ದುಲೀಪ್ ಟ್ರೋಫಿ ಫೈನಲ್‌; ಸ್ಫೋಟಕ ಶತಕ ಬಾರಿಸಿದ ಇಶಾನ್ ಕಿಶನ್

Updated on: Sep 06, 2026 | 5:36 PM

ಇಶಾನ್ ಕಿಶನ್ ದುಲೀಪ್ ಟ್ರೋಫಿ ಫೈನಲ್‌ನಲ್ಲಿ ಭರ್ಜರಿ ಶತಕ ಬಾರಿಸಿ ಪೂರ್ವ ವಲಯಕ್ಕೆ ಬಲ ತುಂಬಿದ್ದಾರೆ. ಚೆನ್ನೈನಲ್ಲಿ ದಕ್ಷಿಣ ವಲಯದ ವಿರುದ್ಧ ಆಡುತ್ತಾ, ಅವರು 4000 ಪ್ರಥಮ ದರ್ಜೆ ರನ್​ಗಳನ್ನು ಪೂರೈಸಿದರು. ಕುಮಾರ್ ಕುಶಾಗ್ರ ಜೊತೆಗೂಡಿ ಪ್ರಮುಖ ಪಾಲುದಾರಿಕೆ ನಿರ್ಮಿಸಿದ ಇಶಾನ್, ನಾಯಕನಾಗಿ ಅಜೇಯ ದಾಖಲೆಯನ್ನು ಮುಂದುವರೆಸಿದ್ದಾರೆ. ಅವರ ಸ್ಫೋಟಕ ಬ್ಯಾಟಿಂಗ್ ತಂಡಕ್ಕೆ ಉತ್ತಮ ಆರಂಭ ನೀಡಿದೆ.

1 / 5
ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ದುಲೀಪ್ ಟ್ರೋಫಿಯ ಫೈನಲ್‌ನಲ್ಲಿ ಪೂರ್ವ ವಲಯ ಮತ್ತು ದಕ್ಷಿಣ ವಲಯ ತಂಡಗಳು ಮುಖಾಮುಖಿಯಾಗಿವೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡುತ್ತಿರುವ ಪೂರ್ವ ತಂಡದ ಪರ ಮೊದಲ ದಿನದಂದು ಬ್ಯಾಟಿಂಗ್​ಗೆ ಇಳಿದಿರುವ ನಾಯಕ ಇಶಾನ್ ಕಿಶನ್ ಸ್ಫೋಟಕ ಶತಕ ಬಾರಿಸಿದ್ದಾರೆ(PC-PTI).

ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ದುಲೀಪ್ ಟ್ರೋಫಿಯ ಫೈನಲ್‌ನಲ್ಲಿ ಪೂರ್ವ ವಲಯ ಮತ್ತು ದಕ್ಷಿಣ ವಲಯ ತಂಡಗಳು ಮುಖಾಮುಖಿಯಾಗಿವೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡುತ್ತಿರುವ ಪೂರ್ವ ತಂಡದ ಪರ ಮೊದಲ ದಿನದಂದು ಬ್ಯಾಟಿಂಗ್​ಗೆ ಇಳಿದಿರುವ ನಾಯಕ ಇಶಾನ್ ಕಿಶನ್ ಸ್ಫೋಟಕ ಶತಕ ಬಾರಿಸಿದ್ದಾರೆ(PC-PTI).

2 / 5

ಈ ಪಂದ್ಯದಲ್ಲಿ 5ನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಬಂದ ಇಶಾನ್ ಕಿಶನ್ 124 ಎಸೆತಗಳಲ್ಲಿ ತಮ್ಮ ಶತಕವನ್ನು ಪೂರೈಸಿದರು. ಈ ಶತಕದೊಂದಿಗೆ ಕಿಶನ್ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 4,000 ರನ್‌ಗಳನ್ನು ಸಹ ಪೂರ್ಣಗೊಳಿಸಿದರು. ಮಾತ್ರವಲ್ಲದೆ ಕುಮಾರ್ ಕುಶಾಗ್ರ ಜೊತೆಗೂಡಿ ಐದನೇ ವಿಕೆಟ್‌ಗೆ 130 ಕ್ಕೂ ಹೆಚ್ಚು ರನ್‌ಗಳ ಪಾಲುದಾರಿಕೆಯನ್ನು ನಿರ್ಮಿಸಿದ್ದಾರೆ(PC-PTI).

