ವಿರಾಟ್ ಕೊಹ್ಲಿಯ ಬೇಡದ ದಾಖಲೆ ಮುರಿದ ಬಾಬರ್ ಆಝಂ

Updated on: Oct 30, 2025 | 7:25 AM

Babar Azam vs Virat Kohli: ಪಾಕಿಸ್ತಾನ್ ತಂಡದ ಮಾಜಿ ನಾಯಕ ಬಾಬರ್ ಆಝಂ ಟಿ೨೦ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಹೊಸ ಇತಿಹಾಸ ಬರೆಯುವ ಹೊಸ್ತಿಲಲ್ಲಿದ್ದಾರೆ. ಆ ದಾಖಲೆ ಬರೆಯುವ ಮುನ್ನವೇ ಬಾಬರ್, ವಿರಾಟ್ ಕೊಹ್ಲಿಯ ಹೆಸರಿನಲ್ಲಿದ್ದ ಬೇಡದ ದಾಖಲೆಯೊಂದನ್ನು ಮುರಿದಿದ್ದಾರೆ. ಆ ದಾಖಲೆ ಕುರಿತಾದ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ...

1 / 5
ಪಾಕಿಸ್ತಾನ್ ತಂಡದ ಸ್ಟಾರ್ ಬ್ಯಾಟರ್ ಬಾಬರ್ ಆಝಂ (Babar Azam) ಹೊಸ ದಾಖಲೆ ಬರೆದಿದ್ದಾರೆ. ಆದರೆ ಅದು ಅನಗತ್ಯ ದಾಖಲೆ. ಅಂದರೆ ಟಿ20 ಕ್ರಿಕೆಟ್‌ನಲ್ಲಿ ಸೊನ್ನೆ ಸುತ್ತುವ ಮೂಲಕ ಬೇಡದ ದಾಖಲೆಯೊಂದಕ್ಕೆ ಬಾಬರ್ ಕೊರೊಳೊಡ್ಡಿದ್ದಾರೆ.

2 / 5
ರಾವಲ್ಪಿಂಡಿಯಲ್ಲಿ ನಡೆದ ಸೌತ್ ಆಫ್ರಿಕಾ ವಿರುದ್ಧದ ಮೊದಲ ಟಿ೨೦ ಪಂದ್ಯದಲ್ಲಿ ಬಾಬರ್ ಆಝಂ ಶೂನ್ಯಕ್ಕೆ ಔಟಾಗಿದ್ದರು. ಹೀಗೆ ಸೊನ್ನೆ ಸುತ್ತುವ ಮೂಲಕ ಪಾಕ್ ಪರ ಟಿ೨೦ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತ್ಯಧಿಕ ಬಾರಿ ಝೀರೋಗೆ ಔಟಾದ ಬ್ಯಾಟರ್​ಗಳ ಪಟ್ಟಿಯಲ್ಲಿ ಬಾಬರ್ ಮೂರನೇ ಸ್ಥಾನಕ್ಕೇರಿದ್ದಾರೆ.

3 / 5
ಅಷ್ಟೇ ಅಲ್ಲದೇ ಟಿ೨೦ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತ್ಯಧಿಕ ಸೊನ್ನೆ ಸುತ್ತಿದ ಬ್ಯಾಟರ್​ಗಳ ಪಟ್ಟಿಯಲ್ಲಿ ವಿರಾಟ್ ಕೊಹ್ಲಿಯನ್ನು ಹಿಂದಿಕ್ಕಿದ್ದಾರೆ. ಭಾರತದ ಪರ 117 ಟಿ೨೦ ಇನಿಂಗ್ಸ್ ಆಡಿರುವ ವಿರಾಟ್ ಕೊಹ್ಲಿ ಒಟ್ಟು 7 ಬಾರಿ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ್ದರು. ಇದೀಗ ಈ ಪಟ್ಟಿಯಲ್ಲಿ ಬಾಬರ್ ಕಿಂಗ್ ಕೊಹ್ಲಿಯನ್ನು ಹಿಂದಿಕ್ಕಿದ್ದಾರೆ.

4 / 5
ಪಾಕಿಸ್ತಾನ್ ಪರ ಈವರೆಗೆ 129 ಟಿ೨೦ ಪಂದ್ಯಗಳನ್ನಾಡಿರುವ ಬಾಬರ್ ಆಝಂ 122 ಇನಿಂಗ್ಸ್ ಗಳಲ್ಲಿ ಬ್ಯಾಟ್ ಬೀಸಿದ್ದಾರೆ. ಈ ವೇಳೆ 8 ಬಾರಿ ಶೂನ್ಯಕ್ಕೆ ಔಟಾಗಿದ್ದಾರೆ. ಈ ಮೂಲಕ ಟಿ೨೦ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತೀ ಹೆಚ್ಚು ಬಾರಿ ಝೀರೋಗೆ ಔಟಾದ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಬಾಬರ್ ಆಝಂ ಕಳಪೆ ದಾಖಲೆಯೊಂದನ್ನು ನಿರ್ಮಿಸಿದ್ದಾರೆ.

5 / 5
ಈ ಕಳಪೆ ದಾಖಲೆಯ ಹೊರತಾಗಿಯೂ ಮುಂದಿನ ಪಂದ್ಯದಲ್ಲಿ ಭರ್ಜರಿ ದಾಖಲೆಯೊಂದು ನಿರ್ಮಿಸುವ ಅವಕಾಶ ಬಾಬರ್ ಆಝಂ ಮುಂದಿದೆ. ಅಂದರೆ ಸೌತ್ ಆಫ್ರಿಕಾ ವಿರುದ್ಧದ ಎರಡನೇ ಟಿ೨೦ ಪಂದ್ಯದಲ್ಲಿ 9 ರನ್ ಗಳಿಸಿದರೆ ಟಿ೨೦ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತ್ಯಧಿಕ ರನ್ ಕಲೆಹಾಕಿದ ದಾಖಲೆ ಬಾಬರ್ ಆಝಂ (4223) ಪಾಲಾಗಲಿದೆ. ಸದ್ಯ ಈ ವಿಶ್ವ ದಾಖಲೆ ರೋಹಿತ್ ಶರ್ಮಾ (4231)  ಹೆಸರಿನಲ್ಲಿದೆ.

Published On - 7:23 am, Thu, 30 October 25