IPL 2022: ಈ ಬಾರಿ ಕೂಡ ಐಪಿಎಲ್ ವಿದೇಶಕ್ಕೆ ಶಿಫ್ಟ್​..?

IPL 2022 Mega Auction: ಕಳೆದ ಸೀಸನ್​ನಲ್ಲಿ ಬಿಸಿಸಿಐ ಸಂಪೂರ್ಣ ಸುರಕ್ಷತೆಯೊಂದಿಗೆ ಭಾರತದಲ್ಲೇ ಟೂರ್ನಿ ಆಯೋಜಿಸಿತ್ತು. ಇದಾಗ್ಯೂ ಮೊದಲಾರ್ಧದ ಮುಕ್ತಾಯದ ವೇಳೆ ಆಟಗಾರರಲ್ಲಿ ಕೊರೋನಾ ಸೋಂಕು ಕಂಡು ಬಂದ ಹಿನ್ನೆಲೆಯಲ್ಲಿ ಟೂರ್ನಿಯನ್ನು ಮುಂದೂಡಲಾಗಿತ್ತು.

TV9 Web
| Updated By: ಝಾಹಿರ್ ಯೂಸುಫ್

Updated on: Jan 09, 2022 | 4:42 PM

ಒಂದೆಡೆ ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್​ 15 ಗಾಗಿ ಬಿಸಿಸಿಐ ಸಿದ್ದತೆಗಳನ್ನು ಆರಂಭಿಸಿದೆ. ಆದರೆ ಮತ್ತೊಂದೆಡೆ ಕೊರೋನಾ ಓಮಿಕ್ರಾನ್ ಹೆಸರಿನಲ್ಲಿ ಹೊಸ ಸವಾಲಾಗಿ ಬಿಸಿಸಿಐ ಮುಂದೆ ಬಂದು ನಿಂತಿದೆ. ಇತ್ತ ಆಟಗಾರರ ಹರಾಜಿಗೂ ಮುನ್ನ ಟೂರ್ನಿಯನ್ನು ಎಲ್ಲಿ ನಡೆಸುವುದು ಎಂಬ ಚಿಂತೆ ಬಿಸಿಸಿಐಗೆ ಶುರುವಾಗಿದೆ.

1 / 7
 ಏಕೆಂದರೆ ದೇಶದಲ್ಲಿ ಕೊರೋನಾ ಪ್ರಕರಣ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ಸೋಂಕಿನ ಅಲೆಯು ಮುಂದಿನ ತಿಂಗಳಲ್ಲೂ ಕಂಡು ಬರಲಿದೆ ಎಂದು ಹೇಳಲಾಗಿದೆ. ಇತ್ತ ಮುಂದಿನ ತಿಂಗಳು ಮೆಗಾ ಹರಾಜು ನಡೆಸಿ ಏಪ್ರಿಲ್ ವೇಳೆಗೆ ಟೂರ್ನಿಯನ್ನು ಆರಂಭಿಸುವ ಇರಾದೆಯಲ್ಲಿದೆ ಬಿಸಿಸಿಐ.

2 / 7
ಆದರೆ ಪ್ರಸ್ತುತ ಪರಿಸ್ಥಿತಿಯನ್ನು ಗಮನಿಸಿದರೆ ದೇಶದಲ್ಲಿ ಮಾರ್ಚ್​ ಅಂತ್ಯದ ವೇಳೆಗೆ ಕೋವಿಡ್ ನಿಯಂತ್ರಣಕ್ಕೆ ಬರುವುದು ಅನುಮಾನ ಎನ್ನಲಾಗುತ್ತಿದೆ. ಹೀಗಾಗಿ ಬಿಸಿಸಿಐ ಕೂಡ ಐಪಿಎಲ್​ ಟೂರ್ನಿಯನ್ನು ಆಯೋಜಿಸಲು ಪರ್ಯಾಯ ಮಾರ್ಗದತ್ತ ಚಿಂತಿಸಿದೆ. ಈ ಹಿಂದೆ ಈ ಬಾರಿ ಭಾರತದಲ್ಲೇ ಟೂರ್ನಿಯನ್ನು ಆಯೋಜಿಸುವುದಾಗಿ ಬಿಸಿಸಿಐ ತಿಳಿಸಿದ್ದರು.

3 / 7
ಆದರೀಗ ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಿರುವ ಕಾರಣ ಇದು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2022ರ ಮೇಲೂ ಪ್ರಭಾವ ಬೀರುವ ಸಾಧ್ಯತೆಯಿದೆ. ಇದಾಗ್ಯೂ ಮುಂಬರುವ ತಿಂಗಳುಗಳಲ್ಲಿ ಪರಿಸ್ಥಿತಿ ನಿಯಂತ್ರಣಕ್ಕೆ ಬರಲಿದೆ ಎಂಬ ವಿಶ್ವಾಸವನ್ನು ಬಿಸಿಸಿಐ ಹೊಂದಿದ್ದು, ಇದಾಗ್ಯೂ ಪರಿಸ್ಥಿತಿ ಹದಗೆಟ್ಟರೆ ಟೂರ್ನಿಯನ್ನು ವಿದೇಶಕ್ಕೆ ನಡೆಸಲು ಬಿಸಿಸಿಐ ಚರ್ಚೆ ನಡೆಸಿದ ಎಂದು ವರದಿಯಾಗಿದೆ.

