ಆಸ್ಟ್ರೇಲಿಯಾ ತಂಡದಿಂದ ಸ್ಟಾರ್ ವೇಗಿ ಔಟ್: ಸ್ಫೋಟಕ ದಾಂಡಿಗ ಎಂಟ್ರಿ..!

Updated on: Nov 02, 2025 | 7:54 AM

India vs Australia: ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಐದು ಪಂದ್ಯಗಳ ಟಿ20 ಸರಣಿಯ ಮೊದಲೆರಡು ಮ್ಯಾಚ್​​​ಗಳು ಮುಗಿದಿವೆ. ಕ್ಯಾನ್​​ಬೆರಾದಲ್ಲಿ ನಡೆದ ಮೊದಲ ಪಂದ್ಯವು ಮಳೆಗೆ ಆಹುತಿಯಾದರೆ, ಮೆಲ್ಬೋರ್ನ್​​ನಲ್ಲಿ ನಡೆದ ದ್ವಿತೀಯ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ 4 ವಿಕೆಟ್​​ಗಳ ಜಯ ಸಾಧಿಸಿದೆ. ಇದೀಗ ಮೂರನೇ ಪಂದ್ಯದ ಮೂಲಕ ಕಂಬ್ಯಾಕ್ ಮಾಡುವ ವಿಶ್ವಾಸದಲ್ಲಿದೆ ಟೀಮ್ ಇಂಡಿಯಾ.

1 / 5
ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಮೂರನೇ ಟಿ20 ಪಂದ್ಯ ಇಂದು (ನ.2) ನಡೆಯಲಿದೆ. ಹೋಬಾರ್ಟ್​ನ ಬೆಲ್ಲೆರಿವ್ ಓವಲ್ ಮೈದಾನದಲ್ಲಿ ನಡೆಯಲಿರುವ ಈ ಪಂದ್ಯಕ್ಕಾಗಿ ಆಸ್ಟ್ರೇಲಿಯಾ ತಂಡವು ತನ್ನ ಪ್ಲೇಯಿಂಗ್ ಇಲೆವೆನ್​​ನಲ್ಲಿ ಮಹತ್ವದ ಬದಲಾವಣೆ ಮಾಡಿಕೊಳ್ಳಲಿದೆ.

2 / 5
ಏಕೆಂದರೆ ಕಳೆದ ಎರಡು ಪಂದ್ಯಗಳಲ್ಲಿ ಆಸ್ಟ್ರೇಲಿಯಾ ಪರ ಕಣಕ್ಕಿಳಿದಿದ್ದ ಜೋಶ್ ಹೇಝಲ್​​ವುಡ್ ಉಳಿದ ಮೂರು ಮ್ಯಾಚ್​​​ಗಳಿಂದ ಹೊರಗುಳಿದಿದ್ದಾರೆ. ಮುಂಬರುವ ಆ್ಯಶಸ್ ಟೆಸ್ಟ್ ಸರಣಿಗಾಗಿ ಹೇಝಲ್​​ವುಡ್​​ಗೆ ವಿಶ್ರಾಂತಿ ನೀಡಲಾಗಿದ್ದು, ಹೀಗಾಗಿ ಇಂದಿನ ಪಂದ್ಯದಲ್ಲಿ ಬಲಗೈ ವೇಗಿ ಕಣಕ್ಕಿಳಿಯುವುದಿಲ್ಲ.

3 / 5
ಇತ್ತ ಜೋಶ್ ಹೇಝಲ್​​​ವುಡ್ ಹೊರಗುಳಿದರೆ, ಅತ್ತ ಗ್ಲೆನ್ ಮ್ಯಾಕ್ಸ್​​ವೆಲ್ ತಂಡಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಫಿಟ್​​​ನೆಸ್ ಸಮಸ್ಯೆಯ ಕಾರಣ ಮೊದಲೆರಡು ಪಂದ್ಯಗಳಿಂದ ಹೊರಗುಳಿದಿದ್ದ ಮ್ಯಾಕ್ಸ್​​ವೆಲ್ ಇದೀಗ ಆಸ್ಟ್ರೇಲಿಯಾ ತಂಡವನ್ನು ಕೂಡಿಕೊಂಡಿದ್ದು, ಹೀಗಾಗಿ ಮೂರನೇ ಪಂದ್ಯದಲ್ಲಿ ಕಣಕ್ಕಿಳಿಯುವುದು ಬಹುತೇಕ ಖಚಿತ.

4 / 5
ಇನ್ನು ಜೋಶ್ ಹೇಝಲ್​​ವುಡ್ ಹೊರಗುಳಿದಿರುವ ಕಾರಣ ಅವರ ಬದಲಿಗೆ ಘಾತಕ ವೇಗಿ ಶಾನ್ ಅಬಾಟ್ ಕಣಕ್ಕಿಳಿಯುವ ಸಾಧ್ಯತೆಯಿದೆ. ಹಾಗೆಯೇ ಮ್ಯಾಕ್ಸ್​ವೆಲ್​ಗಾಗಿ ಯುವ ಆಲ್​ರೌಂಡರ್ ಮಿಚೆಲ್ ಓವನ್ ಪ್ಲೇಯಿಂಗ್ ಇಲೆವೆನ್​​ನಿಂದ ಹೊರಗುಳಿಯಬಹುದು. ಈ ಎರಡು ಬದಲಾವಣೆಯೊಂದಿಗೆ ಇಂದು ಆಸ್ಟ್ರೇಲಿಯಾ ತಂಡ ಟೀಮ್ ಇಂಡಿಯಾವನ್ನು ಎದುರಿಸಲಿದೆ.

5 / 5
ಆಸ್ಟ್ರೇಲಿಯಾ ಟಿ20 ತಂಡ: ಮಿಚೆಲ್ ಮಾರ್ಷ್ (ನಾಯಕ), ಶಾನ್ ಅಬಾಟ್, ಕ್ಸೇವಿಯರ್ ಬಾರ್ಟ್ಲೆಟ್, ಟಿಮ್ ಡೇವಿಡ್, ನಾಥನ್ ಎಲ್ಲಿಸ್, , ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಸ್, ಮ್ಯಾಥ್ಯೂ ಕುಹ್ನೆಮನ್, ಗ್ಲೆನ್ ಮ್ಯಾಕ್ಸ್‌ವೆಲ್, ಮಿಚೆಲ್ ಓವನ್, ಜೋಶ್ ಫಿಲಿಪ್, ಮ್ಯಾಥ್ಯೂ ಶಾರ್ಟ್, ಮಾರ್ಕಸ್ ಸ್ಟೊಯಿನಿಸ್, ತನ್ವೀರ್ ಸಂಘ, ಆ್ಯಡಂ ಝಂಪಾ, ಮಹ್ಲಿ ಬಿಯರ್ಡ್‌ಮನ್, ಬೆನ್ ದ್ವಾರ್ಶುಯಿಸ್ (ಕೊನೆಯ ಎರಡು ಪಂದ್ಯಗಳಿಗೆ).