ಸೌತ್ ಆಫ್ರಿಕಾ ಟಿ20 ಲೀಗ್ನಲ್ಲಿ ಡಿಕೆ ಡುಮ್ಕಿ ಡಮಾರ್
Dinesh Karthik SA20: ಸೌತ್ ಆಫ್ರಿಕಾ ಟಿ20 ಲೀಗ್ನಲ್ಲಿ ಅರ್ಧಶತಕ ಬಾರಿಸಿದ ಮೊದಲ ಭಾರತೀಯ ಎಂಬ ದಾಖಲೆ ದಿನೇಶ್ ಕಾರ್ತಿಕ್ ಹೆಸರಿನಲ್ಲಿದೆ. ಈ ದಾಖಲೆಯ ಹೊರತಾಗಿ ಸೌತ್ ಆಫ್ರಿಕಾ ಟಿ20 ಲೀಗ್ನಲ್ಲಿ ಡಿಕೆ ಕಡೆಯಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿಲ್ಲ. ಅದರಲ್ಲೂ ಎದುರಿಸಿದ 108 ಎಸೆತಗಳಲ್ಲಿ ಕಾರ್ತಿಕ್ ಕಲೆಹಾಕಿದ್ದು ಕೇವಲ 128 ರನ್ಗಳು ಮಾತ್ರ.
Updated on: Feb 06, 2025 | 12:31 PM

ಈ ಬಾರಿಯ ಸೌತ್ ಆಫ್ರಿಕಾ ಟಿ20 ಲೀಗ್ನಲ್ಲಿ ಕಣಕ್ಕಿಳಿಯುವ ಮೂಲಕ ದಿನೇಶ್ ಕಾರ್ತಿಕ್ ಹೊಸ ಇತಿಹಾಸ ಬರೆದಿದ್ದಾರೆ. ಅದು ಕೂಡ SA20 ಲೀಗ್ ಆಡಿದ ಮೊದಲ ಭಾರತೀಯ ಎನಿಸಿಕೊಳ್ಳುವ ಮೂಲಕ. ಇದಾಗ್ಯೂ ದಿನೇಶ್ ಕಾರ್ತಿಕ್ ಕಡೆಯಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿಲ್ಲ. ಇದಕ್ಕೆ ಸಾಕ್ಷಿ ಈ ಅಂಕಿ ಅಂಶಗಳು.

ಪಾರ್ಲ್ ರಾಯಲ್ಸ್ ಪರ 10 ಪಂದ್ಯಗಳಲ್ಲಿ ವಿಕೆಟ್ ಕೀಪರ್ ಬ್ಯಾಟರ್ ಆಗಿ ಕಣಕ್ಕಿಳಿದಿದ್ದ ದಿನೇಶ್ ಕಾರ್ತಿಕ್ 7 ಇನಿಂಗ್ಸ್ಗಳಲ್ಲಿ ಬ್ಯಾಟ್ ಬೀಸಿದ್ದಾರೆ. ಈ ವೇಳೆ ಕೇವಲ ಒಂದು ಅರ್ಧಶತಕ ಬಾರಿಸಲಷ್ಟೇ ಶಕ್ತರಾಗಿದ್ದರು. ಇನ್ನುಳಿದ 6 ಇನಿಂಗ್ಸ್ಗಳಲ್ಲೂ ಅವರು ವಿಫಲರಾಗಿದ್ದಾರೆ.

7 ಇನಿಂಗ್ಸ್ಗಳಲ್ಲಿ ಕೇವಲ 123.07 ಸ್ಟ್ರೈಕ್ ರೇಟ್ನಲ್ಲಿ ಬ್ಯಾಟ್ ಬೀಸಿದ್ದ ಡಿಕೆ ಕೇವಲ 128 ರನ್ಗಳಿಸಿದ್ದಾರೆ. ಈ 128 ರನ್ಗಳಿಸಲು ಅವರು ತೆಗೆದುಕೊಂಡಿರುವುದು ಬರೋಬ್ಬರಿ 104 ಎಸೆತಗಳನ್ನು ಎಂಬುದು ಇಲ್ಲಿ ಉಲ್ಲೇಖಾರ್ಹ. ಅಂದರೆ ಸ್ಪೋಟಕ ಇನಿಂಗ್ಸ್ ಆಡುವಲ್ಲಿ ಡಿಕೆ ಸಂಪೂರ್ಣ ವಿಫಲರಾಗಿದ್ದಾರೆ.

ಒಟ್ಟಿನಲ್ಲಿ ಚೊಚ್ಚಲ ಸೌತ್ ಆಫ್ರಿಕಾ ಟಿ20 ಲೀಗ್ ಆಡಿರುವ ದಿನೇಶ್ ಕಾರ್ತಿಕ್ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ಸಂಪೂರ್ಣ ವಿಫಲರಾಗಿದ್ದು, ಹೀಗಾಗಿ ಮುಂಬರುವ ಲೀಗ್ಗಾಗಿ 39 ವರ್ಷದ ಡಿಕೆಯನ್ನು ಪಾರ್ಲ್ ರಾಯಲ್ಸ್ ಫ್ರಾಂಚೈಸಿ ತಂಡದಲ್ಲೇ ಉಳಿಸಿಕೊಳ್ಳುವುದು ಅನುಮಾನ ಎನ್ನಬಹುದು.

ಸದ್ಯ ಸೌತ್ ಆಫ್ರಿಕಾ ಟಿ20 ಲೀಗ್ನಲ್ಲಿ ತೊಡಗಿಸಿಕೊಂಡಿರುವ ದಿನೇಶ್ ಕಾರ್ತಿಕ್ ಮುಂಬರುವ ಐಪಿಎಲ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಬ್ಯಾಟಿಂಗ್ ಕೋಚ್ ಆಗಿ ಕಾರ್ಯ ನಿರ್ವಹಿಸಲಿದ್ದಾರೆ. ಹೀಗಾಗಿ ಶೀಘ್ರದಲ್ಲೇ ಅವರು ಆರ್ಸಿಬಿ ತಂಡದ ಶಿಬಿರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.



















