ಟೆಸ್ಟ್ ಕ್ರಿಕೆಟ್​ನಲ್ಲಿ 110 ವರ್ಷಗಳ ಹಳೆಯ ದಾಖಲೆ ಮುರಿದ 40 ವರ್ಷದ ವೇಗದ ಬೌಲರ್..!

ಭಾರತದ ಶ್ರೇಷ್ಠ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಮತ್ತು ಶ್ರೀಲಂಕಾದ ರಂಗನಾ ಹೆರಾತ್ 40 ವರ್ಷಕ್ಕೂ ಹೆಚ್ಚು ವಯಸ್ಸಿನಲ್ಲಿ ಟೆಸ್ಟ್ ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ. ಆದರೆ ಇವರಿಬ್ಬರೂ ದಿಗ್ಗಜ ಸ್ಪಿನ್ ಬೌಲರ್​ಗಳು ಎಂಬುದನ್ನು ಇಲ್ಲಿ ಗಮನಿಸಬೇಕು.

Aug 19, 2022 | 5:32 PM
TV9kannada Web Team

| Edited By: pruthvi Shankar

Aug 19, 2022 | 5:32 PM

ಜೇಮ್ಸ್ ಆಂಡರ್ಸನ್: ಇಂಗ್ಲೆಂಡ್ ವೇಗಿ ಜೇಮ್ಸ್ ಆಂಡರ್ಸನ್ ಅವರಿಗೆ 40 ವರ್ಷ. ಆದರೆ, ಅವರ ಫಿಟ್ನೆಸ್ ಮತ್ತು ಚಾಣಾಕ್ಷತೆ ಯಾವ ಯುವ ಆಟಗಾರನಿಗೂ ಕಡಿಮೆ ಇಲ್ಲ. ಸದ್ಯ ಇಂಗ್ಲೆಂಡ್‌ನ ಈ ದಿಗ್ಗಜ ಆಟಗಾರ ದಕ್ಷಿಣ ಆಫ್ರಿಕಾ ವಿರುದ್ಧ ಸರಣಿ ಆಡುತ್ತಿದ್ದಾರೆ. ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ವಿಕೆಟ್ ಪಡೆದ ಆಂಡರ್ಸನ್ 110 ವರ್ಷಗಳ ಹಳೆಯ ದಾಖಲೆ ಮುರಿದು ಇತಿಹಾಸ ಸೃಷ್ಟಿಸಿದ್ದಾರೆ. ಉಭಯ ತಂಡಗಳ ನಡುವೆ ಆಗಸ್ಟ್ 17ರಿಂದ ಲಾರ್ಡ್ಸ್​ನಲ್ಲಿ ಮೊದಲ ಪಂದ್ಯ ಆರಂಭವಾಗಿದ್ದು, ಇದರಲ್ಲಿ ಆ್ಯಂಡರ್ಸನ್ ಪಂದ್ಯದ ಎರಡನೇ ದಿನ ಒಂದು ವಿಕೆಟ್ ಪಡೆದು ದಾಖಲೆ ನಿರ್ಮಿಸಿದರು.

1 / 6
ದಕ್ಷಿಣ ಆಫ್ರಿಕಾ ಆರಂಭಿಕ, ನಾಯಕ ಡೀನ್ ಎಲ್ಗರ್ ಆ್ಯಂಡರ್ಸನ್ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದರು. 40ನೇ ವಯಸ್ಸಿನಲ್ಲಿ ಟೆಸ್ಟ್ ವಿಕೆಟ್ ಪಡೆದ ವಿಶ್ವದ ಮೊದಲ ವೇಗದ ಬೌಲರ್ ಎಂಬ ಹೆಗ್ಗಳಿಕೆಗೆ ಆ್ಯಂಡರ್ಸನ್ ಪಾತ್ರರಾದರು. ಇದುವರೆಗೆ ಕ್ರಿಕೆಟ್ ಜಗತ್ತಿನ ಯಾವುದೇ ಬೌಲರ್ 40ರ ಹರೆಯದಲ್ಲಿ ವಿಕೆಟ್ ಪಡೆಯಲು ಸಾಧ್ಯವಾಗಿಲ್ಲ.

