ಐಪಿಎಲ್​ನಲ್ಲಿ ಫೀಲ್ಡಿಂಗ್​ಗೆ ಅಡ್ಡಿ ಪಡಿಸಿ ಔಟಾದ ನಾಲ್ವರು ಬ್ಯಾಟರ್​ಗಳು ಇವರೇ..!

Updated on: Apr 27, 2026 | 1:33 PM

ಕ್ರಿಕೆಟ್‌ನ ನಿಯಮ 37ರ ಪ್ರಕಾರ, ಒಬ್ಬ ಬ್ಯಾಟರ್ ಫೀಲ್ಡಿಂಗ್ ಮಾಡುವ ತಂಡಕ್ಕೆ ಮಾತು ಅಥವಾ ಕ್ರಿಯೆಯ ಮೂಲಕ ಉದ್ದೇಶಪೂರ್ವಕವಾಗಿ ಅಡ್ಡಿಪಡಿಸಿದರೆ ಅವರನ್ನು ಔಟ್ ಎಂದು ಘೋಷಿಸಬಹುದು. ರನ್ ಓಡುವಾಗ ಫೀಲ್ಡರ್ ಎಸೆದ ಚೆಂಡು ಸ್ಟಂಪ್‌ಗೆ ತಗುಲದಂತೆ ತಡೆಯಲು ಬ್ಯಾಟರ್ ತನ್ನ ಓಟದ ಹಾದಿಯನ್ನು ಬದಲಿಸಿದರೆ ಅದು ಈ ನಿಯಮದಡಿ ಬರುತ್ತದೆ. ಇದನ್ನೇ 'ಅಬ್‌ಸ್ಟ್ರಕ್ಟಿಂಗ್ ದ ಫೀಲ್ಡ್'  ಔಟ್ ಎನ್ನಲಾಗುತ್ತದೆ.

1 / 5
ಕ್ರಿಕೆಟ್ ಜಗತ್ತಿನಲ್ಲಿ ಬ್ಯಾಟರ್ ಒಬ್ಬರು ಔಟ್ ಆಗಲು ಹಲವಾರು ದಾರಿಗಳಿವೆ. ಆದರೆ, ಅತಿ ಹೆಚ್ಚು ಚರ್ಚೆಗೆ ಮತ್ತು ವಿವಾದಕ್ಕೆ ಕಾರಣವಾಗುವ ಒಂದು ಔಟ್ ಎಂದರೆ ಅದು 'ಅಬ್‌ಸ್ಟ್ರಕ್ಟಿಂಗ್ ದ ಫೀಲ್ಡ್'. ಅಂದರೆ, ಫೀಲ್ಡರ್ ಚೆಂಡನ್ನು ಎಸೆಯುವಾಗ ಅಥವಾ ಹಿಡಿಯುವಾಗ ಬ್ಯಾಟರ್ ಬೇಕೆಂದೇ ಅಡ್ಡ ಬರುವುದು ಅಥವಾ ಅಡ್ಡಿಪಡಿಸುವುದು. ಹೀಗೆ ಫೀಲ್ಡಿಂಗ್​ಗೆ ಅಡ್ಡಿಪಡಿಸಿ ಐಪಿಎಲ್​ನಲ್ಲಿ ಔಟಾದ ನಾಲ್ವರು ಬ್ಯಾಟರ್​ಗಳ ಪಟ್ಟಿ ಇಲ್ಲಿದೆ...