4 / 7
ನಾವು ವಿದೇಶದಲ್ಲಿ ಐಪಿಎಲ್ ಆಯೋಜಿಸುವ ಆಯ್ಕೆಗಳನ್ನು ಅನ್ವೇಷಿಸುತ್ತಿದ್ದೇವೆ. ಆದರೆ ನಮ್ಮ ಮೊದಲ ಆಯ್ಕೆ ಭಾರತದಲ್ಲೇ ಟೂರ್ನಿ ನಡೆಸುವುದು. ಸದ್ಯಕ್ಕೆ ನಮ್ಮ ಆದ್ಯತೆಯು ಮೆಗಾ ಹರಾಜು ನಡೆಸುವುದು. ಇದಾದ ಬಳಿಕ ಫ್ರಾಂಚೈಸಿಗಳ ಜೊತೆ ಚರ್ಚಿಸಿ ಮುಂದಿನ ನಿರ್ಧಾರ ತೆಗೆದುಕೊಳ್ಳಲಿದ್ದೇವೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ.

5 / 7
ಸದ್ಯ ಬಿಸಿಸಿಐ ಮುಂದಿನ ತಿಂಗಳು ವೆಸ್ಟ್ ಇಂಡೀಸ್ ವಿರುದ್ದದ ಸರಣಿಯನ್ನು ಆಯೋಜಿಸಬೇಕಿದೆ. ಇದರ ಬೆನ್ನಲ್ಲೇ ಶ್ರೀಲಂಕಾ ವಿರುದ್ದ ಕೂಡ ಟೀಮ್ ಇಂಡಿಯಾ ಸರಣಿ ಆಡಬೇಕಿದೆ. ಈ ಎರಡು ಸರಣಿಗಳನ್ನು ಯಶಸ್ವಿಯಾಗಿ ಆಯೋಜಿಸಲು ಸಾಧ್ಯವಾದರೆ ಭಾರತದಲ್ಲೇ ಟೂರ್ನಿಯನ್ನು ನಡೆಸಬಹುದು. ಅಥವಾ ವೆಸ್ಟ್ ಇಂಡೀಸ್​ ಹಾಗೂ ಶ್ರೀಲಂಕಾ ತಂಡಗಳ ಸುರಕ್ಷತೆ ಕಷ್ಟವಾದರೆ, 10 ತಂಡಗಳನ್ನು ಒಳಗೊಂಡಿರುವ ಐಪಿಎಲ್ ಟೂರ್ನಿ ವಿದೇಶದಲ್ಲಿ ನಡೆಯುವುದು ಖಚಿತ ಎನ್ನಲಾಗಿದೆ.

6 / 7
ಏಕೆಂದರೆ ಕಳೆದ ಸೀಸನ್​ನಲ್ಲಿ ಬಿಸಿಸಿಐ ಸಂಪೂರ್ಣ ಸುರಕ್ಷತೆಯೊಂದಿಗೆ ಭಾರತದಲ್ಲೇ ಟೂರ್ನಿ ಆಯೋಜಿಸಿತ್ತು. ಇದಾಗ್ಯೂ ಮೊದಲಾರ್ಧದ ಮುಕ್ತಾಯದ ವೇಳೆ ಆಟಗಾರರಲ್ಲಿ ಕೊರೋನಾ ಸೋಂಕು ಕಂಡು ಬಂದ ಹಿನ್ನೆಲೆಯಲ್ಲಿ ಟೂರ್ನಿಯನ್ನು ಮುಂದೂಡಲಾಗಿತ್ತು. ಆ ಬಳಿಕ ದ್ವಿತಿಯಾರ್ಧವನ್ನು ಯುಎಇನಲ್ಲಿ ನಡೆಸಲಾಗಿತ್ತು. ಹೀಗಾಗಿ ಮಾರ್ಚ್​ ವೇಳೆ ಭಾರತದಲ್ಲಿ ಕೊರೋನಾ ನಿಯಂತ್ರಣಕ್ಕೆ ಬರದಿದ್ದರೆ IPL 2022 ವಿದೇಶದಲ್ಲಿ ಆಯೋಜಿಸುವ ಸಾಧ್ಯತೆ ಹೆಚ್ಚಿದೆ.

7 / 7
Follow us
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ

ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು

ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ

ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ

ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ

ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ

ಆಸ್ಟ್ರೇಲಿಯಾದಲ್ಲಿ RCB ದಾಂಡಿಗನ ಸಿಡಿಲಬ್ಬರ: ಸ್ಪೋಟಕ ಅರ್ಧಶತಕ

ಆಮರಣಾಂತ ಉಪವಾಸ ಸತ್ಯಾಗ್ರಹ, ಪ್ರಶಾಂತ್ ಕಿಶೋರ್ ಬಂಧನ

ಈ ವಾರದ ಟಾಸ್ಕ್​ ಗೆದ್ದರೆ ಸಿಗಲಿದೆ ಡೈರೆಕ್ಟ್​ ಫಿನಾಲೆಗೆ ಏರುವ ಟಿಕೆಟ್

Daily Devotional: ಪಚ್ಚ ಕರ್ಪೂರದ ಮಹತ್ವ ಮತ್ತು ಉಪಯೋಗ ತಿಳಿಯಿರಿ