2 / 6
ಇದಕ್ಕೂ ಮುನ್ನ ಈ ದಾಖಲೆ ಆಸ್ಟ್ರೇಲಿಯಾದ ಮಾಜಿ ವೇಗದ ಬೌಲರ್ ಸಿಡ್ನಿ ಬರ್ನ್ಸ್ ಹೆಸರಿನಲ್ಲಿತ್ತು. ಅವರು 39 ವರ್ಷ ಮತ್ತು 52 ದಿನಗಳ ವಯಸ್ಸಿನಲ್ಲಿ ವಿಕೆಟ್ ಪಡೆದಿದ್ದಾರೆ. ಬಾರ್ನ್ಸ್ ಈ ಸಾಧನೆಯನ್ನು 110 ವರ್ಷಗಳ ಹಿಂದೆ 1912 ರಲ್ಲಿ ಸಾಧಿಸಿದರು. ಪ್ರಸ್ತುತ, ಜೇಮ್ಸ್ ಆಂಡರ್ಸನ್​ಗೆ 40 ವರ್ಷ ಮತ್ತು 19 ದಿನಗಳು. ಅವರು ಇತ್ತೀಚೆಗೆ ಜುಲೈ 30 ರಂದು 40 ನೇ ವರ್ಷಕ್ಕೆ ಕಾಲಿಟ್ಟರು.

3 / 6
ಭಾರತದ ಶ್ರೇಷ್ಠ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಮತ್ತು ಶ್ರೀಲಂಕಾದ ರಂಗನಾ ಹೆರಾತ್ 40 ವರ್ಷಕ್ಕೂ ಹೆಚ್ಚು ವಯಸ್ಸಿನಲ್ಲಿ ಟೆಸ್ಟ್ ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ. ಆದರೆ ಇವರಿಬ್ಬರೂ ದಿಗ್ಗಜ ಸ್ಪಿನ್ ಬೌಲರ್​ಗಳು ಎಂಬುದನ್ನು ಇಲ್ಲಿ ಗಮನಿಸಬೇಕು. ಏತನ್ಮಧ್ಯೆ, ಜೇಮ್ಸ್ ಆಂಡರ್ಸನ್ 40 ನೇ ವಯಸ್ಸಿನಲ್ಲಿ ವಿಕೆಟ್ ಪಡೆದ ಮೊದಲ ವೇಗದ ಬೌಲರ್ ಎನಿಸಿಕೊಂಡರು.

4 / 6
ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಎರಡನೇ ದಿನ ಜಿಮ್ಮಿ 18 ಓವರ್ ಗಳಲ್ಲಿ 51 ರನ್ ನೀಡಿ 1 ವಿಕೆಟ್ ಪಡೆದರು. 47 ರನ್​ಗಳ ವೈಯಕ್ತಿಕ ಸ್ಕೋರ್​ನಲ್ಲಿ ನಾಯಕ ಡೀನ್ ಎಲ್ಗರ್ ಅವರನ್ನು ಪೆವಿಲಿಯನ್​ಗೆ ಕಳುಹಿಸಿದರು. ಇದರೊಂದಿಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 658 ವಿಕೆಟ್‌ಗಳನ್ನು ಕಬಳಿಸಿದ ವಿಶ್ವದ ಅತ್ಯಂತ ಯಶಸ್ವಿ ವೇಗದ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

5 / 6
ಲಾರ್ಡ್ಸ್ ಟೆಸ್ಟ್​ನ ಎರಡನೇ ದಿನದಾಟದ ಅಂತ್ಯಕ್ಕೆ ದಕ್ಷಿಣ ಆಫ್ರಿಕಾ ಮೊದಲ ಇನಿಂಗ್ಸ್​ನಲ್ಲಿ 7 ವಿಕೆಟ್ ನಷ್ಟಕ್ಕೆ 289 ರನ್ ಗಳಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ತಂಡ ಮೊದಲ ಇನ್ನಿಂಗ್ಸ್‌ನಲ್ಲಿ 165 ರನ್‌ಗಳಿಗೆ ಆಲೌಟ್ ಆಗಿತ್ತು.

6 / 6

Follow us on

Most Read Stories

Click on your DTH Provider to Add TV9 Kannada