023ರ ಫೈನಲ್ಗೆ ಸಜ್ಜಾಗಿದೆ . ಟೂರ್ನಿಯ ಅತ್ಯಂತ ಯಶಸ್ವಿ ತಂಡವಾದ ಭಾರತ ಮತ್ತು ಕಳೆದ ಬಾರಿಯ ಚಾಂಪಿಯನ್ ಶ್ರೀಲಂಕಾ ಇಂದು ಪ್ರೇಮದಾಸ ಕ್ರೀಡಾಂಗಣದಲ್ಲಿ ಏಷ್ಯಾಕಪ್ನ ಅಂತಿಮ ಕದನದಲ್ಲಿ ಮುಖಾಮುಖಿಯಾಗಲಿವೆ. ಇದೇ ಪಂದ್ಯದಲ್ಲಿ ಉಭಯ ತಂಡಗಳ ಆಟಗಾರರು ಹಲವು ದಾಖಲೆಗಳನ್ನು ಬರೆಯುವ ಹೊಸ್ತಿಲಿನಲ್ಲಿದ್ದಾರೆ.

ಕೆಎಲ್ ರಾಹುಲ್: ಕನ್ನಡಿಗ ರಾಹುಲ್ಗೆ ಏಕದಿನ ಮಾದರಿಯಲ್ಲಿ ತಮ್ಮ ಸಿಕ್ಸರ್ಗಳ ಅರ್ಧಶತಕವನ್ನು ಪೂರ್ಣಗೊಳಿಸಲು ಇನ್ನೂ 2 ಸಿಕ್ಸರ್ಗಳ ಅಗತ್ಯವಿದೆ.

ರೋಹಿತ್ ಶರ್ಮಾ: ಭಾರತ ತಂಡದ ನಾಯಕ ರೋಹಿತ್ ಶರ್ಮಾ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 550 ಸಿಕ್ಸರ್ಗಳ ದಾಖಲೆಯನ್ನು ಪೂರ್ಣಗೊಳಿಸಲು 5 ಸಿಕ್ಸರ್ಗಳ ಅಗತ್ಯವಿದೆ. ಹಾಗೆಯೇ ಏಷ್ಯಾಕಪ್ನಲ್ಲಿ ಏಕದಿನ ಮಾದರಿಯಲ್ಲಿ 1000 ರನ್ಗಳ ಮೈಲಿಗಲ್ಲು ಮುಟ್ಟಲು ರೋಹಿತ್ಗೆ ಇನ್ನೂ 61 ರನ್ಗಳ ಅಗತ್ಯವಿದೆ.

ಮೊಹಮ್ಮದ್ ಸಿರಾಜ್: ಏಕದಿನದಲ್ಲಿ ವಿಕೆಟ್ಗಳ ಅರ್ಧಶತಕ ಪೂರೈಸಲು ಮೊಹಮ್ಮದ್ ಸಿರಾಜ್ಗೆ 3 ವಿಕೆಟ್ಗಳ ಅಗತ್ಯವಿದೆ.

ಹಾರ್ದಿಕ್ ಪಾಂಡ್ಯ: ಭಾರತದ ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಅಂತರಾಷ್ಟ್ರೀಯ ಕ್ರಿಕೆಟ್ನಲ್ಲಿ 300 ಬೌಂಡರಿಗಳ ದಾಖಲೆಯನ್ನು ಪೂರ್ಣಗೊಳಿಸಲು 4 ಬೌಂಡರಿಗಳ ದೂರದಲ್ಲಿದ್ದಾರೆ.

ದಾಸುನ್ ಶನಕ: ಶ್ರೀಲಂಕಾ ನಾಯಕ ದಸುನ್ ಶನಕ ಏಕದಿನ ಮಾದರಿಯಲ್ಲಿ ಬೌಂಡರಿಗಳ ಶತಕವನ್ನು ಪೂರ್ಣಗೊಳಿಸಲು ಇನ್ನೂ 3 ಬೌಂಡರಿಗಳ ಅಗತ್ಯವಿದೆ.

ಕುಸಾಲ್ ಮೆಂಡಿಸ್: ಕುಸಾಲ್ ಮೆಂಡಿಸ್ ಅಂತರಾಷ್ಟ್ರೀಯ ಕ್ರಿಕೆಟ್ನಲ್ಲಿ 150 ಸಿಕ್ಸರ್ಗಳ ದಾಖಲೆಯನ್ನು ಪೂರ್ಣಗೊಳಿಸಲು 3 ಸಿಕ್ಸರ್ಗಳ ಅಗತ್ಯವಿದೆ. ಹಾಗೆಯೇ ಏಕದಿನದಲ್ಲಿ ಸಿಕ್ಸರ್ಗಳ ಅರ್ಧಶತಕವನ್ನು ಪೂರೈಸಲು ಕುಸಾಲ್ಗೆ ಇನ್ನೂ 4 ಸಿಕ್ಸರ್ಗಳ ಅಗತ್ಯವಿದೆ. ಇದಲ್ಲದೇ, ಕುಸಾಲ್ಗೆ ಏಕದಿನ ಮಾದರಿಯ ಏಷ್ಯಾಕಪ್ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ವಿಕೆಟ್ಕೀಪರ್ ಆಗಲು 93 ರನ್ಗಳ ಅಗತ್ಯವಿದೆ.

ಕಸುನ್ ರಜಿತಾ: ಅಂತಾರಾಷ್ಟ್ರೀಯ ಕ್ರಿಕೆಟ್ನ ಎಲ್ಲಾ ಮೂರು ಸ್ವರೂಪಗಳಲ್ಲಿ 100 ವಿಕೆಟ್ಗಳ ದಾಖಲೆಯನ್ನು ಪೂರ್ಣಗೊಳಿಸಲು ಕಸುನ್ ರಜಿತಾ 3 ವಿಕೆಟ್ಗಳ ದೂರದಲ್ಲಿದ್ದಾರೆ.




