AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

CPL 2023: ಕೆರಿಬಿಯನ್ ಪ್ರೀಮಿಯರ್ ಲೀಗ್​ಗೆ ಅಂಬಾಟಿ ರಾಯುಡು ಎಂಟ್ರಿ?

Ambati Rayudu: ಅಂಬಾಟಿ ರಾಯುಡು ಸೇಂಟ್ ಕಿಟ್ಸ್ ಮತ್ತು ನೆವಿಸ್ ಪೇಟ್ರಿಯಾಟ್ಸ್ ಪರ ಕಣಕ್ಕಿಳಿದರೆ, ಕೆರಿಬಿಯನ್ ಪ್ರೀಮಿಯರ್ ಲೀಗ್​ನಲ್ಲಿ ಆಡಿದ 2ನೇ ಭಾರತೀಯ ಆಟಗಾರ ಎನಿಸಿಕೊಳ್ಳಲಿದ್ದಾರೆ. ಇದಕ್ಕೂ ಮುನ್ನ ರಾಜಸ್ಥಾನ್ ರಾಯಲ್ಸ್ ತಂಡದ ಮಾಜಿ ಲೆಗ್ ಸ್ಪಿನ್ನರ್ ಪ್ರವೀಣ್ ತಾಂಬೆ ಟ್ರಿನ್‌ಬಾಗೊ ನೈಟ್ ರೈಡರ್ಸ್ ತಂಡದ ಪರ ಕಣಕ್ಕಿಳಿದಿದ್ದರು.

TV9 Web
| Updated By: ಝಾಹಿರ್ ಯೂಸುಫ್|

Updated on: Aug 12, 2023 | 5:07 PM

Share
ಟೀಮ್ ಇಂಡಿಯಾದ ಮಾಜಿ ಆಟಗಾರ ಅಂಬಾಟಿ ರಾಯುಡು ಕೆರಿಬಿಯನ್ ಪ್ರೀಮಿಯರ್ ಲೀಗ್​ನತ್ತ ಮುಖ ಮಾಡಿದ್ದಾರೆ. ಐಪಿಎಲ್​ 2023 ರ ಮೂಲಕ ಚೆನ್ನೈ ಸೂಪರ್ ಕಿಂಗ್ಸ್​​ಗೆ ವಿದಾಯ ಹೇಳಿರುವ ರಾಯುಡು ಸಿಪಿಎಲ್​ನ ಸೇಂಟ್ ಕಿಟ್ಸ್ ಮತ್ತು ನೆವಿಸ್ ಪೇಟ್ರಿಯಾಟ್ಸ್  ತಂಡಕ್ಕೆ ಆಯ್ಕೆಯಾಗಿದ್ದಾರೆ ಎಂದು ವರದಿಯಾಗಿದೆ.

1 / 7
ಈ ವರದಿ ಪ್ರಕಾರ, ರಾಯುಡು ಸೇಂಟ್ ಕಿಟ್ಸ್ ಮತ್ತು ನೆವಿಸ್ ಪೇಟ್ರಿಯಾಟ್ಸ್ ತಂಡಕ್ಕೆ ಮಾರ್ಕ್ಯೂ ಪ್ಲೇಯರ್ ಆಗಿ ಸಹಿ ಹಾಕಿದ್ದಾರೆ. ಹೀಗಾಗಿ ಮುಂಬರುವ ಕೆರಿಬಿಯನ್ ಪ್ರೀಮಿಯರ್ ಲೀಗ್​ನಲ್ಲಿ ಅಂಬಾಟಿ ರಾಯುಡು ಕಾಣಿಸಿಕೊಳ್ಳುವುದು ಖಚಿತ ಎನ್ನಲಾಗಿದೆ.

2 / 7
ಐಪಿಎಲ್​ 2023ರ ಮೂಲಕ ವಿದಾಯ ಹೇಳಿದ್ದ ಅಂಬಾಟಿ ರಾಯುಡು ಆ ಬಳಿಕ USA ನಲ್ಲಿ ನಡೆದ ಮೇಜರ್ ಕ್ರಿಕೆಟ್ ಲೀಗ್​ನಲ್ಲಿ ಕಾಣಿಸಿಕೊಳ್ಳಲು ಬಯಸಿದ್ದರು. ಅಷ್ಟೇ ಅಲ್ಲದೆ CSK ಫ್ರಾಂಚೈಸ್​ನ ಟೆಕ್ಸಾಸ್ ಸೂಪರ್ ಕಿಂಗ್ಸ್ ಜೊತೆ ಒಪ್ಪಂದ ಮಾಡಿಕೊಂಡಿದ್ದರು.

