AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ICC Womens T20 World Cup 2023: ಟಿ20 ವಿಶ್ವಕಪ್​ ಮುಡಿಗೇರಿಸಿಕೊಂಡ ಆಸ್ಟ್ರೇಲಿಯಾ

Australia Women vs South Africa Women, Final: ಪರಿಣಾಮ ಕೊನೆಯ 3 ಓವರ್​ಗಳಲ್ಲಿ ಸೌತ್ ಆಫ್ರಿಕಾ ತಂಡಕ್ಕೆ 43 ರನ್​ಗಳ ಅವಶ್ಯಕತೆಯಿತ್ತು.

TV9 Web
| Edited By: |

Updated on:Feb 26, 2023 | 10:24 PM

Share
ICC Womens T20 World Cup 2023 Final: ಕೇಪ್​ಟೌನ್​ನಲ್ಲಿ ನಡೆದ ಮಹಿಳಾ ಟಿ20 ವಿಶ್ವಕಪ್ ಫೈನಲ್​ ಪಂದ್ಯದಲ್ಲಿ ಸೌತ್ ಆಫ್ರಿಕಾ ತಂಡಕ್ಕೆ ಸೋಲುಣಿಸಿ ಆಸ್ಟ್ರೇಲಿಯಾ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಇದರೊಂದಿಗೆ ಟಿ20 ವಿಶ್ವಕಪ್​ನಲ್ಲಿ ಆಸೀಸ್ ಮಹಿಳಾ ತಂಡವು 6ನೇ ಬಾರಿ ಕಿರೀಟವನ್ನು ಮುಡಿಗೇರಿಸಿಕೊಂಡಂತಾಗಿದೆ.

1 / 6
ಇದಕ್ಕೂ ಮುನ್ನ ಈ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ನಾಯಕಿ ಮೆಗ್ ಲ್ಯಾನಿಂಗ್ ಬ್ಯಾಟಿಂಗ್ ಆಯ್ದುಕೊಂಡಿದ್ದರು. ಅದರಂತೆ ಇನಿಂಗ್ಸ್ ಆರಂಭಿಸಿದ ಆಸೀಸ್ ಬಳಗಕ್ಕೆ ಅಲಿಸ್ಸಾ ಹೀಲಿ ಹಾಗೂ ಬೆತ್ ಮೂನಿ ಉತ್ತಮ ಆರಂಭ ಒದಗಿಸಿದ್ದರು. ಮೊದಲ ವಿಕೆಟ್​ಗೆ ಬಿರುಸಿನ 36 ರನ್​ ಪೇರಿಸಿ ಹೀಲಿ (18) ಔಟಾದರು.

2 / 6
ಆದರೆ ಮತ್ತೊಂದೆಡೆ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ ಬೆತ್ ಮೂನಿ ಸೌತ್ ಆಫ್ರಿಕಾ ಬೌಲರ್​ಗಳನ್ನು ಮನಸೊ ಇಚ್ಛೆ ದಂಡಿಸಿದರು. ಪರಿಣಾಮ ಮೂನಿ ಬ್ಯಾಟ್​ನಿಂದ 1 ಸಿಕ್ಸ್ ಹಾಗೂ 9 ಫೋರ್​ಗಳು ಮೂಡಿಬಂತು. ಅಲ್ಲದೆ ಕೇವಲ 53 ಎಸೆತಗಳಲ್ಲಿ ಅಜೇಯ 74 ರನ್ ಬಾರಿಸಿದರು. ಅದರಂತೆ ಆಸ್ಟ್ರೇಲಿಯಾ ತಂಡವು 20 ಓವರ್​ಗಳಲ್ಲಿ 6 ವಿಕೆಟ್ ನಷ್ಟಕ್ಕೆ 156 ರನ್​ ಕಲೆಹಾಕಿತು.

3 / 6
157 ರನ್​ಗಳ ಟಾರ್ಗೆಟ್ ಪಡೆದ ಸೌತ್ ಆಫ್ರಿಕಾ ತಂಡವು ಉತ್ತಮ ಆರಂಭ ಪಡೆದಿರಲಿಲ್ಲ. ಆರಂಭಿಕ ಆಟಗಾರ್ತಿ ತಜ್ಮಿನ್ ಬ್ರಿಟ್ಸ್ (10) ಬೇಗನೆ ಔಟಾದರು. ಆ ಬಳಿಕ ಬಂದ ಮರಿಜಾನ್ನೆ ಕಪ್ (11) ಗಾರ್ಡ್ನರ್ ಎಸೆತದಲ್ಲಿ ವಿಕೆಟ್ ಒಪ್ಪಿಸಿದರು. ಇನ್ನು 4ನೇ ಕ್ರಮಾಂಕದಲ್ಲಿ ಆಡಿದ ನಾಯಕಿ ಸುನೆ ಲೂಸ್ (2) ರನೌಟ್​ಗೆ ಬಲಿಯಾದರು.

