IPL: ಐಪಿಎಲ್ ಮೂಲಕ ಬರೋಬ್ಬರಿ 40 ಸಾವಿರ ಕೋಟಿಗಳಿಸಲು ಬಿಸಿಸಿಐ ಪ್ಲ್ಯಾನ್..!

Edited By:

Updated on: Dec 18, 2021 | 9:47 PM

IPL rights: ಬಿಸಿಸಿಐ ಮುಂಬರುವ ಐಪಿಎಲ್ ಸೀಸನ್​ಗಳ ಮಾಧ್ಯಮ ಹಕ್ಕುಗಳನ್ನು ಮಾರಾಟ ಮಾಡಲು ಯೋಜನೆ ರೂಪಿಸಿದೆ.(ಡೈಲಿಹಂಟ್​ನಲ್ಲಿ ಫೋಟೋ ಗ್ಯಾಲರಿ ಸ್ಟೋರಿಯಲ್ಲಿ ಸುದ್ದಿ ಸಾರಾಂಶ ಕಾಣಿಸುತ್ತಿಲ್ಲ. ಹಾಗಾಗಿ tv9kannada.com ಗೆ ಭೇಟಿ ನೀಡಿದ್ರೆ ಸಂಪೂರ್ಣ ಸುದ್ದಿ ಓದಬಹುದು)

1 / 5
ಇಂಡಿಯನ್ ಪ್ರೀಮಿಯರ್ ಲೀಗ್ ಮೂಲಕ ಒಂದೇ ವರ್ಷದಲ್ಲಿ ಬಿಸಿಸಿಐ 50 ಸಾವಿರ ಕೋಟಿಗೂ ಅಧಿಕ ಆದಾಯಗಳಿಸುವ ಭರ್ಜರಿ ಪ್ಲ್ಯಾನ್​ನಲ್ಲಿದೆ. ಈ ಮೊದಲು ಹೊಸ ಎರಡು ತಂಡಗಳ ಮಾರಾಟದಿಂದ 12,725 ಕೋಟಿ ರೂ. ಪಡೆದಿರುವ ಬಿಸಿಸಿಐ ಇದೀಗ ಪ್ರಸಾರ ಹಕ್ಕಿನಿಂದ 40 ಸಾವಿರ ಕೋಟಿ ಪಡೆಯುವ ಇರಾದೆಯಲ್ಲಿದೆ.

ಇಂಡಿಯನ್ ಪ್ರೀಮಿಯರ್ ಲೀಗ್ ಮೂಲಕ ಒಂದೇ ವರ್ಷದಲ್ಲಿ ಬಿಸಿಸಿಐ 50 ಸಾವಿರ ಕೋಟಿಗೂ ಅಧಿಕ ಆದಾಯಗಳಿಸುವ ಭರ್ಜರಿ ಪ್ಲ್ಯಾನ್​ನಲ್ಲಿದೆ. ಈ ಮೊದಲು ಹೊಸ ಎರಡು ತಂಡಗಳ ಮಾರಾಟದಿಂದ 12,725 ಕೋಟಿ ರೂ. ಪಡೆದಿರುವ ಬಿಸಿಸಿಐ ಇದೀಗ ಪ್ರಸಾರ ಹಕ್ಕಿನಿಂದ 40 ಸಾವಿರ ಕೋಟಿ ಪಡೆಯುವ ಇರಾದೆಯಲ್ಲಿದೆ.

2 / 5

ಹೌದು, ಬಿಸಿಸಿಐ ಮುಂಬರುವ ಐಪಿಎಲ್ ಸೀಸನ್​ಗಳ ಮಾಧ್ಯಮ ಹಕ್ಕುಗಳನ್ನು ಮಾರಾಟ ಮಾಡಲು ಯೋಜನೆ ರೂಪಿಸಿದೆ. ಅದರಂತೆ ಶೀಘ್ರದಲ್ಲೇ ಟೆಂಡರ್ ಕರೆಯಲಿದ್ದೇವೆ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ತಿಳಿಸಿದ್ದಾರೆ.

3 / 5

ಹೊಸ ತಂಡಗಳ ಮಾರಾಟದಿಂದ 12 ಸಾವಿರ ಕೋಟಿಗೂ ಅಧಿಕ ಮೊತ್ತಗಳಿಸಿರುವ ಕಾರಣ, 2023 ರಿಂದ 2027 ರವರೆಗಿನ ಮಾಧ್ಯಮ ಪ್ರಸಾರ ಹಕ್ಕಿನಿಂದ 40 ಸಾವಿರ ಕೋಟಿಗೂ ಅಧಿಕ ಮೊತ್ತಗಳಿಸುವ ನಿರೀಕ್ಷೆಯಿದೆ ಎಂದು ಗಂಗೂಲಿ ತಿಳಿಸಿದ್ದಾರೆ.

4 / 5

2018 ರಿಂದ 2022 ರವರೆಗಿನ IPL ಪ್ರಸಾರಕ್ಕಾಗಿ (ಟಿವಿ ಮತ್ತು ಡಿಜಿಟಲ್) ಸ್ಟಾರ್ ಇಂಡಿಯಾ ನೆಟ್​ವರ್ಕ್​ ಬರೋಬ್ಬರಿ 16,347.50 ಕೋಟಿ ಪಾವತಿಸಿತ್ತು. ಇದೀಗ ಹೊಸ ತಂಡಗಳ ಸೇರ್ಪಡೆಯಿಂದಾಗಿ 14 ಪಂದ್ಯಗಳು ಕೂಡ ಹೆಚ್ಚಾಗಲಿದೆ. ಹೀಗಾಗಿ ಮುಂದಿನ ಐದು ಸೀಸನ್​ನಲ್ಲಿ ಐಪಿಎಲ್​ನ ಪ್ರಸಾರ ಹಕ್ಕು 40 ಸಾವಿರ ಕೋಟಿಗೂ ಅಧಿಕ ಮೊತ್ತಕ್ಕೆ ಮಾರಾಟ ಮಾಡುವ ಬಗ್ಗೆ ಬಿಸಿಸಿಐ ಯೋಜನೆ ರೂಪಿಸಿದೆ.

5 / 5

ಸದ್ಯದ ಮಾಹಿತಿ ಪ್ರಕಾರ, ಐಪಿಎಲ್ ನೇರ ಪ್ರಸಾರ ಹಕ್ಕಿಗಾಗಿ ರಿಲಯನ್ಸ್ ಇಂಡಸ್ಟ್ರೀಸ್​ನ ವಯಾಕಾಮ್, ಸ್ಟಾರ್ ನೆಟ್​ವರ್ಕ್​ ಮತ್ತು ಸೋನಿ ನೆಟ್​ವರ್ಕ್​ ಈಗಾಗಲೇ ಆಸಕ್ತಿ ಹೊಂದಿದ್ದು, ಇದರ ಜೊತೆಗೆ ಮತ್ತಷ್ಟು ಟಿವಿ-ಡಿಜಿಟಲ್ ಫ್ಲಾರ್ಟ್​ಫಾರ್ಮ್​ಗಳನ್ನು ಆಕರ್ಷಿಸುವ ಮೂಲಕ ಬಿಸಿಸಿಐ 40 ಸಾವಿರ ಕೋಟಿ ರೂ. ಅಧಿಕ ಆದಾಯಗಳಿಸುವ ಇರಾದೆಯಲ್ಲಿದೆ.

TV9 Web

TV9 Kannada

Read More
Loading...
Unable to load recommendations.
Follow Us