AUS vs IND: ಆಸ್ಟ್ರೇಲಿಯಾ ತಂಡದಿಂದ ಮೂವರು ರಿಲೀಸ್..!

Updated on: Nov 04, 2025 | 7:53 AM

India vs Australia: ಭಾರತ ಮತ್ತು ಆಸ್ಟ್ರೇಲಿಯಾ ನಡುವಣ 5 ಪಂದ್ಯಗಳ ಟಿ20 ಸರಣಿಯ ಮೂರು ಮ್ಯಾಚ್​ಗಳು ಮುಗಿದಿವೆ. ಮೊದಲ ಪಂದ್ಯವು ಮಳೆಯಿಂದಾಗಿ ರದ್ದಾದರೆ, ದ್ವಿತೀಯ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ಜಯ ಸಾಧಿಸಿತ್ತು. ಇನ್ನು ಮೂರನೇ ಪಂದ್ಯದಲ್ಲಿ ಭಾರತ ತಂಡ ಗೆಲುವು ದಾಖಲಿಸಿತ್ತು. ಇದೀಗ ನಾಲ್ಕನೇ ಪಂದ್ಯಕ್ಕಾಗಿ ಉಭಯ ತಂಡಗಳು ಸಜ್ಜಾಗಿವೆ.

1 / 5
ಭಾರತ ಮತ್ತು ಆಸ್ಟ್ರೇಲಿಯಾ (India vs Australia) ನಡುವಣ 4ನೇ ಟಿ20 ಪಂದ್ಯ ನವೆಂಬರ್ 6 ರಂದು ನಡೆಯಲಿದೆ. ಈ ಪಂದ್ಯಕ್ಕೂ ಮುನ್ನ ಮುನ್ನ ಆಸ್ಟ್ರೇಲಿಯಾ ತಂಡದಿಂದ ಮೂವರನ್ನು ಬಿಡುಗಡೆ ಮಾಡಲಾಗಿದೆ. ಅದು ಕೂಡ ಸ್ಟಾರ್ ಆಟಗಾರರನ್ನು ಎಂಬುದು ವಿಶೇಷ. 

2 / 5
ಗೋಲ್ಡ್​ ಕೋಸ್ಟ್​ನ ಬಿಲ್ ಪಿಪ್ಪನ್ ಓವಲ್ ಮೈದಾನದಲ್ಲಿ ನಡೆಯಲಿರುವ ಈ ಪಂದ್ಯಕ್ಕೆ ಆಸ್ಟ್ರೇಲಿಯಾ ತಂಡದ ಸ್ಟಾರ್ ಆರಂಭಿಕ ದಾಂಡಿಗನ ಟ್ರಾವಿಸ್ ಹೆಡ್ ಅಲಭ್ಯರಾಗಿದ್ದಾರೆ. ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಸಜ್ಜಾಗಲು ಹೆಡ್ ಅವರನ್ನು ತಂಡದಿಂದ ಬಿಡುಗಡೆ ಮಾಡಲಾಗಿದ್ದು, ಅದರಂತೆ ಅವರು ಕೆಲ ದಿನಗಳ ಕಾಲ ಆಸ್ಟ್ರೇಲಿಯಾ ದೇಶೀಯ ಕ್ರಿಕೆಟ್​ನಲ್ಲಿ ಟೆಸ್ಟ್ ಪಂದ್ಯವನ್ನಾಡಲಿದ್ದಾರೆ.

3 / 5
ಇನ್ನು ಶಾನ್ ಅಬಾಟ್ ಅವರನ್ನು ಸಹ ಆಸ್ಟ್ರೇಲಿಯಾ ಟಿ20 ತಂಡದಿಂದ ರಿಲೀಸ್ ಮಾಡಲಾಗಿದೆ. ಅಬಾಟ್ ಕೂಡ ಇಂಗ್ಲೆಂಡ್ ವಿರುದ್ಧದ ಆ್ಯಶಸ್ ಸರಣಿಯಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಏಕೆಂದರೆ ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್ ಕಮಿನ್ಸ್ ಫಿಟ್​ನೆಸ್ ಸಮಸ್ಯೆಯಿಂದ ಬಳಲುತ್ತಿದ್ದು, ಹೀಗಾಗಿ ಅವರ ಬದಲಿಗೆ ಶಾನ್ ಅಬಾಟ್ ಆಯ್ಕೆಯಾಗಲಿದ್ದಾರೆ ಎಂದು ತಿಳಿದು ಬಂದಿದೆ. ಇದೇ ಕಾರಣದಿಂದ ಅಬಾಟ್ ಅವರಿಗೂ ಸಹ ಟೆಸ್ಟ್​ಗಾಗಿ ಸಿದ್ಧತೆಗಳನ್ನು ಆರಂಭಿಸುವಂತೆ ಸೂಚಿಸಲಾಗಿದೆ.

4 / 5
ಟೀಮ್ ಇಂಡಿಯಾ ವಿರುದ್ಧದ ಮೊದಲ ಮೂರು ಟಿ20 ಪಂದ್ಯಗಳಿಂದ ಆ್ಯಡಂ ಝಂಪಾ ಹೊರಗುಳಿದಿದ್ದರು. ಹೀಗಾಗಿ ಬದಲಿ ಸ್ಪಿನ್ನರ್ ಆಗಿ ತನ್ವೀರ್ ಸಂಘ ಅವರನ್ನು ಆಯ್ಕೆ ಮಾಡಲಾಗಿತ್ತು. ಇದೀಗ ಝಂಪಾ ತಂಡಕ್ಕೆ ಮರಳಿರುವುದರಿಂದ ತನ್ವೀರ್ ಸಂಘ ಅವರನ್ನು ಆಸೀಸ್ ಪಡೆಯಿಂದ ರಿಲೀಸ್ ಮಾಡಲಾಗಿದೆ. ಹೀಗಾಗಿ ಈ ಮೂವರು ಭಾರತದ ವಿರುದ್ಧದ ಮೂರನೇ ಟಿ20 ಪಂದ್ಯದ ವೇಳೆ ಕಾಣಿಸಿಕೊಳ್ಳುವುದಿಲ್ಲ.

5 / 5
ಆಸ್ಟ್ರೇಲಿಯಾ ಟಿ20 ತಂಡ: ಮಿಚೆಲ್ ಮಾರ್ಷ್ (ನಾಯಕ), ಕ್ಸೇವಿಯರ್ ಬಾರ್ಟ್ಲೆಟ್, ಟಿಮ್ ಡೇವಿಡ್, ನಾಥನ್ ಎಲ್ಲಿಸ್, ಜೋಶ್ ಇಂಗ್ಲಿಸ್, ಮ್ಯಾಥ್ಯೂ ಕುಹ್ನೆಮನ್, ಗ್ಲೆನ್ ಮ್ಯಾಕ್ಸ್‌ವೆಲ್, ಮಿಚೆಲ್ ಓವನ್, ಜೋಶ್ ಫಿಲಿಪ್, ಮ್ಯಾಥ್ಯೂ ಶಾರ್ಟ್, ಮಾರ್ಕಸ್ ಸ್ಟೊಯಿನಿಸ್, ಆ್ಯಡಂ ಝಂಪಾ, ಮಹ್ಲಿ ಬಿಯರ್ಡ್‌ಮನ್, ಬೆನ್ ದ್ವಾರ್ಶುಯಿಸ್.