2 / 5
ಯೂಸುಫ್ ಪಠಾಣ್ (2013): ಐಪಿಎಲ್ ಇತಿಹಾಸದಲ್ಲಿ ಈ ರೀತಿ ಔಟ್ ಆದ ಮೊದಲ ಆಟಗಾರ ಕೋಲ್ಕತ್ತಾ ನೈಟ್ ರೈಡರ್ಸ್‌ನ ಯೂಸುಫ್ ಪಠಾಣ್. ಪುಣೆ ವಾರಿಯರ್ಸ್ ವಿರುದ್ಧದ ಪಂದ್ಯದಲ್ಲಿ ರನ್ ಓಡುವಾಗ ಬೌಲರ್ ವೇಯ್ನ್ ಪಾರ್ನೆಲ್ ಚೆಂಡನ್ನು ಎತ್ತಿಕೊಳ್ಳಲು ಪ್ರಯತ್ನಿಸುತ್ತಿದ್ದರು. ಈ ವೇಳೆ ಪಠಾಣ್ ಕಾಲಿನಿಂದ ಚೆಂಡನ್ನು ಒದ್ದಿದ್ದರು. ಇದನ್ನು ಉದ್ದೇಶಪೂರ್ವಕ ಫೀಲ್ಡಿಂಗ್ ಅಡ್ಡಿ ಎಂದು ಪರಿಗಣಿಸಿ ಔಟ್ ನೀಡಲಾಗಿತ್ತು.

3 / 5
ಅಮಿತ್ ಮಿಶ್ರಾ (2019): ಡೆಲ್ಲಿ ಕ್ಯಾಪಿಟಲ್ಸ್ ಪರ ಆಡುತ್ತಿದ್ದ ಅಮಿತ್ ಮಿಶ್ರಾ, ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ರನ್ ಓಡುವಾಗ ತಮ್ಮ ಹಾದಿಯನ್ನು ಬದಲಿಸಿದ್ದರು. ಫೀಲ್ಡರ್ ಎಸೆದ ಚೆಂಡು ಸ್ಟಂಪ್‌ಗೆ ತಗುಲದಂತೆ ತಡೆಯಲು ಅವರು ಪಿಚ್‌ನ ಮಧ್ಯದಲ್ಲಿ ಓಡಿದ್ದರಿಂದ 'ಅಬ್‌ಸ್ಟ್ರಕ್ಟಿಂಗ್ ದ ಫೀಲ್ಡ್' ನಿಯಮದಡಿಯಲ್ಲಿ ಔಟ್ ನೀಡಲಾಗಿತ್ತು.

4 / 5
ರವೀಂದ್ರ ಜಡೇಜಾ (2024): ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ ಪರ ಕಣಕ್ಕಿಳಿದಿದ್ದ ರವೀಂದ್ರ ಜಡೇಜಾ ಎರಡನೇ ರನ್‌ಗಾಗಿ ಓಡುವಾಗ ಸಂಜು ಸ್ಯಾಮ್ಸನ್ ಅವರ ಎಸೆತಕ್ಕೆ ಅಡ್ಡ ಬಂದಿದ್ದರು. ರಿಪ್ಲೇನಲ್ಲಿ ಜಡೇಜಾ ಚೆಂಡು ಬರುತ್ತಿರುವುದನ್ನು ನೋಡಿ ಓಟದ ಹಾದಿ ಬದಲಿಸಿದ್ದು ಸಾಬೀತಾದ ಕಾರಣ ಅಂಪೈರ್ ಔಟ್ ನೀಡಿದ್ದರು.

5 / 5
ಅಂಗ್​​ಕ್ರಿಶ್ ರಘುವಂಶಿ (2026): ಕೊಲ್ಕತ್ತಾ ನೈಟ್ ರೈಡರ್ಸ್​ ತಂಡದ ಯುವ ಆಟಗಾರ ಅಂಗ್​ಕ್ರಿಶ್ ರಘುವಂಶಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಮೊಹಮ್ಮದ್ ಶಮಿ ಅವರ ಥ್ರೋಗೆ ಅಡ್ಡ ಬಂದಿದ್ದರು. ಇದನ್ನು ಪರಿಶೀಲಿಸಿದ ಮೂರನೇ ಅಂಪೈರ್ 'ಅಬ್‌ಸ್ಟ್ರಕ್ಟಿಂಗ್ ದ ಫೀಲ್ಡ್' ನಿಯಮದಡಿಯಲ್ಲಿ ಔಟ್ ನೀಡಿದ್ದರು.

Published On - 1:31 pm, Mon, 27 April 26

Loading...
Unable to load recommendations.
Follow Us