AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Will Pucovski: ಒಂದು ಪಂದ್ಯವಾಡಿ ನಿವೃತ್ತಿ ಘೋಷಿಸಿದ ಆಸ್ಟ್ರೇಲಿಯಾದ ಯುವ ಬ್ಯಾಟರ್

Will Pucovski Retirement: ವಿಲ್ ಪುಕೋವ್​​ಸ್ಕಿ ಪ್ರಥಮ ದರ್ಜೆ ಕ್ರಿಕೆಟ್​ನಲ್ಲಿ 36 ಪಂದ್ಯಗಳನ್ನು ಆಡಿದ್ದಾರೆ. ಈ ವೇಳೆ 57 ಇನ್ನಿಂಗ್ಸ್‌ಗಳಲ್ಲಿ ಬ್ಯಾಟ್ ಬೀಸಿರುವ ಅವರು ಒಟ್ಟು  2350 ರನ್ ಗಳಿಸಿದ್ದಾರೆ. ಈ ವೇಳೆ ಅವರ ಬ್ಯಾಟ್​ನಿಂದ 1 ದ್ವಿಶತಕ ಹಾಗೂ 7 ಶತಕಗಳು ಮತ್ತು 9 ಅರ್ಧಶತಕಗಳು ಮೂಡಿಬಂದಿವೆ. ಇನ್ನು 2021 ರಲ್ಲಿ ಭಾರತದ ಟೆಸ್ಟ್ ಪಂದ್ಯದೊಂದಿಗೆ ಅಂತಾರಾಷ್ಟ್ರೀಯ ಕೆರಿಯರ್ ಆರಂಭಿಸಿದ್ದ ಪುಕೋವ್​​ಸ್ಕಿ ಮೊದಲ ಪಂದ್ಯದಲ್ಲಿ 72 ರನ್ ಬಾರಿಸಿ ಮಿಂಚಿದ್ದರು. ಆ ಬಳಿಕ ಗಾಯದ ಕಾರಣ ಹೊರಗುಳಿದ ಯಂಗ್ ಬ್ಯಾಟರ್ ಇದೀಗ ಕ್ರಿಕೆಟ್ ಕೆರಿಯರ್ ಅಂತ್ಯಗೊಳಿಸುವ ಸುದ್ದಿಯೊಂದಿಗೆ ಮರಳಿದ್ದಾರೆ.

ಝಾಹಿರ್ ಯೂಸುಫ್
|

Updated on: Apr 08, 2025 | 11:55 AM

ಆಸ್ಟ್ರೇಲಿಯಾ ತಂಡದ ವಿಲ್ ಪುಕೋವ್​​ಸ್ಕಿ (Will Pucovski )ಎಲ್ಲಾ ಮಾದರಿಯ ಕ್ರಿಕೆಟ್​ನಿಂದ ನಿವೃತ್ತಿ ಘೋಷಿಸಿದ್ದಾರೆ.  ಅದು ಸಹ ತಮ್ಮ 27ನೇ ವಯಸ್ಸಿನಲ್ಲಿ ಎಂಬುದೇ ಅಚ್ಚರಿ.  2021 ರಲ್ಲಿ ಆಸ್ಟ್ರೇಲಿಯಾ ಪರ ಚೊಚ್ಚಲ ಟೆಸ್ಟ್ ಪಂದ್ಯವಾಡಿದ್ದ ಪುಕೋವ್​​ಸ್ಕಿ ಅವರನ್ನು ಮುಂದಿನ ರಿಕಿ ಪಾಂಟಿಂಗ್ ಎಂದು ಬಣ್ಣಿಸಲಾಗಿತ್ತು.

1 / 5
ಅದರಲ್ಲೂ ಹದಿಹರೆಯದ ವಿಲ್ ಪುಕೋವ್​​ಸ್ಕಿ  ಅವರ ಪುಲ್​ ಶಾಟ್ ಎಲ್ಲರ ಗಮನ ಸೆಳೆದಿದ್ದವು. ಆಕ್ರಮಣಕಾರಿ ಬ್ಯಾಟಿಂಗ್​ನೊಂದಿಗೆ ಸಂಚಲನ ಸೃಷ್ಟಿಸಿದ್ದ ಪುಕೋವ್​​ಸ್ಕಿ ಇದೀಗ ದಿಢೀರ್ ನಿವೃತ್ತಿ ಘೋಷಿಸಿದ್ದಾರೆ. ಇದಕ್ಕೆ ಮುಖ್ಯ ಕಾರಣ ಅವರ ತಲೆಗೆ 13 ಬಾರಿ ಚೆಂಡು ಬಡಿದಿರುವುದು.

2 / 5
ಮೊದಲ ಹೇಳಿದಂತೆ ಆಕ್ರಮಣಕಾರಿ ಬ್ಯಾಟಿಂಗ್​ನೊಂದಿಗೆ ಆಸ್ಟ್ರೇಲಿಯಾ ದೇಶೀಯ ಅಂಗಳದಲ್ಲಿ ಮಿಂಚಿದ್ದ ವಿಲ್ ಪುಕೋವ್​​ಸ್ಕಿ ಅವರನ್ನು ಕಟ್ಟಿಹಾಕಲು ವೇಗಿಗಳು ಬೌನ್ಸರ್​ಗಳ ಮೊರೆ ಹೋಗುತ್ತಿದ್ದರು. ಇತ್ತ ಪುಕೋವ್​​ಸ್ಕಿ ಪುಲ್ ಶಾಟ್​ನೊಂದಿಗೆ ಪ್ರತಿ ತಂತ್ರ ರೂಪಿಸುತ್ತಿದ್ದರು. ಆದರೆ ಇದರ ನಡುವೆ ಅವರ ತಲೆಗೆ 13 ಬಾರಿ ಚೆಂಡು ಬಡಿದಿದೆ.

