Harshal Patel: ಭರ್ಜರಿ ಬೌಲಿಂಗ್ ಮೂಲಕ ದಾಖಲೆ ಬರೆದ ಹರ್ಷಲ್ ಪಟೇಲ್

| Updated By: ಝಾಹಿರ್ ಯೂಸುಫ್

Updated on: Mar 31, 2022 | 2:58 PM

IPL 2022 RCB: ಆರ್​ಸಿಬಿ ಬೌಲರ್​ಗಳ ಈ ದಾಖಲೆಯ ಮೇಡನ್ ಓವರ್​ಗಳು ಮೂಡಿ ಬಂದಿರುವುದು ಕೆಕೆಆರ್​ ವಿರುದ್ದ ಎಂಬುದು ಮತ್ತೊಂದು ವಿಶೇಷ.

1 / 5
 ಐಪಿಎಲ್​ನ 6ನೇ ಪಂದ್ಯದಲ್ಲಿ ಆರ್​ಸಿಬಿ ವೇಗಿ ಹರ್ಷಲ್ ಪಟೇಲ್ ಭರ್ಜರಿ ದಾಖಲೆ ಬರೆದಿದ್ದಾರೆ. ಕೆಕೆಆರ್​ ವಿರುದ್ದದ ಈ ಪಂದ್ಯದಲ್ಲಿ ಹರ್ಷಲ್ ಪಟೇಲ್ 4 ಓವರ್​ಗಳಲ್ಲಿ 11 ರನ್​ ನೀಡಿ 2 ವಿಕೆಟ್ ಪಡೆದಿದ್ದರು.

2 / 5
ವಿಶೇಷ ಎಂದರೆ 12ನೇ ಓವರ್​ನಲ್ಲಿ ಬೌಲಿಂಗ್ ಆರಂಭಿಸಿದ್ದ ಪಟೇಲ್ ಆ ಓವರ್​ ಅನ್ನು ಮೇಡನ್ ಮಾಡಿದ್ದರು. ಅಲ್ಲದೆ 14ನೇ ಓವರ್​ ಅನ್ನು ಕೂಡ ಮೇಡನ್ ಮಾಡಿದ್ದರು. ಅಂದರೆ ಮೊದಲೆರಡು ಓವರ್​ಗಳನ್ನು ಮೇಡನ್ ಮಾಡುವ ಮೂಲಕ ಹರ್ಷಲ್ ಪಟೇಲ್ ವಿಶೇಷ ದಾಖಲೆ ಬರೆದರು.

3 / 5
 ಈ ಮೂಲಕ ಐಪಿಎಲ್​ನಲ್ಲಿ ಬ್ಯಾಕ್ ಟು ಬ್ಯಾಕ್ ಎರಡು ಮೇಡನ್ ಓವರ್​ ಮಾಡಿದ 2ನೇ ಬೌಲರ್ ಎಂಬ ದಾಖಲೆ ನಿರ್ಮಿಸಿದರು. ಅದು ಕೂಡ ಆರ್​ಸಿಬಿ ವೇಗಿ ಮೊಹಮ್ಮದ್ ಸಿರಾಜ್ ಅವರ ದಾಖಲೆಯನ್ನು ಸರಿಗಟ್ಟುವ ಮೂಲಕ ಎಂಬುದು ವಿಶೇಷ.

4 / 5
ಅಂದರೆ ಸಿರಾಜ್ 2020 ರಲ್ಲಿ ಬ್ಯಾಕ್ ಟು ಬ್ಯಾಕ್ ಎರಡು ಮೇಡನ್ ಓವರ್ ಮಾಡುವ ಮೂಲಕ ಐಪಿಎಲ್​ನಲ್ಲಿ ದಾಖಲೆ ಬರೆದಿದ್ದರು. ಇದೀಗ ಹರ್ಷಲ್ ಪಟೇಲ್ ಕೂಡ ಈ ದಾಖಲೆಯನ್ನು ಸರಿಗಟ್ಟಿದ್ದಾರೆ.

5 / 5
ಆರ್​ಸಿಬಿ ಬೌಲರ್​ಗಳ  ಈ ದಾಖಲೆಯ ಮೇಡನ್ ಓವರ್​ಗಳು ಮೂಡಿ ಬಂದಿರುವುದು ಕೆಕೆಆರ್​ ವಿರುದ್ದ ಎಂಬುದು ಮತ್ತೊಂದು ವಿಶೇಷ. 2020 ರಲ್ಲಿ ಸಿರಾಜ್ ಕೂಡ ಕೆಕೆಆರ್ ವಿರುದ್ದವೇ ಈ ದಾಖಲೆ ಬರೆದಿದ್ದರು. ಇದೀಗ ಹರ್ಷಲ್ ಪಟೇಲ್ ಕೂಡ ಕೆಕೆಆರ್ ವಿರುದ್ದವೇ ಈ ದಾಖಲೆ ನಿರ್ಮಿಸಿದ್ದಾರೆ.