IPL 2025: ಮೆಗಾ ಹರಾಜಿಗೂ ಮುನ್ನವೇ ಐಪಿಎಲ್​ನಿಂದ ಬೆನ್ ಸ್ಟೋಕ್ಸ್ ಔಟ್

Updated on: Nov 06, 2024 | 7:59 AM

IPL 2025: ಐಪಿಎಲ್ ಮೆಗಾ ಹರಾಜಿಗಾಗಿ ದಿನಾಂಕ ನಿಗದಿಯಾಗಿದೆ. ನವೆಂಬರ್ 24 ಮತ್ತು 25 ರಂದು ನಡೆಯಲಿರುವ ಮೆಗಾ ಆಕ್ಷನ್​ನಲ್ಲಿ ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕ ಬೆನ್ ಸ್ಟೋಕ್ಸ್ ಕಾಣಿಸಿಕೊಳ್ಳುವುದಿಲ್ಲ. ಇದಾಗ್ಯೂ ಇಂಗ್ಲೆಂಡ್​ನ 52 ಆಟಗಾರರು ಐಪಿಎಲ್ ಮೆಗಾ ಹರಾಜಿಗಾಗಿ ಹೆಸರು ನೋಂದಾಯಿಸಿಕೊಂಡಿದ್ದಾರೆ.

1 / 5
ಇಂಡಿಯನ್ ಪ್ರೀಮಿಯರ್ ಲೀಗ್​ನ (IPL 2025) 18ನೇ ಆವೃತ್ತಿಯಲ್ಲಿ ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕ ಬೆನ್ ಸ್ಟೋಕ್ಸ್ ಕಾಣಿಸಿಕೊಳ್ಳುವುದಿಲ್ಲ ಎಂಬುದು ಖಚಿತವಾಗಿದೆ. ಮೆಗಾ ಹರಾಜಿಗಾಗಿ ಹೆಸರು ನೋಂದಣಿ ಮಾಡಿಕೊಂಡಿರುವ ಆಟಗಾರರಲ್ಲಿ ಸ್ಟೋಕ್ಸ್ ಹೆಸರು ಕಾಣಿಸಿಕೊಂಡಿಲ್ಲ. ಇದರೊಂದಿಗೆ ಬೆನ್ ಸ್ಟೋಕ್ಸ್ ಐಪಿಎಲ್ 2025 ರಿಂದ ಹೊರಗುಳಿದಿರುವುದು ಕನ್ಫರ್ಮ್ ಆದಂತಾಗಿದೆ.

ಇಂಡಿಯನ್ ಪ್ರೀಮಿಯರ್ ಲೀಗ್​ನ (IPL 2025) 18ನೇ ಆವೃತ್ತಿಯಲ್ಲಿ ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕ ಬೆನ್ ಸ್ಟೋಕ್ಸ್ ಕಾಣಿಸಿಕೊಳ್ಳುವುದಿಲ್ಲ ಎಂಬುದು ಖಚಿತವಾಗಿದೆ. ಮೆಗಾ ಹರಾಜಿಗಾಗಿ ಹೆಸರು ನೋಂದಣಿ ಮಾಡಿಕೊಂಡಿರುವ ಆಟಗಾರರಲ್ಲಿ ಸ್ಟೋಕ್ಸ್ ಹೆಸರು ಕಾಣಿಸಿಕೊಂಡಿಲ್ಲ. ಇದರೊಂದಿಗೆ ಬೆನ್ ಸ್ಟೋಕ್ಸ್ ಐಪಿಎಲ್ 2025 ರಿಂದ ಹೊರಗುಳಿದಿರುವುದು ಕನ್ಫರ್ಮ್ ಆದಂತಾಗಿದೆ.

2 / 5

ಈ ಬಾರಿಯ ಮೆಗಾ ಹರಾಜಿಗಾಗಿ ಇಂಗ್ಲೆಂಡ್​ನ 52 ಆಟಗಾರರು ಹೆಸರು ನೋಂದಾಯಿಸಿಕೊಂಡಿದ್ದಾರೆ. ಇದಾಗ್ಯೂ ಸ್ಟೋಕ್ಸ್ ಅವರು ಹೆಸರು ರಿಜಿಸ್ಟರ್ ಮಾಡಿಕೊಂಡಿಲ್ಲ. ಇದಕ್ಕೆ ಮುಖ್ಯ ಕಾರಣ ಮುಂಬರುವ ಆ್ಯಶಸ್ ಸರಣಿ ಎನ್ನಲಾಗಿದೆ. ಆಸ್ಟ್ರೇಲಿಯಾ ವಿರುದ್ಧದ ಪ್ರತಿಷ್ಠಿತ ಟೆಸ್ಟ್ ಸರಣಿಯ ಸಿದ್ಧತೆಗಾಗಿ ಸ್ಟೋಕ್ಸ್ ಐಪಿಎಲ್​ ಸೀಸನ್​-18 ರಿಂದ ಹೊರಗುಳಿಯಲು ನಿರ್ಧರಿಸಿದ್ದಾರೆ.

3 / 5

ಇದಕ್ಕೂ ಮುನ್ನ ಐಪಿಎಲ್ 2023 ರ ಹರಾಜಿನಲ್ಲಿ ಬೆನ್ ಸ್ಟೋಕ್ಸ್ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ಬರೋಬ್ಬರಿ 16.25 ಕೋಟಿ ರೂ.ಗೆ ಖರೀದಿಸಿತ್ತು. ಆದರೆ ಗಾಯದ ಕಾರಣ ಸ್ಟೋಕ್ಸ್ ಆಡಿದ್ದು ಕೇವಲ 2 ಪಂದ್ಯಗಳನ್ನು ಮಾತ್ರ. ಅಲ್ಲದೆ ಐಪಿಎಲ್ 2024 ರಿಂದ ಹೊರಗುಳಿದಿದ್ದರು. ಇದೀಗ ಐಪಿಎಲ್ 2025 ರಿಂದಲೂ ಸ್ಟೋಕ್ಸ್ ಹಿಂದೆ ಸರಿದಿದ್ದಾರೆ.

4 / 5

ಐಪಿಎಲ್​ನ ಹೊಸ ನಿಯಮಗಳ ಪ್ರಕಾರ, ತಂಡಗಳಿಗೆ ಆಯ್ಕೆಯಾದ ಬಳಿಕ ಟೂರ್ನಿಯಿಂದ ಹಿಂದೆ ಸರಿದರೆ ಆ ಆಟಗಾರನ ಮೇಲೆ 2 ವರ್ಷಗಳ ನಿಷೇಧ ಹೇರಲಾಗುತ್ತದೆ. ಈ ನಿಯಮವು ಈ ಬಾರಿಯ ಮೆಗಾ ಹರಾಜಿನಿಂದಲೇ ಚಾಲ್ತಿಗೆ ಬರಲಿದೆ. ಹೀಗಾಗಿಯೇ ಬೆನ್ ಸ್ಟೋಕ್ಸ್ ಮೆಗಾ ಹರಾಜಿಗೂ ಮುನ್ನವೇ ಐಪಿಎಲ್​ಗೆ ತಮ್ಮ ಅಲಭ್ಯತೆಯನ್ನು ತಿಳಿಸಿ, ಟೂರ್ನಿಯಿಂದ ಹಿಂದೆ ಸರಿದಿದ್ದಾರೆ.

5 / 5

ಒಂದು ವೇಳೆ ಮೆಗಾ ಹರಾಜಿನ ಮೂಲಕ ಆಯ್ಕೆಯಾಗಿ ಆ ಬಳಿಕ ಟೂರ್ನಿಯಿಂದ ಹಿಂದೆ ಸರಿದರೆ, ಆ ಆಟಗಾರನ ಮೇಲೆ 2 ವರ್ಷಗಳ ನಿಷೇಧ ಹೇರಲಾಗುತ್ತದೆ. ಇದರಿಂದ 2 ವರ್ಷಗಳ ಕಾಲ ಐಪಿಎಲ್​ನಿಂದ ಹೊರಗುಳಿಯಬೇಕಾದ ಅನಿವಾರ್ಯತೆ ಎದುರಾಗಲಿದೆ. ಹೀಗಾಗಿಯೇ ಈ ಬಾರಿ ಐಪಿಎಲ್​ಗೆ ಆಯ್ಕೆಯಾದ ಯಾವುದೇ ಆಟಗಾರ ನಿರ್ದಿಷ್ಟ ಕಾರಣಗಳಿಲ್ಲದೇ ಟೂರ್ನಿಯಿಂದ ಹೊರಗುಳಿಯುವ ಸಾಧ್ಯತೆಯಿಲ್ಲ.

Loading...
Unable to load recommendations.
Follow Us