- Kannada News Photo gallery Cricket photos Hardik Pandya Achieves 200 International Wickets: New Record vs Pakistan
IND vs PAK: ಪಾಕ್ ವಿರುದ್ಧದ ಪಂದ್ಯದಲ್ಲಿ ವಿಶೇಷ ದ್ವಿಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
Hardik Pandya Achieves 200 International Wickets: ಪಾಕಿಸ್ತಾನದ ವಿರುದ್ಧದ ಚಾಂಪಿಯನ್ಸ್ ಟ್ರೋಫಿ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 200 ವಿಕೆಟ್‌ಗಳನ್ನು ಪೂರ್ಣಗೊಳಿಸಿದ್ದಾರೆ. ಇದರೊಂದಿಗೆ ಐಸಿಸಿ ಸೀಮಿತ ಓವರ್‌ಗಳ ಟೂರ್ನಮೆಂಟ್‌ನಲ್ಲಿ ಒಂದು ತಂಡದ ವಿರುದ್ಧ ಅತಿ ಹೆಚ್ಚು ವಿಕೆಟ್ ಪಡೆದ ಭಾರತೀಯ ಬೌಲರ್ ಎಂಬ ಹೆಗ್ಗಳಿಕೆಗೂ ಅವರು ಪಾತ್ರರಾಗಿದ್ದಾರೆ. ಪಾಕಿಸ್ತಾನದ ವಿರುದ್ಧ 14 ವಿಕೆಟ್‌ಗಳನ್ನು ಪಡೆದು ಅವರು ಮತ್ತೊಂದು ದಾಖಲೆ ಬರೆದಿದ್ದಾರೆ. ಪಾಂಡ್ಯ ಅವರು ಎಲ್ಲಾ ಸ್ವರೂಪಗಳಲ್ಲಿ 4000ಕ್ಕೂ ಹೆಚ್ಚು ರನ್‌ಗಳು ಮತ್ತು 200 ವಿಕೆಟ್‌ಗಳನ್ನು ಪಡೆದಿದ್ದಾರೆ.
Updated on: Feb 23, 2025 | 7:57 PM

ಪಾಕಿಸ್ತಾನ ವಿರುದ್ಧದ ಚಾಂಪಿಯನ್ಸ್ ಟ್ರೋಫಿ ಪಂದ್ಯದಲ್ಲಿ ಟೀಂ ಇಂಡಿಯಾದ ಸ್ಟಾರ್ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ದೊಡ್ಡ ದಾಖಲೆ ನಿರ್ಮಿಸಿದ್ದಾರೆ. ಈ ಪಂದ್ಯದಲ್ಲಿ 8 ಓವರ್ಗಳನ್ನು ಬೌಲ್ ಮಾಡಿದ ಹಾರ್ದಕ್ 31 ರನ್ ನೀಡಿ 2 ವಿಕೆಟ್ ಪಡೆದರು. ಈ ಮೂಲಕ ಹಾರ್ದಿಕ್ ಪಾಂಡ್ಯ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 200 ವಿಕೆಟ್‌ಗಳನ್ನು ಪೂರ್ಣಗೊಳಿಸಿದ್ದಾರೆ.

ಇದರೊಂದಿಗೆ ಐಸಿಸಿ ಸೀಮಿತ ಓವರ್‌ಗಳ ಟೂರ್ನಮೆಂಟ್‌ನಲ್ಲಿ ಯಾವುದೇ ತಂಡದ ವಿರುದ್ಧ ಅತಿ ಹೆಚ್ಚು ವಿಕೆಟ್ ಪಡೆದ ಭಾರತೀಯ ಬೌಲರ್ ಎಂಬ ಹೆಗ್ಗಳಿಕೆಗೂ ಪಾಂಡ್ಯ ಪಾತ್ರರಾಗಿದ್ದಾರೆ. ಈ ವಿಷಯದಲ್ಲಿ ಅವರು ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಶಮಿ ಅವರಂತಹ ಶ್ರೇಷ್ಠ ಭಾರತೀಯ ಬೌಲರ್‌ಗಳನ್ನು ಹಿಂದಿಕ್ಕಿದ್ದಾರೆ.

