- Kannada News Photo gallery Cricket photos AUS vs SA Heinrich Klaasen smashed 174 runs just 83 balls against Australia
AUS vs SA: ಆಸೀಸ್ ವಿರುದ್ಧ 83 ಎಸೆತಗಳಲ್ಲಿ ಬರೋಬ್ಬರಿ 174 ರನ್ ಚಚ್ಚಿದ ಹೆನ್ರಿಚ್ ಕ್ಲಾಸೆನ್..!
Heinrich Klaasen: ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ನಾಲ್ಕನೇ ಏಕದಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ ಮಧ್ಯಮ ಕ್ರಮಾಂಕದ ಬ್ಯಾಟರ್ ಹೆನ್ರಿಚ್ ಕ್ಲಾಸೆನ್ ಸ್ಫೋಟಕ ಶತಕ ಸಿಡಿಸಿ ಮಿಂಚಿದ್ದಾರೆ. ಆಸೀಸ್ ಪರ ಐದನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಇಳಿದ ಕ್ಲಾಸೆನ್ ಕೇವಲ 83 ಎಸೆತಗಳಲ್ಲಿ 13 ಬೌಂಡರಿ ಹಾಗೂ 13 ಸಿಕ್ಸರ್ ಸಹಿತ ದಾಖಲೆಯ 174 ರನ್ ಚಚ್ಚಿದ್ದಾರೆ.
Updated on: Sep 15, 2023 | 9:18 PM

ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ನಾಲ್ಕನೇ ಏಕದಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ ಮಧ್ಯಮ ಕ್ರಮಾಂಕದ ಬ್ಯಾಟರ್ ಹೆನ್ರಿಚ್ ಕ್ಲಾಸೆನ್ ಸ್ಫೋಟಕ ಶತಕ ಸಿಡಿಸಿ ಮಿಂಚಿದ್ದಾರೆ.

ಆಸೀಸ್ ಪರ ಐದನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಇಳಿದ ಕ್ಲಾಸೆನ್ ಕೇವಲ 83 ಎಸೆತಗಳಲ್ಲಿ 13 ಬೌಂಡರಿ ಹಾಗೂ 13 ಸಿಕ್ಸರ್ ಸಹಿತ ದಾಖಲೆಯ 174 ರನ್ ಚಚ್ಚಿದ್ದಾರೆ.

ಈ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು. ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ದಕ್ಷಿಣ ಆಫ್ರಿಕಾ ನಾಲ್ವರು ಬ್ಯಾಟರ್ಗಳ ಸ್ಫೋಟಕ ಇನ್ನಿಂಗ್ಸ್ನ ನೆರವಿನಿಂದಾಗಿ ನಿಗದಿತ 50 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 416 ರನ್ ಕಲೆಹಾಕಿದೆ.

ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದಿದ್ದ ಕ್ವಿಂಟನ್ ಡಿ ಕಾಕ್ 45 ರನ್ಗಳಿಗೆ ವಿಕೆಟ್ ಒಪ್ಪಿಸಿದರೆ, ರೀಜಾ ಹೆಂಡ್ರಿಕ್ಸ್ 28 ರನ್ಗಳ ಕೊಡುಗೆ ನೀಡಿದರು.

ಆ ಬಳಿಕ ಬಂದ ರಾಸ್ಸೀ ವ್ಯಾನ್ ಡೆರ್ ಡಸ್ಸೆನ್ 65 ಎಸೆತಗಳಲ್ಲಿ 62 ರನ್ಗಳ ಇನ್ನಿಂಗ್ಸ್ ಆಡಿದರೆ, ನಾಯಕ ಐಡೆನ್ ಮಾರ್ಕ್ರಾಮ್ 8 ರನ್ಗಳಿಗೆ ಸುಸ್ತಾದರು.

ಆದರೆ ಆ ಬಳಿಕ ಬಂದ ಹೆನ್ರಿಚ್ ಕ್ಲಾಸೆನ್ 174 ರನ್ಗಳ ಸ್ಫೋಟಕ ಇನ್ನಿಂಗ್ಸ್ ಆಡಿದರೆ, ಅವರೊಂದಿಗೆ ಕೆಳಕ್ರಮಾಂಕದಲ್ಲಿ ಹೊಡಿಬಡಿ ಆಟವಾಡಿದ ಡೇವಿಡ್ ಮಿಲ್ಲರ್ 45 ಎಸೆತಗಳಲ್ಲಿ 6 ಬೌಂಡರಿ ಹಾಗೂ 5 ಸಿಕ್ಸರ್ ಸಹಿತ 82 ರನ್ ಚಚ್ಚಿದರು.

ಆಸೀಸ್ ಪರ ಹೇಜಲ್ವುಡ್ 2 ವಿಕೆಟ್ ಪಡೆದು ಮಿಂಚಿದರೆ, ನೇಸರ್, ಸ್ಟೋಯ್ನಿಸ್, ಎಲ್ಲಿಸ್ ತಲಾ ಒಂದೊಂದು ವಿಕೆಟ್ ಪಡೆದರು.