3 / 5

ಇದು ಇಶಾನ್ ಕಿಶನ್​ಗೆ 10 ನೇ ಪ್ರಥಮ ದರ್ಜೆ ಶತಕ ಮತ್ತು ದುಲೀಪ್ ಟ್ರೋಫಿಯಲ್ಲಿ ಅವರ ಎರಡನೇ ಶತಕವಾಗಿದೆ. ಇದಕ್ಕೂ ಮೊದಲು ಅಂದರೆ ಎರಡು ವರ್ಷಗಳ ಹಿಂದೆ ಅನಂತಪುರದಲ್ಲಿ ಭಾರತ ಸಿ ಪರ ಇಶಾನ್ ಕಿಶನ್ 111 ರನ್​ಗಳ ಇನ್ನಿಂಗ್ಸ್ ಆಡಿದ್ದರು. ಉಳಿದ ಎಲ್ಲಾ 8 ಶತಕಗಳನ್ನು ರಣಜಿ ಟ್ರೋಫಿಯಲ್ಲಿ ಜಾರ್ಖಂಡ್ ಪರ ಸಿಡಿಸಿದ್ದರು, 2016 ರಲ್ಲಿ ದೆಹಲಿ ವಿರುದ್ಧ ಕಿಶನ್ ಗರಿಷ್ಠ 273 ರನ್‌ಗಳ ಇನ್ನಿಂಗ್ಸ್ ಆಡಿದ್ದರು(PC-PTI).

4 / 5

ಇನ್ನು ಮೊದಲ ದಿನದಾಟದಂತ್ಯಕ್ಕೆ ಪೂರ್ವ ವಲಯ ತಂಡದ ಪರ ಇಶಾನ್ ಕಿಶನ್ 111 ರನ್‌ಗಳೊಂದಿಗೆ ಬ್ಯಾಟಿಂಗ್ ಮಾಡುತ್ತಿದ್ದರೆ, ಕುಮಾರ್ ಕುಶಾಗ್ರ 63 ರನ್‌ಗಳೊಂದಿಗೆ ಅಜೇಯರಾಗಿ ಉಳಿದಿದ್ದಾರೆ. ಈಗ ಎರಡನೇ ದಿನದಂದು, ಈ ಇಬ್ಬರೂ ಬ್ಯಾಟ್ಸ್‌ಮನ್‌ಗಳು ಇಲ್ಲಿಂದ ತಂಡವನ್ನು ದೊಡ್ಡ ಸ್ಕೋರ್‌ಗೆ ಕೊಂಡೊಯ್ಯಲು ಪ್ರಯತ್ನಿಸಲಿದ್ದಾರೆ(PC-PTI).

5 / 5

ಫೈನಲ್ ಪಂದ್ಯದಲ್ಲಿ ಪೂರ್ವ ವಲಯ ತಂಡ ಉತ್ತಮ ಆರಂಭ ಪಡೆದುಕೊಂಡಿರುವುದು ಕಿಶನ್ ಅವರ ಅಜೇಯ ನಾಯಕತ್ವವದ ಓಟವನ್ನು ಮುಂದುವರೆಸುವ ಸಾಧ್ಯತೆಗಳನ್ನು ಹೆಚ್ಚಿಸಿದೆ. ವಾಸ್ತವವಾಗಿ ನಾಯಕನಾಗಿ, ಇಶಾನ್ ಕಿಶನ್ ಇದುವರೆಗೆ ಒಂದೇ ಒಂದು ಪ್ರಥಮ ದರ್ಜೆ ಪಂದ್ಯವನ್ನು ಸೋತಿಲ್ಲ. ಅವರು 15 ಪ್ರಥಮ ದರ್ಜೆ ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ್ದಾರೆ. ಇದರಲ್ಲಿ ಎಂಟು ಪಂದ್ಯಗಳಲ್ಲಿ ಗೆದ್ದಿದ್ದರೆ, ಏಳು ಪಂದ್ಯಗಳು ಡ್ರಾದೊಂದಿಗೆ ಅಂತ್ಯವಾಗಿವೆ(PC-PTI).

Loading...
Unable to load recommendations.
Follow Us