- Kannada News Photo gallery Cricket photos Australia beat Sri Lanka 4th T20I glenn maxwell josh inglis
AUS Vs SL: ಮ್ಯಾಕ್ಸ್‌ವೆಲ್ ಬಿರುಸಿನ ಬ್ಯಾಟಿಂಗ್; ಸತತ ನಾಲ್ಕನೇ ಟಿ20ಯಲ್ಲೂ ಸೋತ ಶ್ರೀಲಂಕಾ
AUS Vs SL: ಶ್ರೀಲಂಕಾ ವಿರುದ್ಧದ ಟಿ20 ಸರಣಿಯಲ್ಲಿ ಆಸ್ಟ್ರೇಲಿಯಾದ ಬಲಿಷ್ಠ ಪ್ರದರ್ಶನ ಮುಂದುವರಿದಿದೆ. ಮೆಲ್ಬೋರ್ನ್‌ನಲ್ಲಿ ನಡೆದ ನಾಲ್ಕನೇ ಟಿ20 ಪಂದ್ಯದಲ್ಲಿ ಆಸ್ಟ್ರೇಲಿಯಾ 6 ವಿಕೆಟ್‌ಗಳ ಜಯ ಸಾಧಿಸಿದೆ.
Updated on: Feb 18, 2022 | 7:53 PM

ಶ್ರೀಲಂಕಾ ವಿರುದ್ಧದ ಟಿ20 ಸರಣಿಯಲ್ಲಿ ಆಸ್ಟ್ರೇಲಿಯಾದ ಬಲಿಷ್ಠ ಪ್ರದರ್ಶನ ಮುಂದುವರಿದಿದೆ. ಮೆಲ್ಬೋರ್ನ್‌ನಲ್ಲಿ ನಡೆದ ನಾಲ್ಕನೇ ಟಿ20 ಪಂದ್ಯದಲ್ಲಿ ಆಸ್ಟ್ರೇಲಿಯಾ 6 ವಿಕೆಟ್‌ಗಳ ಜಯ ಸಾಧಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ 139 ರನ್ ಗಳಿಸಿತು, ಇದಕ್ಕೆ ಉತ್ತರವಾಗಿ ಆತಿಥೇಯ ಆಸ್ಟ್ರೇಲಿಯಾ 11 ಎಸೆತಗಳ ಮೊದಲು ಪಂದ್ಯವನ್ನು ಗೆದ್ದುಕೊಂಡಿತು.

39 ಎಸೆತಗಳಲ್ಲಿ ಔಟಾಗದೆ 48 ರನ್ ಗಳಿಸಿದ ಗ್ಲೆನ್ ಮ್ಯಾಕ್ಸ್‌ವೆಲ್ ಆಸ್ಟ್ರೇಲಿಯಾದ ಗೆಲುವಿನ ಹೀರೋ. ಮ್ಯಾಕ್ಸ್‌ವೆಲ್ ಅವರ ಇನ್ನಿಂಗ್ಸ್‌ನಲ್ಲಿ 3 ಬೌಂಡರಿಗಳನ್ನು ಹೊಡೆದರು ಮತ್ತು ಅವರ ಸ್ಟ್ರೈಕ್ ರೇಟ್ 123 ಆಗಿತ್ತು. 39 ಎಸೆತಗಳನ್ನು ಆಡಿದ ನಂತರವೂ ಮ್ಯಾಕ್ಸ್‌ವೆಲ್ ಅವರ ಸ್ಟ್ರೈಕ್ ರೇಟ್ ತುಂಬಾ ಕಡಿಮೆ ಇತ್ತು, ಇದು ನಿಜವಾಗಿಯೂ ಆಶ್ಚರ್ಯಕರವಾಗಿದೆ.

ಮ್ಯಾಕ್ಸ್‌ವೆಲ್ ನಿಧಾನವಾಗಿ ಆಡಿದರು ಆದರೆ ಈ ಸರಣಿಯಲ್ಲಿ ಪಾದಾರ್ಪಣೆ ಮಾಡಿದ ಜೋಶ್ ಇಂಗ್ಲಿಸ್ ಹುರುಪಿನಿಂದ ಬ್ಯಾಟಿಂಗ್ ಮಾಡಿದರು. ಇಂಗ್ಲಿಸ್ 20 ಎಸೆತಗಳಲ್ಲಿ 40 ರನ್ ಗಳಿಸಿದರು. ಅವರ ಇನ್ನಿಂಗ್ಸ್‌ನಲ್ಲಿ 2 ಸಿಕ್ಸರ್ ಮತ್ತು 3 ಬೌಂಡರಿಗಳು ಸೇರಿದ್ದವು.

ಬಿಗ್ ಬ್ಯಾಷ್ ಲೀಗ್ ಹೀರೋ ಬೆನ್ ಮೆಕ್‌ಡರ್ಮಾಟ್ ಮತ್ತೊಮ್ಮೆ ವಿಫಲರಾದರು. ಅವರು 10 ಎಸೆತಗಳಲ್ಲಿ ಕೇವಲ 9 ರನ್ ಗಳಿಸಿದರು. ಆರಂಭಿಕರಾಗಿ ಬಂದ ಆಶ್ಟನ್ ಅಗರ್ 31 ಎಸೆತಗಳಲ್ಲಿ 26 ರನ್ ಗಳಿಸಿದರು. ನಾಯಕ ಆರನ್ ಫಿಂಚ್ 5 ಎಸೆತಗಳಲ್ಲಿ 2 ರನ್ ಗಳಿಸಲಷ್ಟೇ ಶಕ್ತರಾದರು.

ಆಸ್ಟ್ರೇಲಿಯಾದ ಜಾಯ್ ರಿಚರ್ಡ್‌ಸನ್ ಬೌಲಿಂಗ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದರು. ಈ ಬೌಲರ್ ಕೇವಲ 20 ರನ್ ನೀಡಿ 2 ವಿಕೆಟ್ ಪಡೆದರು. ಕೇನ್ ರಿಚರ್ಡ್ಸನ್ 44 ರನ್ ನೀಡಿ 2 ವಿಕೆಟ್, ಆಶ್ಟನ್ ಅಗರ್ 4 ಓವರ್ ಗಳಲ್ಲಿ ಕೇವಲ 14 ರನ್ ನೀಡಿ ಒಂದು ವಿಕೆಟ್ ಪಡೆದರು. ಝಂಪಾ ಕೂಡ ಒಂದು ವಿಕೆಟ್ ಪಡೆದರು.




