SL vs PAK: ಏಷ್ಯಾಕಪ್ ಗೆದ್ದ ಬಳಿಕ ಶ್ರೀಲಂಕಾ ಆಟಗಾರರ ಸಂಭ್ರಮಾಚರಣೆ ಹೇಗಿತ್ತು ನೋಡಿ

Asia Cup Final 2022: ಹದಿನೈದನೆ ಆವೃತ್ತಿಯ ಏಷ್ಯಾಕಪ್ ಟೂರ್ನಿಗೆ ತೆರೆಬಿದ್ದಿದ್ದು ಶ್ರೀಲಂಕಾ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಗೆದ್ದ ಖುಷಿಯಲ್ಲಿ ಶ್ರೀಲಂಕಾ ತಂಡದ ಆಟಗಾರರು ಕುಣಿದು ಕುಪ್ಪಳಿಸಿ ಸಂಭ್ರಮಾಚರಣೆ ಮಾಡಿದರು.

TV9 Web
| Updated By: Vinay Bhat

Updated on:Sep 12, 2022 | 11:05 AM

ಹದಿನೈದನೆ ಆವೃತ್ತಿಯ ಏಷ್ಯಾಕಪ್ ಟೂರ್ನಿಗೆ ತೆರೆಬಿದ್ದಿದ್ದು ಶ್ರೀಲಂಕಾ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ. ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಪಾಕಿಸ್ತಾನ ವಿರುದ್ಧದ ಫೈನಲ್ ಪಂದ್ಯದಲ್ಲಿ ಲಂಕಾ 23 ರನ್ ​ಗಳ ಗೆಲುವು ಸಾಧಿಸಿತು.

1 / 9
ತೀವ್ರ ಆರ್ಥಿಕ ಬಿಕ್ಕಟ್ಟು, ರಾಜಕೀಯ ಪ್ರಕ್ಷುಬ್ದತೆಯ ನಡುವೆಯೂ ಏಷ್ಯಾಕಪ್​​ ನಲ್ಲಿ ಬ್ಯಾಟಿಂಗ್-ಬೌಲಿಂಗ್ ಎರಡೂ ವಿಭಾಗಗಳಲ್ಲಿ ಅದ್ಭುತ ಪ್ರದರ್ಶನ ತೋರಿದ ಸಿಂಹಳೀಯರು 2014ರ ನಂತರ ಪ್ರತಿಷ್ಟಿತ ಪ್ರಶಸ್ತಿ ಬಾಜಿಕೊಂಡಿತು.

2 / 9
ಈ ಮೂಲಕ ಒಟ್ಟು 6ನೇ ಬಾರಿಗೆ ಏಷ್ಯಾಕಪ್​ ಚಾಂಪಿಯನ್ ಆಗಿ ಹೊರಹೊಮ್ಮಿದೆ. 10 ವರ್ಷಗಳ ನಂತರ ಪ್ರಶಸ್ತಿ ಗೆಲ್ಲುವ ಕನಸು ಕಾಣುತ್ತಿದ್ದ ಪಾಕ್​​ ಬಯಕೆ ಈ ಬಾರಿ ಕೂಡ ಈಡೇರಲಿಲ್ಲ. ಗೆದ್ದ ಖುಷಿಯಲ್ಲಿ ಶ್ರೀಲಂಕಾ ತಂಡದ ಆಟಗಾರರು ಕುಣಿದು ಕುಪ್ಪಳಿಸಿ ಸಂಭ್ರಮಾಚರಣೆ ಮಾಡಿದರು.

3 / 9
ಫೈನಲ್ ಕಾದಾಟದಲ್ಲಿ ಟಾಸ್ ಗೆದ್ದ ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಮ್ ಬೌಲಿಂಗ್ ಆಯ್ಕೆ ಮಾಡಿಕೊಂಡರು. ಬ್ಯಾಟಿಂಗ್​ ಗೆ ಇಳಿದ ಶ್ರೀಲಂಕಾ ಪವರ್ ಪ್ಲೇನಲ್ಲೇ ಮೂರು ವಿಕೆಟ್ ಕಳೆದುಕೊಂಡಿತು. ಇನ್ನಿಂಗ್ಸ್​ನ ಮೊದಲ ಓವರ್​ ನಲ್ಲಿ ಕುಸಲ್ ಮೆಂಡಿಸ್ (0) ಔಟಾದರೆ, ಪಥುಮ್ ನಿಸ್ಸಂಕಾ (8) ಹಾಗೂ ಗುಣತಿಲಕ (1) ಅವರನ್ನು ಹ್ಯಾರಿಸ್ ರೌಫ್ ಪೆವಿಲಿಯನ್ ​ಗೆ ಅಟ್ಟಿದರು.

4 / 9
ನಂತರ ಪಾಕಿಸ್ತಾನ ಬೌಲರ್ ​​​ಗಳನ್ನು ಸುಲಭವಾಗಿ ದಂಡಿಸಿದ ರಾಜಪಕ್ಷ ಕೇವಲ 45 ಎಸೆತಗಳಲ್ಲಿ 6 ಫೋರ್, 3 ಸಿಕ್ಸರ್ ಬಾರಿಸಿ ಅಜೇಯ 71 ರನ್ ಚಚ್ಚಿದರು. ಇವರಿಗೆ ಉತ್ತಮ ಸಾಥ್ ನೀಡಿದ ಹಸರಂಗ 21 ಎಸೆತಗಳಲ್ಲಿ 36 ರನ್ ಬಾರಿಸಿದರು.

5 / 9
ಶ್ರೀಲಂಕಾ ತಂಡ ನಿಗದಿತ 20 ಓವರ್​​​ ಗಳಲ್ಲಿ 6 ವಿಕೆಟ್ ​ನಷ್ಟಕ್ಕೆ 170 ರನ್​​​ ಸೇರಿಸಿತು. ಪಾಕ್​ ಪರ ಹ್ಯಾರಿಸ್ ರೌಫ್​ 3 ವಿಕೆಟ್​, ನಸೀಂ, ಶಬ್ದಾದ್ ಖಾನ್​ ಹಾಗೂ ಅಹ್ಮದ್ ತಲಾ 1 ವಿಕೆಟ್ ಪಡೆದರು.

6 / 9
171 ರನ್‌ಗಳ ಗುರಿ ಬೆನ್ನತ್ತಿದ ಪಾಕಿಸ್ತಾನ ತಂಡ ಬೇಗನೆ ನಾಯಕ 2 ವಿಕೆಟ್ ಕಳೆದುಕೊಂಡಿತು. ಈ ವೇಳೆ ಮೊಹಮ್ಮದ್ ರಿಜ್ವಾನ್ (55) ಮತ್ತು ಇಫ್ತಿಕರ್ ಅಹ್ಮದ್ (32) ಕುಸಿದಿದ್ದ ತಂಡಕ್ಕೆ ಆಸರೆಯಾದರು. ಇವರಿಬ್ಬರು 71 ರನ್‌ಗಳ ಜೊತೆಯಾಟ ಆಡಿದರು. ನಂತರ ಬಂದ ಪಾಕ್ ಬ್ಯಾಟರ್​ಗಳೆಲ್ಲ ಬಂದಷ್ಟೆ ವೇಗದಲ್ಲಿ ಪೆವಿಲಿಯನ್ ಸೇರಿಕೊಂಡರು. ಪಾಕಿಸ್ತಾನ 20 ಓವರ್​ನಲ್ಲಿಯೇ 147 ರನ್​ಗೆ ಆಲೌಟ್ ಆಗಿ ಸೋಲುಂಡಿತು.

7 / 9
ಲಂಕಾ ಪರ ಪ್ರಮೋದ್ 4 ವಿಕೆಟ್ ಪಡೆದರೆ, ಹಸರಂಗ 3, ಕರುಣರತ್ನೆ 2 ಹಾಗೂ ತಿಕ್ಷಣ್ 1 ವಿಕೆಟ್ ತಮ್ಮದಾಗಿಸಿದರು. ಹಸರಂಗ ಸರಣಿಶ್ರೇಷ್ಠ ಮತ್ತು ರಾಜಪಕ್ಷ ಪಂದ್ಯಶ್ರೇಷ್ಠ ಪ್ರಶಸ್ತಿ ಬಾಚಿಕೊಂಡರು.

8 / 9
ಶ್ರೀಲಂಕಾ ಗೆದ್ದಾಗ ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದ ಒಂದು ನೋಟ

9 / 9

Published On - 11:05 am, Mon, 12 September 22

Follow us