ಹಾರ್ದಿಕ್ ಪಾಂಡ್ಯ ಅಂತರರಾಷ್ಟ್ರೀಯ ಕ್ರಿಕೆಟ್‌ನ ಎಲ್ಲಾ ಸ್ವರೂಪಗಳಲ್ಲಿ 200 ವಿಕೆಟ್‌ಗಳನ್ನು ಪೂರ್ಣಗೊಳಿಸಿದ್ದಾರೆ. ಪಾಕಿಸ್ತಾನ ವಿರುದ್ಧ ಎರಡನೇ ವಿಕೆಟ್ ಪಡೆದ ಕೂಡಲೇ ಅವರು ದೊಡ್ಡ ಸಾಧನೆ ಮಾಡಿದ್ದಾರೆ. ಪಾಂಡ್ಯ ಈಗ 91 ಏಕದಿನ ಪಂದ್ಯಗಳಲ್ಲಿ 89 ವಿಕೆಟ್‌ಗಳನ್ನು ಪಡೆದಿದ್ದಾರೆ. ಅದೇ ಸಮಯದಲ್ಲಿ, ಇಲ್ಲಿಯವರೆಗೆ, ಅವರ ಬ್ಯಾಟ್‌ನಿಂದ 50 ಓವರ್‌ಗಳ ಸ್ವರೂಪದಲ್ಲಿ 1805 ರನ್‌ಗಳು ಬಂದಿವೆ.

ಹಾಗೆಯೇ ಅಂತರರಾಷ್ಟ್ರೀಯ ಟಿ20 ಪಂದ್ಯದಲ್ಲಿ ಅವರು 94 ವಿಕೆಟ್‌ಗಳನ್ನು ಪಡೆದು 1812 ರನ್‌ಗಳನ್ನು ಗಳಿಸಿದ್ದಾರೆ. ಟೆಸ್ಟ್‌ನಲ್ಲಿ 17 ವಿಕೆಟ್‌ಗಳ ಜೊತೆಗೆ ಪಾಂಡ್ಯ 532 ರನ್‌ಗಳನ್ನು ಬಾರಿಸಿದ್ದಾರೆ. ಒಟ್ಟಾರೆಯಾಗಿ, ಹಾರ್ದಿಕ್ ಎಲ್ಲಾ ಸ್ವರೂಪಗಳಲ್ಲಿ 4 ಸಾವಿರಕ್ಕೂ ಹೆಚ್ಚು ರನ್ ಮತ್ತು 200 ವಿಕೆಟ್‌ಗಳನ್ನು ಹೊಂದಿದ್ದಾರೆ.

ಪಾಕಿಸ್ತಾನ ವಿರುದ್ಧ ಎರಡು ವಿಕೆಟ್ ಪಡೆಯುವ ಮೂಲಕ ಹಾರ್ದಿಕ್ ತಮ್ಮ ಸಹ ಬೌಲರ್ ಮೊಹಮ್ಮದ್ ಶಮಿ ಅವರನ್ನು ಒಂದು ವಿಷಯದಲ್ಲಿ ಹಿಂದಿಕ್ಕಿದ್ದಾರೆ. ಪಾಕಿಸ್ತಾನ ವಿರುದ್ಧದ ಪಂದ್ಯಕ್ಕೂ ಮುನ್ನ, ಶಮಿ ಮತ್ತು ಹಾರ್ದಿಕ್ ಇಬ್ಬರೂ ಐಸಿಸಿ ಸೀಮಿತ ಓವರ್‌ಗಳ ಟೂರ್ನಮೆಂಟ್‌ನಲ್ಲಿ ಒಂದು ತಂಡದ ವಿರುದ್ಧ ತಲಾ 12 ವಿಕೆಟ್‌ಗಳನ್ನು ಪಡೆದಿದ್ದರು.

ಆದರೆ ಎರಡು ವಿಕೆಟ್ ಪಡೆದ ನಂತರ ಹಾರ್ದಿಕ್ ಶಮಿಯನ್ನು ಈ ವಿಚಾರದಲ್ಲಿ ಹಿಂದಿಕ್ಕಿದ್ದಾರೆ. ಇದೀಗ ಹಾರ್ದಿಕ್ ಯಾವುದೇ ಒಂದು ತಂಡದ (ಪಾಕಿಸ್ತಾನ) ವಿರುದ್ಧ ಗರಿಷ್ಠ 14 ವಿಕೆಟ್‌ಗಳನ್ನು ಪಡೆದ ಭಾರತೀಯ ಬೌಲರ್ ಎನಿಸಿಕೊಂಡಿದ್ದಾರೆ. ಶಮಿ ನ್ಯೂಜಿಲೆಂಡ್ ವಿರುದ್ಧ 12 ವಿಕೆಟ್ ಕಬಳಿಸಿದ್ದರೆ, ರವೀಂದ್ರ ಜಡೇಜಾ ವೆಸ್ಟ್ ಇಂಡೀಸ್ ವಿರುದ್ಧ 11 ವಿಕೆಟ್ ಪಡೆದಿದ್ದಾರೆ. ಬುಮ್ರಾ ಅಫ್ಘಾನಿಸ್ತಾನ ವಿರುದ್ಧ 10 ವಿಕೆಟ್ ಪಡೆದಿದ್ದಾರೆ.



