3 / 5
ವಿಲ್ ಪುಕೋವ್​​ಸ್ಕಿ ಅವರ ವೃತ್ತಿಜೀವನದಲ್ಲಿ ತಲೆಗೆ ಒಟ್ಟು 13 ಬಾರಿ ಚೆಂಡು ಬಡಿದಿದೆ. ಅಂತಾರಾಷ್ಟ್ರೀಯ ಕ್ರಿಕೆಟ್ ಕೆರಿಯರ್ ಆರಂಭಿಸುವ ಮುನ್ನವೇ 9 ಬಾರಿ ಇಂತಹದೊಂದು ಆಘಾತ ಎದುರಿಸಿದ್ದರು. 2024 ರಲ್ಲಿ ದೇಶೀಯ ಪಂದ್ಯದಲ್ಲಿ  ರೈಲಿ ಮೆರೆಡಿತ್ ಎಸೆದ ಚೆಂಡು ಅವರ ತಲೆಗೆ ಬಡಿದಿತ್ತು. ಈ ಪಂದ್ಯದ ನಂತರ, ಕ್ರಿಕೆಟ್ ಆಸ್ಟ್ರೇಲಿಯಾ ವೈದ್ಯಕೀಯ ಸಮಿತಿಯು ಅವರ ಭವಿಷ್ಯವನ್ನು ಕಾಪಾಡಿಕೊಳ್ಳಲು ವೃತ್ತಿಜೀವನಕ್ಕೆ ವಿದಾಯ ಹೇಳಬೇಕೆಂದು ಶಿಫಾರಸು ಮಾಡಿದೆ.

4 / 5
ಅಂದರೆ ತಲೆಗೆ ಗಂಭೀರ ಗಾಯವಾಗಿರುವ ಕಾರಣ ಕ್ರಿಕೆಟ್​ನಿಂದ ದೂರ ಉಳಿಯುವಂತೆ ವೈದ್ಯರು ತಿಳಿಸಿದ್ದರು. ಅದರಂತೆ ಇದೀಗ ವಿಲ್ ಪುಕೋವ್​​ಸ್ಕಿ (Will Pucovski) ಎಲ್ಲಾ ಮಾದರಿ ಕ್ರಿಕೆಟ್​ಗೆ ವಿದಾಯ ಹೇಳಿದ್ದಾರೆ. ಅದು ಸಹ ತಮ್ಮ 27ನೇ ವಯಸ್ಸಿನಲ್ಲಿ ಎಂಬುದೇ ಬೇಸರದ ಸಂಗತಿ.

5 / 5
Follow us
ದೆಹಲಿಯ ಅಕ್ಷರಧಾಮದಲ್ಲಿ ಮಾಕ್ ಡ್ರಿಲ್; ಮತ್ತೆ ಹೊತ್ತಿದ ದೀಪಗಳು

ನಗರದ ಹಲವಾರು ಏರಿಯಾಗಳ ನಿವಾಸಿಗಳಿಗೆ ಸೈರನ್ ಕೇಳಿಸಿಲ್ಲ

ಮಗಳ ಸಿನಿಮಾ ಪಯಣಕ್ಕೆ ದರ್ಶನ್, ಸುದೀಪ್ ಬೆಂಬಲ ನೆನೆದ ನಟ ಪ್ರೇಮ್

ಭಾರತದ ದಾಳಿಗೆ ಬಲಿಯಾದ ಉಗ್ರರಿಗೆ ಪಾಕಿಸ್ತಾನದ ಧ್ವಜ ಹೊದಿಸಿ ಅಂತ್ಯಕ್ರಿಯೆ

ರಾಜತಾಂತ್ರಿಕವಾಗಿಯೂ ಭಾರತ ಪಾಕಿಸ್ತಾನದ ವಿರುದ್ಧ ಗೆದ್ದಿದೆ: ಡಾ ಮಂಜುನಾಥ್

ಬೆಂಗಳೂರಿನಲ್ಲಿ ಬ್ಲ್ಯಾಕ್ ಔಟ್: ಕಗ್ಗತ್ತಲಾದ ರಾಜಧಾನಿ, ವಿಡಿಯೋ ನೋಡಿ

ಆಪರೇಷನ್​ ಸಿಂಧೂರ್: ಭಾರತ ವಿವೇಕಯುತದಿಂದ ಹೆಜ್ಜೆ ಇಟ್ಟಿದೆ, ​ಗುರೂಜಿ

ಆಪರೇಷನ್ ಸಿಂಧೂರ್: ಮೋದಿಯ ನಾಯಕತ್ವವ ಕೊಂಡಾಡಿದ ತಾರಾ

ಸರ್ಕಾರದ ನಿರ್ಧಾರ ಸರಿ ಇದೆ: ಆಪರೇಷನ್ ಸಿಂಧೂರ್ ಬಗ್ಗೆ ಶಿವಣ್ಣ ಪ್ರತಿಕ್ರಿಯೆ

ಸೇನೆ ಮತ್ತು ಪ್ರಧಾನಿ ಮೋದಿಯವರಿಗೆ ಅಭಿನಂದನೆಗಳು: ಮುತಾಲಿಕ್