3 / 7
ಇದರ ಬೆನ್ನಲ್ಲೇ ಬಿಸಿಸಿಐ ಭಾರತೀಯ ಆಟಗಾರರು ನಿವೃತ್ತಿಯ ನಂತರ ವಿದೇಶಿ ಲೀಗ್‌ಗಳಲ್ಲಿ ಭಾಗವಹಿಸುವುದನ್ನು ತಡೆಯಲು ಕೂಲಿಂಗ್-ಆಫ್ ಅವಧಿ ಜಾರಿಗೆ ತರಲು ಚಿಂತನೆ ನಡೆಸುವುದಾಗಿ ತಿಳಿಸಿತ್ತು. ಹೀಗಾಗಿ ರಾಯುಡು ಮೇಜರ್ ಕ್ರಿಕೆಟ್ ಲೀಗ್​ನಿಂದ ಹಿಂದೆ ಸರಿದಿದ್ದರು.

4 / 7
ಆದರೆ ಇದೀಗ ಬಿಸಿಸಿಐ ಅಂತಹ ಯಾವುದೇ ಹೊಸ ನಿಯಮವನ್ನು ಜಾರಿಗೊಳಿಸಿಲ್ಲ. ಹೀಗಾಗಿ ಕೆರಿಬಿಯನ್ ಪ್ರೀಮಿಯರ್ ಲೀಗ್​ ಮೂಲಕ ಹೊಸ ಇನಿಂಗ್ಸ್ ಆರಂಭಿಸಲು ಅಂಬಾಟಿ ರಾಯುಡು ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ.

5 / 7
ಒಂದು ವೇಳೆ ಅಂಬಾಟಿ ರಾಯುಡು ಸೇಂಟ್ ಕಿಟ್ಸ್ ಮತ್ತು ನೆವಿಸ್ ಪೇಟ್ರಿಯಾಟ್ಸ್  ಪರ ಕಣಕ್ಕಿಳಿದರೆ, ಕೆರಿಬಿಯನ್ ಪ್ರೀಮಿಯರ್ ಲೀಗ್​ನಲ್ಲಿ ಆಡಿದ 2ನೇ ಭಾರತೀಯ ಆಟಗಾರ ಎನಿಸಿಕೊಳ್ಳಲಿದ್ದಾರೆ.

6 / 7
ಇದಕ್ಕೂ ಮುನ್ನ ರಾಜಸ್ಥಾನ್ ರಾಯಲ್ಸ್ ತಂಡದ ಮಾಜಿ ಲೆಗ್ ಸ್ಪಿನ್ನರ್ ಪ್ರವೀಣ್ ತಾಂಬೆ ಟ್ರಿನ್‌ಬಾಗೊ ನೈಟ್ ರೈಡರ್ಸ್ ತಂಡದ ಪರ ಕಣಕ್ಕಿಳಿದಿದ್ದರು. ಇದೀಗ ಅಂಬಾಟಿ ರಾಯುಡು ಕೂಡ ಕೆರಿಬಿಯನ್ ಪ್ರೀಮಿಯರ್ ಲೀಗ್​ನತ್ತ ಮುಖ ಮಾಡಿದ್ದಾರೆ.

7 / 7
ಇಂಗ್ಲೆಂಡ್ ವರನ ಕೈ ಹಿಡಿದ ಬೇಲೂರಿನ ವಧು! ನಡೆಯಿತು ಅದ್ದೂರಿ ಮದುವೆ

ಎಲಿಮಿನೇಟ್ ಆಗದಿದ್ದರೂ ರಕ್ಷಿತಾ ಶೆಟ್ಟಿಗೆ ಶುರುವಾಯ್ತು ಹೊಸ ಚಿಂತೆ

Video: ಆರತಿ ಎತ್ತಿರೋ ಫುಟ್​ಪಾತ್​ ಮೇಲೆ ಗಾಡಿ ಓಡ್ಸವ್ರಿಗೆ

ಸೈಕಲ್ ಸವಾರನಿಗೆ ಡಿಕ್ಕಿ ಹೊಡೆದು ತಿರುಗಿಯೂ ನೋಡದೆ ಹೋದ ಬೈಕ್ ಸವಾರ

Video: ಅಮ್ಮಾ ನನ್ನ ಮೈಬಣ್ಣ ಬೇರೆ ಮಾಡೋಕೆ ಆಗಲ್ವಾ, ಕಣ್ಣೀರಿಟ್ಟ ಬಾಲಕಿ

ವಿಷ್ಣು ತುಳಿಸಿ, ಹಾಗೂ ಲಕ್ಷ್ಮೀ ತುಳಸಿ ಎರೆಡೂ ಮನೆಯಲ್ಲಿರಬೇಕು ಯಾಕೆ?

ಇಂದು ಈ ರಾಶಿಯವರಿಗೆ ಐದು ಗ್ರಹಗಳ ಶುಭಫಲವಿರುತ್ತದೆ

ಮದ್ಯ ಕರ್ನಾಟದಲ್ಲಿ ಶಮನೂರು ಸಾಮ್ರಾಜ್ಯ: ಹೆಲಿಕಾಪ್ಟರ್, ಮಿನಿ ವಿಮಾನ ಒಡೆಯ

ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ

ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು