- Kannada News Photo gallery Cricket photos ENG vs NZ james Anderson and Stuart broad surpass Shane Warne and Glenn McGrath as most test wicket in pair
ENG vs NZ: ಜೊತೆಯಾಗಿ 1000ಕ್ಕೂ ಹೆಚ್ಚು ವಿಕೆಟ್; ವಿಶ್ವ ದಾಖಲೆ ಮುರಿದ ಇಂಗ್ಲೆಂಡ್ ಜೋಡಿ
ENG vs NZ: ಈ ಪಂದ್ಯಕ್ಕೂ ಮುನ್ನ ಇವರಿಬ್ಬರು ಒಟ್ಟಿಗೆ 997 ವಿಕೆಟ್ ಬೇಟೆಯಾಡಿದ್ದರು. ಹೀಗಾಗಿ ಇವರಿಬ್ಬರು ಕಿವೀಸ್ ವಿರುದ್ಧ ವಾರ್ನ್-ಮೆಕ್‌ಗ್ರಾತ್ ಜೋಡಿಯನ್ನು ಹಿಂದಿಕ್ಕುತ್ತಾರೆ ಎಂದು ಎಲ್ಲರೂ ನಿರೀಕ್ಷಿಸಿದ್ದರು.
Updated on: Feb 18, 2023 | 5:55 PM

ದೆಹಲಿಯಲ್ಲಿ ಆಸ್ಟ್ರೇಲಿಯಾ ಮತ್ತು ಭಾರತ ನಡುವೆ ಎರಡನೇ ಟೆಸ್ಟ್ ಪಂದ್ಯ ನಡೆಯುತ್ತಿದ್ದು, ಇಡೀ ವಿಶ್ವದ ಗಮನ ಈ ಪಂದ್ಯದ ಮೇಲಿದೆ. ಹಾಗೆಯೇ ಮೌಂಟ್ ಮೌಂಗನುಯಿಯಲ್ಲಿ ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ನಡುವೆ ಟೆಸ್ಟ್ ಪಂದ್ಯವೂ ನಡೆಯುತ್ತಿದ್ದು, ಈ ಪಂದ್ಯದಲ್ಲಿ ಇಂಗ್ಲೆಂಡ್ ಜೋಡಿ ವಿಶ್ವ ದಾಖಲೆಯೊಂದನ್ನು ಪುಡಿಗಟ್ಟಿದೆ.

ಇಂಗ್ಲೆಂಡ್ ಟೆಸ್ಟ್‌ನ ಇಬ್ಬರು ಯಶಸ್ವಿ ಬೌಲರ್‌ಗಳಾದ ಜೇಮ್ಸ್ ಆಂಡರ್ಸನ್ ಮತ್ತು ಸ್ಟುವರ್ಟ್ ಬ್ರಾಡ್ ನ್ಯೂಜಿಲೆಂಡ್ ವಿರುದ್ಧ ಇತಿಹಾಸ ಸೃಷ್ಟಿಸಿದೆ. ಈ ಜೋಡಿ ಟೆಸ್ಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಜೋಡಿ ಎನಿಸಿಕೊಂಡಿದೆ. ಇವರಿಬ್ಬರೂ ಸೇರಿ ಟೆಸ್ಟ್‌ನಲ್ಲಿ 1000ಕ್ಕೂ ಹೆಚ್ಚು ವಿಕೆಟ್ ಪಡೆದಿದ್ದಾರೆ.

ಇವರಿಬ್ಬರಿಗೂ ಮೊದಲು, ಟೆಸ್ಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ದಾಖಲೆಯನ್ನು ಆಸ್ಟ್ರೇಲಿಯಾದ ಶ್ರೇಷ್ಠ ಲೆಗ್ ಸ್ಪಿನ್ನರ್ ಶೇನ್ ವಾರ್ನ್ ಮತ್ತು ಗ್ಲೆನ್ ಮೆಕ್‌ಗ್ರಾತ್ ಜೋಡಿ ಮಾಡಿತ್ತು. ಇವರಿಬ್ಬರು ಸೇರಿ ಟೆಸ್ಟ್ ಪಂದ್ಯಗಳಲ್ಲಿ 1001 ವಿಕೆಟ್ ಕಬಳಿಸಿತ್ತು. ಇದೀಗ ಈ ಜೋಡಿಯನ್ನು ಬ್ರಾಡ್ ಮತ್ತು ಆಂಡರ್ಸನ್ ಜೋಡಿ ಹಿಂದಿಕ್ಕಿದೆ.

ನ್ಯೂಜಿಲೆಂಡ್‌ನ ಆರಂಭಿಕ ಆಟಗಾರ ಡೆವೊನ್ ಕಾನ್ವೇ ಅವರನ್ನು ವಜಾ ಮಾಡುವ ಮೂಲಕ ಬ್ರಾಡ್ ಈ ದಾಖಲೆಯನ್ನು ಮುರಿದರು. ಇವರಿಬ್ಬರೂ 133 ಟೆಸ್ಟ್ ಪಂದ್ಯಗಳಲ್ಲಿ ಅತಿ ಹೆಚ್ಚು ವಿಕೆಟ್ ಪಡೆದಿದ್ದು, ಈ ಜೋಡಿ ಕೇನ್ ವಿಲಿಯಮ್ಸನ್, ಟಾಮ್ ಲ್ಯಾಥಮ್, ಟಾಮ್ ಬ್ಲಂಡಲ್ ಅವರ ವಿಕೆಟ್ ಪಡೆಯುವ ಮೂಲಕ ಜೊತೆಯಾಟಗಿ 1005 ವಿಕೆಟ್ ಉರುಳಿಸಿದ ಸಾಧನೆ ಮಾಡಿದ್ದಾರೆ.

ಈ ಪಂದ್ಯಕ್ಕೂ ಮುನ್ನ ಇವರಿಬ್ಬರು ಒಟ್ಟಿಗೆ 997 ವಿಕೆಟ್ ಬೇಟೆಯಾಡಿದ್ದರು. ಹೀಗಾಗಿ ಇವರಿಬ್ಬರು ಕಿವೀಸ್ ವಿರುದ್ಧ ವಾರ್ನ್-ಮೆಕ್‌ಗ್ರಾತ್ ಜೋಡಿಯನ್ನು ಹಿಂದಿಕ್ಕುತ್ತಾರೆ ಎಂದು ಎಲ್ಲರೂ ನಿರೀಕ್ಷಿಸಿದ್ದರು.




