ENG vs SA: 36 ರನ್‌ಗಳಿಗೆ 6 ವಿಕೆಟ್ ಪತನ; ಇಂಗ್ಲೆಂಡ್ ಮಾರಕ ಬೌಲಿಂಗ್, 118 ರನ್‌ಗಳಿಗೆ ಆಫ್ರಿಕಾ ಆಲೌಟ್
ENG vs SA: ಇಂಗ್ಲೆಂಡ್‌ನ ರಾಬಿನ್ಸನ್ 14 ಓವರ್‌ಗಳಲ್ಲಿ 49 ರನ್ ನೀಡಿ, ಅಗ್ರ ಮತ್ತು ಮಧ್ಯಮ ಕ್ರಮಾಂಕದ 5 ಬ್ಯಾಟ್ಸ್‌ಮನ್‌ಗಳನ್ನು ಬಲಿ ಪಡೆದಿದ್ದರು.
Updated on:Sep 10, 2022 | 11:15 PM

ಮೊದಲ ದಿನ ಮಳೆ ಮತ್ತು ಬ್ರಿಟನ್ ರಾಣಿಯ ಸಾವಿನಿಂದ ಎರಡನೇ ದಿನ ಆಟ ರದ್ದುಗೊಂಡ ನಂತರ ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮೂರನೇ ಮತ್ತು ಅಂತಿಮ ಟೆಸ್ಟ್ ಪಂದ್ಯ ಆರಂಭವಾಯಿತು. ಮೂರು ದಿನ ಮಾತ್ರ ಪಂದ್ಯ ನಡೆಯಬೇಕಿದ್ದು, ಆರಂಭವಾದ ರೀತಿ ನೋಡಿದರೆ ಈ ಮೂರೇ ದಿನಗಳಲ್ಲಿ ಫಲಿತಾಂಶ ಹೊರಬೀಳಲಿದೆ ಎಂಬುದು ಸ್ಪಷ್ಟವಾಗಿದೆ. ಕೇವಲ ಒಂದೂವರೆ ಸೆಷನ್ನಲ್ಲಿ ದಕ್ಷಿಣ ಆಫ್ರಿಕಾದ ಇನ್ನಿಂಗ್ಸ್ ಮುಗಿದಿದೆ.

ಲಂಡನ್‌ನ ಓವಲ್‌ನಲ್ಲಿ ನಡೆದ ಈ ಕೊನೆಯ ಪಂದ್ಯದಲ್ಲಿ ಇಂಗ್ಲೆಂಡ್, ದಕ್ಷಿಣ ಆಫ್ರಿಕಾವನ್ನು ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 118 ರನ್‌ಗಳಿಗೆ ಕೊನೆಗೊಂಡಿತು. ದಕ್ಷಿಣ ಆಫ್ರಿಕಾ ಪರ, ವೇಗದ ಬೌಲರ್ ಒಲಿ ರಾಬಿನ್ಸನ್ ಏಕಾಂಗಿಯಾಗಿ ಅರ್ಧ ತಂಡಕ್ಕೆ ಪೆವಿಲಿಯನ್ ಹಾದಿ ತೋರಿಸಿದರು.

ರಾಬಿನ್ಸನ್ ನಾಯಕ ಡೀನ್ ಎಲ್ಗರ್ ಅವರನ್ನು ಬೌಲ್ಡ್ ಮಾಡುವ ಮೂಲಕ ದಕ್ಷಿಣ ಆಫ್ರಿಕಾದ ಆರಂಭಕ್ಕೆ ಕೊಡಲಿ ಪೆಟ್ಟು ನೀಡಿದರು. ನಂತರ 12ನೇ ಓವರ್ ಆಗುವಷ್ಟರಲ್ಲಿ ಕೇವಲ 36 ರನ್ ಗಳಿಗೆ ದಕ್ಷಿಣ ಆಫ್ರಿಕಾದ 6 ಬ್ಯಾಟ್ಸ್ ಮನ್ಗಳ ಕೆಲಸ ಮುಗಿದಿತ್ತು.

ಇಂಗ್ಲೆಂಡ್‌ನ ರಾಬಿನ್ಸನ್ 14 ಓವರ್‌ಗಳಲ್ಲಿ 49 ರನ್ ನೀಡಿ, ಅಗ್ರ ಮತ್ತು ಮಧ್ಯಮ ಕ್ರಮಾಂಕದ 5 ಬ್ಯಾಟ್ಸ್‌ಮನ್‌ಗಳನ್ನು ಬಲಿ ಪಡೆದಿದ್ದರು. ರಾಬಿನ್ಸನ್ 11 ಟೆಸ್ಟ್ ಪಂದ್ಯಗಳಲ್ಲಿ ಮೂರನೇ ಬಾರಿಗೆ ಇನ್ನಿಂಗ್ಸ್‌ನಲ್ಲಿ 5 ವಿಕೆಟ್ ಪಡೆದರು. ಇವರಲ್ಲದೆ ಅನುಭವಿ ವೇಗಿ ಸ್ಟುವರ್ಟ್ ಬ್ರಾಡ್ ಕೂಡ 4 ವಿಕೆಟ್ ಪಡೆದರು.

ದಕ್ಷಿಣ ಆಫ್ರಿಕಾದ ಆರಂಭಿಕ ಬ್ಯಾಟ್ಸ್‌ಮನ್‌ಗಳು ರನ್ಗಳಿಸಲು ಹೆಣಗಾಡಿದರು, ಎಂಟನೇ ಶ್ರೇಯಾಂಕದ ವೇಗದ ಬೌಲರ್-ಆಲ್-ರೌಂಡರ್ ಮಾರ್ಕೊ ಯಾನ್ಸನ್ ಅತ್ಯಧಿಕ 30 ರನ್ ಗಳಿಸಿದರು. ಯಾನ್ಸನ್ ಏಳನೇ ವಿಕೆಟ್‌ಗೆ ಖಯಾ ಜೊಂಡೋ (23) ಅವರೊಂದಿಗೆ 36 ರನ್‌ಗಳ ಜೊತೆಯಾಟವನ್ನು ಹಂಚಿಕೊಂಡರು.
Published On - 11:15 pm, Sat, 10 September 22




