- Kannada News Photo gallery Cricket photos BCCI can look at these five players and include Indian Squad for West Indies series
India Squad for WI: ವಿಂಡೀಸ್ ವಿರುದ್ಧದ ಟಿ20 ಸರಣಿಗೆ ಐಪಿಎಲ್ನ ಈ 5 ಸ್ಟಾರ್ ಪ್ಲೇಯರ್ಸ್ ಆಯ್ಕೆ ಖಚಿತ
Team India: ಕೆರಿಬಿಯನ್ನರ ನಾಡಿಗೆ ಪ್ರವಾಸ ಬೆಳೆಸಲಿರುವ ಟೀಮ್ ಇಂಡಿಯಾ ಟೆಸ್ಟ್, ಏಕದಿನ ಮತ್ತು ಟಿ20 ಸರಣಿಯಲ್ಲಿ ಪಾಲ್ಗೊಳ್ಳಲಿದೆ. ಜೂನ್ 27ಕ್ಕೆ ಈ ಸರಣಿಗೆ ಭಾರತ ತಂಡ ಪ್ರಕಟವಾಗಲಿದೆ.
Updated on: Jun 20, 2023 | 6:58 AM

ಭಾರತ ಕ್ರಿಕೆಟ್ ತಂಡ ಸದ್ಯ ವಿಶ್ರಾಂತಿಯಲ್ಲಿದೆ. ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ನಲ್ಲಿ ಸೋಲುಂಡ ಬಳಿಕ ತವರಿಗೆ ಮರಳಿರುವ ಟೀಮ್ ಇಂಡಿಯಾ ಆಟಗಾರರು ಕುಟುಂಬದ ಜೊತೆ ಸಮಯ ಕಳೆಯುತ್ತಿದ್ದಾರೆ. ಭಾರತ ತನ್ನ ಮುಂದಿನ ಪಂದ್ಯವನ್ನು ವೆಸ್ಟ್ ಇಂಡೀಸ್ ವಿರುದ್ಧ ಆಡಲಿದೆ.

ಕೆರಿಬಿಯನ್ನರ ನಾಡಿಗೆ ಪ್ರವಾಸ ಬೆಳೆಸಲಿರುವ ಟೀಮ್ ಇಂಡಿಯಾ ಟೆಸ್ಟ್, ಏಕದಿನ ಮತ್ತು ಟಿ20 ಸರಣಿಯಲ್ಲಿ ಪಾಲ್ಗೊಳ್ಳಲಿದೆ. ಜೂನ್ 27ಕ್ಕೆ ಈ ಸರಣಿಗೆ ಭಾರತ ತಂಡ ಪ್ರಕಟವಾಗಲಿದೆ. ಇದರಲ್ಲಿ ಟಿ20 ಸರಣಿಗೆ ಐಪಿಎಲ್ 2023 ರಲ್ಲಿ ಮಿಂಚಿದ ಆಟಗಾರರು ಆಯ್ಕೆ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಯಶಸ್ವಿ ಜೈಸ್ವಾಲ್: ಐಪಿಎಲ್ 2023 ರಲ್ಲಿ ಆರೆಂಜ್ ಕ್ಯಾಪ್ ಹತ್ತಿರವಿದ್ದ ರಾಜಸ್ಥಾನ್ ರಾಯಲ್ಸ್ ತಂಡದ ಯಶಸ್ವಿ ಜೈಸ್ವಾಲ್ ವಿಂಡೀಸ್ ವಿರುದ್ಧದ ಟಿ20 ಸರಣಿಗೆ ಆಯ್ಕೆ ಆಗುವುದು ಬಹುತೇಕ ಖಚಿತ. ಇವರು ಈ ಬಾರಿಯ ಐಪಿಎಲ್ನಲ್ಲಿ ಆಡಿದ 14 ಪಂದ್ಯಗಳಲ್ಲಿ 625 ರನ್ ಸಿಡಿಸಿದ್ದರು. ಒಂದು ಶತಕ ಕೂಡ ಬಂದಿದೆ.

ರಿಂಕು ಸಿಂಗ್: ಈ ಬಾರಿಯ ಐಪಿಎಲ್ನಲ್ಲಿ ಕ್ರಿಕೆಟ್ ಪಂಡಿತರ ಲೆಕ್ಕಚಾರವನ್ನೇ ತಲೆಕೆಳಗಾಗಿಸಿದ್ದು ರಿಂಕು ಸಿಂಗ್. 20ನೇ ಓವರ್ನಲ್ಲಿ ಸತತ 5 ಸಿಕ್ಸರ್ ಸಿಡಿಸಿ ಕೆಕೆಆರ್ ತಂಡಕ್ಕೆ ಜಯ ತಂದುಕೊಟ್ಟ ರಿಂಕುಗೆ ಟೀಮ್ ಇಂಡಿಯಾದಲ್ಲಿ ಸ್ಥಾನ ಸಿಗಬೇಕು ಎಂಬ ಕೂಗು ಕೂಡ ಜೋರಾಗಿದೆ. ಹೀಗಾಗಿ ಇವರು ಫಿನಿಶರ್ ಜವಾಬ್ದಾರಿ ಹೊರುವ ಸಾಧ್ಯತೆ ಇದೆ.

ಮೋಹಿತ್ ಶರ್ಮಾ: ಐಪಿಎಲ್ 2023 ರಲ್ಲಿ ಸದ್ದಿಲ್ಲದೆ ಭರ್ಜರಿ ಕಮ್ಬ್ಯಾಕ್ ಮಾಡಿದ ಪ್ಲೇಯರ್ ಮೋಹಿತ್ ಶರ್ಮಾ. ಜಿಟಿ ತಂಡದ ಪರ ವಿಕೆಟ್ ಟೇಕರ್ ಬೌಲರ್ ಆಗಿ ಕಾಣಿಸಿಕೊಂಡ ಇವರು 14 ಪಂದ್ಯಗಳಿಂದ 27 ವಿಕೆಟ್ ಕಬಳಿಸಿದ್ದರು.

ವರುಣ್ ಚಕ್ರವರ್ತಿ: ಐಪಿಎಲ್ 2023 ರಲ್ಲಿ ಇಂಜುರಿಯಿಂದ ಭರ್ಜರಿ ಆಗಿ ಕಮ್ಬ್ಯಾಕ್ ಮಾಡಿರುವ ವರುಣ್ ಚಕ್ರವರ್ತಿ 14 ಪಂದ್ಯಗಳಿಂದ 20 ವಿಕೆಟ್ ಕಿತ್ತಿದ್ದರು. ಈ ಮಿಸ್ಟ್ರಿ ಸ್ಪಿನ್ನರ್ ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಗೆ ಆಯ್ಕೆ ಆಗಬಹುದು.

ತುಷಾರ್ ದೇಶಪಾಂಡೆ: ಧೋನಿ ಗರಡಿಯಲ್ಲಿ ಬೆಳೆದ ತುಷಾರ್ ದೇಶಪಾಂಡೆ ಈ ಬಾರಿಯ ಐಪಿಎಲ್ನಲ್ಲಿ ಎಲ್ಲರ ಮೋಡಿ ಮಾಡಿದ್ದರು. 16 ಪಂದ್ಯಗಳಿಂದ 21 ವಿಕೆಟ್ ಪಡೆದಿದ್ದ ಇವರು ಮಧ್ಯಮ ಓವರ್ನಲ್ಲಿ ವಿಕೆಟ್ ಟೇಕಿಂಗ್ ಬೌಲರ್ ಆಗಿ ಕಾಣಿಸಿಕೊಂಡಿದ್ದರು.
























