- Kannada News Photo gallery Cricket photos Clive Lloyd Shares Honest Opinion On The Future Of Indian Cricket
‘ಐಪಿಎಲ್ ಕಾರಣ’; ಭಾರತದ ಐಸಿಸಿ ಟ್ರೋಫಿ ಬರದ ಬಗ್ಗೆ ವಿಂಡೀಸ್ ದಂತಕಥೆಯ ಅಚ್ಚರಿ ಹೇಳಿಕೆ
ICC World Cup 2023: ಇದೀಗ ಐಪಿಎಲ್ ಲೀಗ್ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿರುವ ವೆಸ್ಟ್ ಇಂಡೀಸ್ ದಿಗ್ಗಜ ಕ್ಲೈವ್ ಲಾಯ್ಡ್ ಅವರು ಐಪಿಎಲ್ನಿಂದಲೇ ಭಾರತೀಯ ಕ್ರಿಕೆಟ್ ಸಾಕಷ್ಟು ಸುಧಾರಿಸುತ್ತಿದೆ ಎಂದಿದ್ದಾರೆ.
Updated on:Jun 26, 2023 | 1:02 PM

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿ ಆಸ್ಟ್ರೇಲಿಯ ವಿರುದ್ಧ ಭಾರತ ಸೋಲನುಭವಿಸಿದಾಗ ಟೀಂ ಇಂಡಿಯಾದ ಬಗ್ಗೆ ಸಾಕಷ್ಟು ಟೀಕೆಗಳು ವ್ಯಕ್ತವಾಗಿದ್ದವು. ಅಲ್ಲದೆ ಪ್ರತಿಯೊಬ್ಬರು ಭಾರತದ ಈ ಸ್ಥಿತಿಗೆ ಐಪಿಎಲ್ ಕಾರಣ ಎಂದು ಮಿಲಿಯನ್ ಡಾಲರ್ ಟೂರ್ನಿಯನ್ನು ದೂರಿದ್ದರು.

ವಾಸ್ತವವಾಗಿ ಭಾರತ 10 ವರ್ಷಗಳಿಂದ ಐಪಿಎಲ್ ಟ್ರೋಫಿಯ ಬರ ಎದುರಿಸುತ್ತಿದೆ. ಎಂಎಸ್ ಧೋನಿ ನಾಯಕತ್ವದಲ್ಲಿ ಕೊನೆಯದಾಗಿ ಭಾರತ 2013ರ ಚಾಂಪಿಯನ್ಸ್ ಟ್ರೋಫಿಗೆ ಮುತ್ತಿಟ್ಟಿತ್ತು. ಆ ಬಳಿಕ ಭಾರತದ ಮಡಿಲಿಗೆ ಒಂದೇ ಒಂದು ಐಸಿಸಿ ಟ್ರೋಫಿ ಬಿದ್ದಿಲ್ಲ.

2ನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಆಡಿದ್ದ ಭಾರತ, ಆಸ್ಟ್ರೇಲಿಯಾ ಎದುರು ಮುಗ್ಗರಿಸಿತ್ತು. ಇದಕ್ಕೂ ಮೊದಲು 2021 ರಲ್ಲಿ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಭಾರತ ಡಬ್ಲ್ಯುಟಿಸಿಯ ಫೈನಲ್‌ನಲ್ಲಿ ಆಡಿತ್ತು. ಆದರೆ ಆ ಪಂದ್ಯದಲ್ಲಿ ನ್ಯೂಜಿಲೆಂಡ್ ಎದುರು ಸೋಲನುಭವಿಸಿತ್ತು. ಈ 10 ವರ್ಷಗಳಲ್ಲಿ ಭಾರತ ಒಟ್ಟು 4 ಬಾರಿ ಐಸಿಸಿ ಟೂರ್ನಿಯಲ್ಲಿ ಫೈನಲ್ ತಲುಪಿದ್ದು, ನಾಲ್ಕು ಬಾರಿಯೂ ಚಾಂಪಿಯನ್ ಆಗುವಲ್ಲಿ ವಿಫಲವಾಗಿದೆ.

ಟೀಂ ಇಂಡಿಯಾ ಪ್ರತಿ ಬಾರಿಯೂ ಐಸಿಸಿ ಟ್ರೋಫಿಯಿಂದ ವಂಚಿತವಾದಾಗ ಎಲ್ಲರ ಬಾಯಿಗೆ ಆಹಾರವಾಗುವುದು ಮಿಲಿಯನ್ ಡಾಲರ್ ಟೂರ್ನಿ ಐಪಿಎಲ್. ಐಪಿಎಲ್ ಅನ್ನು ಗುರಿಯಾಗಿಸಿಕೊಂಡು ಮಾತನಾಡುವ ಫ್ಯಾನ್ಸ್ ಹಾಗೂ ಭಾರತ ಮಾಜಿ ಕ್ರಿಕೆಟಿಗರು ಐಪಿಎಲ್‌ನಿಂದಾಗಿ ಟೀಂ ಇಂಡಿಯಾ ಐಸಿಸಿ ಈವೆಂಟ್ಗಳ ಕಳಪೆ ಪ್ರದರ್ಶನ ನೀಡುತ್ತಿದ್ದಾರೆ.