4 / 6
ಇದಾಗ್ಯೂ ಮತ್ತೊಂದೆಡೆ ಏಕಾಂಗಿಯಾಗಿ ಹೋರಾಟ ಮುಂದುವರೆಸಿದ ಆರಂಭಿಕ ಆಟಗಾರ್ತಿ ಲಾರಾ ವೊಲ್ವಾರ್ಡ್ಟ್ 48 ಎಸೆತಗಳಲ್ಲಿ 3 ಸಿಕ್ಸ್ ಹಾಗೂ 5 ಫೋರ್​ನೊಂದಿಗೆ 61 ರನ್​ ಚಚ್ಚಿದರು. ಈ ಹಂತದಲ್ಲಿ ದಾಳಿಗಿಳಿದ ಮೇಗನ್ ಶಟ್, ಲಾರಾ ವಿಕೆಟ್ ಪಡೆಯುವ ಮೂಲಕ ಆಸ್ಟ್ರೇಲಿಯಾ ತಂಡಕ್ಕೆ ಅವಶ್ಯಕ ಯಶಸ್ಸು ತಂದುಕೊಟ್ಟರು.

5 / 6
ಪರಿಣಾಮ ಕೊನೆಯ 3 ಓವರ್​ಗಳಲ್ಲಿ ಸೌತ್ ಆಫ್ರಿಕಾ ತಂಡಕ್ಕೆ 43 ರನ್​ಗಳ ಅವಶ್ಯಕತೆಯಿತ್ತು. ಈ ಹಂತದಲ್ಲಿ ಆಸ್ಟ್ರೇಲಿಯಾ ಬೌಲರ್​ಗಳು ಇಡೀ ಪಂದ್ಯದ ಮೇಲೆ ಹಿಡಿತ ಸಾಧಿಸಿದರು. ಅದರಂತೆ ಕೊನೆಯ 6 ಎಸೆತಗಳಲ್ಲಿ 27 ರನ್​ಗಳು ಬೇಕಿತ್ತು. ಆದರೆ ಫೈನಲ್ ಓವರ್ ಎಸೆದ ಆಶ್ಲೀ ಗಾರ್ಡ್ನರ್ ನೀಡಿದ್ದು ಕೇವಲ 7 ರನ್​ ಮಾತ್ರ. ಇದರೊಂದಿಗೆ ಆಸ್ಟ್ರೇಲಿಯಾ ತಂಡವು 19 ರನ್​ಗಳ ಭರ್ಜರಿ ಜಯ ಸಾಧಿಸಿತು. ಈ ಮೂಲಕ ಆಸೀಸ್ ತಂಡವು ಮಹಿಳಾ ಟಿ20 ವಿಶ್ವಕಪ್​ನಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದೆ.

6 / 6

Published On - 9:35 pm, Sun, 26 February 23

ಸದನದಲ್ಲಿ ಪೆನ್​ಡ್ರೈವ್ ತೋರಿಸಿದ ಆರ್​ ಅಶೋಕ್: ಯಾವ ಮ್ಯಾಟರ್ ಗೊತ್ತಾ?

ನಿವೃತ್ತಿ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ಕೆಎಲ್ ರಾಹುಲ್

‘ದರ್ಶನ್ ‘ಲ್ಯಾಂಡ್​ಲಾರ್ಡ್’ ನೋಡಿದ್ದರೆ ಏನೆನ್ನುತ್ತಿದ್ದರು?’

ಅಜಿತ್ ಪವಾರ್ ಅಂತ್ಯಕ್ರಿಯೆಗೆ ಸೇರಿದ್ದ ಜನಸಾಗರ ನೋಡಿ!

ಈ ವರ್ಷ ನಟಿ ರಚಿತಾ ರಾಮ್ ಮದುವೆ: ವಿಷಯ ಖಚಿತಪಡಿಸಿದ ಡಿಂಪಲ್ ಕ್ವೀನ್

ಸಚಿವ ಸ್ಥಾನಕ್ಕೆ ರಾಜೀನಾಮೆ ಸುದ್ದಿ: ಈ ಬಗ್ಗೆ ಕೆಜೆ ಜಾರ್ಜ್ ಹೇಳಿದ್ದೇನು?

ಅಜಿತ್ ಪವಾರ್ ಅಂತ್ಯಕ್ರಿಯೆ; ಮಕ್ಕಳಿಂದ ಅಪ್ಪನ ಚಿತೆಗೆ ಅಗ್ನಿಸ್ಪರ್ಶ

ಲಕ್ಕುಂಡಿಯಲ್ಲಿ 3 ತಲೆಯ ನಾಗರಕಲ್ಲು ಪ್ರಾಚ್ಯಾವಶೇಷ ಪತ್ತೆ!

ಜಿದ್ದಿಗೆ ಬಿದ್ದ ಸಿದ್ದರಾಮಯ್ಯ-ಡಿಕೆಶಿ:ಅಪೆಕ್ಸ್ ಬ್ಯಾಂಕ್ ಚುನಾವಣೆ ರದ್ದು!

4 ಲಕ್ಷ ರೂ. ತಲುಪಿದ 1 ಕೆಜಿ ಬೆಳ್ಳಿ ಬೆಲೆ! ಈಗ ಹೂಡಿಕೆ ಮಾಡಿದ್ರೆ ಹೇಗೆ?