15 ಓವರ್ ಮುಕ್ತಾಯದ ವೇಳೆಗೆ 3 ವಿಕೆಟ್ ನಷ್ಟಕ್ಕೆ 103 ರನ್ ಕಲೆಹಾಕಿದ್ದ ಟೀಮ್ ಇಂಡಿಯಾಗೆ ಕೊನೆಯ 5 ಓವರ್ಗಳಲ್ಲಿ 47 ರನ್ ಬೇಕಿತ್ತು. ಈ ಹಂತದಲ್ಲಿ ರಿಚಾ ಘೋಷ್ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದರು. ಪರಿಣಾಮ ಕೊನೆಯ 18 ಎಸೆತಗಳಲ್ಲಿ 28 ರನ್ಗಳು ಬೇಕಿತ್ತು. ಅಲ್ಲದೆ 18ನೇ ಓವರ್ನಲ್ಲಿ ಹ್ಯಾಟ್ರಿಕ್ ಫೋರ್ ಬಾರಿಸುವ ಮೂಲಕ ರಿಚಾ ಘೋಷ್ ರನ್-ಬಾಲ್ ಅಂತರವನ್ನು ತಗ್ಗಿಸಿದರು. ಅದರಂತೆ ಕೊನೆಯ 2 ಓವರ್ಗಳಲ್ಲಿ ಟೀಮ್ ಇಂಡಿಯಾಗೆ ಗೆಲ್ಲಲು ಕೇವಲ 14 ರನ್ಗಳ ಅವಶ್ಯಕತೆಯಿತ್ತು.