ಹೀಗಾಗಿ ಐಪಿಎಲ್ ಹಲವು ಬದಲಾವಣೆಗಳನ್ನು ತರಬೇಕು. ಅಲ್ಲದೆ ಪ್ರಮುಖ ಐಸಿಸಿ ಈವೆಂಟ್ಗಳಿದ್ದಾಗ ಟೀಂ ಇಂಡಿಯಾದ ಪ್ರಮುಖ ಆಟಗಾರರು ಐಪಿಎಲ್ನಿಂದ ಹಿಂದೆ ಸರಿಯಬೇಕು ಎಂಬ ಮಾತು ಬಹಳ ವರ್ಷಗಳಿಂದಲೇ ಕೇಳಿಬರುತ್ತಿದೆ. ಆದರೆ ಆ ಬಗ್ಗೆ ಈವರೆಗೆ ಯಾವುದೇ ನಿರ್ಧಾರಕ್ಕೆ ಬರಲಾಗುತ್ತಿಲ್ಲ.

ಇದೀಗ ಐಪಿಎಲ್ ಲೀಗ್ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿರುವ ವೆಸ್ಟ್ ಇಂಡೀಸ್ ದಿಗ್ಗಜ ಕ್ಲೈವ್ ಲಾಯ್ಡ್ ಅವರು ಐಪಿಎಲ್ನಿಂದಲೇ ಭಾರತೀಯ ಕ್ರಿಕೆಟ್ ಸಾಕಷ್ಟು ಸುಧಾರಿಸುತ್ತಿದೆ ಎಂದಿದ್ದಾರೆ. ಅಲ್ಲದೆ ಐಪಿಎಲ್‌ನಿಂದಾಗಿ ಭಾರತೀಯ ಕ್ರಿಕೆಟ್‌ನ ಭವಿಷ್ಯವು ತುಂಬಾ ಉತ್ತಮವಾಗಿದೆ. ಇದರಿಂದ ಭಾರತ ಅದ್ಭುತ ತಂಡವನ್ನು ಪಡೆದುಕೊಂಡಿದೆ ಎಂದು ಹೇಳುವ ಮೂಲಕ ಐಪಿಎಲ್ ಪರ ಬ್ಯಾಟ್ ಬೀಸಿದ್ದಾರೆ.

ಮುಂದುವರೆದು ಮಾತನಾಡಿದ ಲಾಯ್ಡ್ ಅವರು ಭಾರತ ಪ್ರತಿ ಬಾರಿಯೂ ಪ್ರಶಸ್ತಿ ಸಮೀಪಕ್ಕೆ ಹೋಗುತ್ತದೆ. ಆದರೆ ಅಂತಿಮ ಹಂತದಲ್ಲಿ ಎಡವುತ್ತಿದೆ. ಇದೆಲ್ಲ ಕೇವಲ ಸಮಯದ ವಿಷಯವಾಗಿದೆ ಅಷ್ಟೆ. ಈಗ ಐಪಿಎಲ್‌ನಿಂದಾಗಿ ಭಾರತದ ಭವಿಷ್ಯ ಬದಲಾಗಿದೆ ಎಂದು ನಾನು ಭಾವಿಸುತ್ತೇನೆ.

ಟೀಂ ಇಂಡಿಯಾ ಉತ್ತಮ ಏಕದಿನ ತಂಡವನ್ನು ಹೊಂದಿದೆ. ಹಾಗೆಯೇ ಅದ್ಭುತವಾದ ಟೆಸ್ಟ್ ತಂಡವನ್ನು ಹೊಂದಿದೆ. ಇದಕ್ಕೆ ಪ್ರಮುಖ ಕಾರಣ ಐಪಿಎಲ್ ಎಂದಿದ್ದಾರೆ. ಇನ್ನು ಭಾರತ ಎದುರಿಸುತ್ತಿರುವ ಐಸಿಸಿ ಟ್ರೋಫಿಯ ಬರದ ಬಗ್ಗೆ ಮಾತನಾಡಿದ ಅವರು, ಟೀಂ ಇಂಡಿಯಾ ಶೀಘ್ರದಲ್ಲೇ ಐಸಿಸಿ ಟ್ರೋಫಿಯ ರುಚಿ ನೋಡಲಿದೆ ಎಂಬ ಭರವಸೆಯನ್ನು ಟೀಂ ಇಂಡಿಯಾ ಅಭಿಮಾನಿಗಳಿಗೆ ನೀಡಿದ್ದಾರೆ.
Published On - 12:59 pm, Mon, 26 June 23




